ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

Advt_Headding_Middle

 

ಸದಸ್ಯರಿಗೆ ಶೇ.8  ಡಿವಿಡೆಂಟ್ ವಿತರಣೆ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ೨೦೨೦-೨೧ನೇ ಸಾಲಿನ ಮಹಾಸಭೆಯು ನ.೭ರಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮರವರ ಅಧ್ಯಕ್ಷತೆಯಲ್ಲಿ ಮಡಪ್ಪಾಡಿ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ವರದಿ ಮಂಡಿಸಿದರು. ಸಭಾಧ್ಯಕ್ಷರು ಸಭೆಯ ಕಾರ್ಯಕಲಾಪಗಳನ್ನು ನಡೆಸಿದರು. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ.೮ ಡಿವಿಡೆಂಟ್ ನೀಡುವ ಬಗ್ಗೆ ಅಧ್ಯಕ್ಷರು ಘೋಷಿಸಿದರು.
ಸಭೆಯಲ್ಲಿ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ನಿಶ್ಮಿತಾ ಕಾಯರ, ಸಾತ್ವಿಕಾ ಪಾಲ್ತಾಡು, ಚಂದನಾ ಕೆ., ದೀಪ್ತಿ ಎಂ.ಎನ್., ಹರ್ಷಿಣಿ ಕೆ.ಎಂ., ರಕ್ಷಾ ಡಿ.ಕೆ, ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ಹನಿ ಗೋಳ್ಯಾಡಿ, ಪ್ರತಿಕ್ಷಾ ಕೆ.ಕೆ., ಕನ್ನಿಕಾ ಅಂಬೆಕಲ್ಲು, ದಿವ್ಯಾ ಕೇವಳ, ನೇಹಾ ಚಿದ್ಗಲ್, ಭವಿಷ್ ಬೆಳ್ಯವರ, ಸುಮಾನ್ ಕುತ್ಯಾಳ, ಗ್ರೀಷ್ಮಾ ಡಿ.ಕೆ., ಕಿರಣ್ ರಾಜ್ ಅಂಬೆಕಲ್ಲು, ಪೂರ್ವಿಕ್ ಕೆ.ಜಿ., ಚಿನ್ಮಯಿ ಎ.ಎಸ್., ಬಿಪಿನ್ ಮಡಪ್ಪಾಡಿಯವರಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಅಲ್ಲದೇ ಕೊರೋನಾ ಸಮಯದಲ್ಲಿ ದುಡಿದ ಗ್ರಾಮದ ಆಶಾ ಕಾರ್ಯಕರ್ತೆಯರಾದ ಉಮಾವತಿ ಬಲ್ಕಾಜೆ, ವೀಣಾ ಚಿರೆಕಲ್ಲು, ಅಂಗನವಡಿ ಕಾರ್ಯಕರ್ತೆಯರಾದ ವಿಮಲ ಕೆ., ತಾರ ಕೇವಳ ಹಾಗೂ ಗ್ರಾಮದ ಆರೋಗ್ಯ ಸಹಾಯಕಿ ಶ್ರೀಮತಿ ಜಲಜಾಕ್ಷಿಯವರನ್ನು ಗೌರವಿಸಲಾಯಿತು. ಹಾಗೂ ಕ್ಯಾಂಪ್ರೋ ಸಂಸ್ಥೆಗೆ ಅತೀ ಹೆಚ್ಚು ಅಡಿಕೆ ಪೂರೈಕೆ ಮಾಡಿದ ದೊಡ್ಡ ರೈತರಾದ ಯತೀಂದ್ರನಾಥ ಪಾಲ್ತಾಡು, ನಿತ್ಯಾನಂದ ಮುಂಡೋಡಿ, ಮಿತ್ರದೇವ ಮಡಪ್ಪಾಡಿ ಹಾಗೂ ಸಣ್ಣ ರೈತರಾದ ಹಮೀದ್, ಹೊನ್ನಪ್ಪ ಎನ್.ಟಿ., ಪಿ.ಸಿ.ಜಯರಾಮ ಇವರನ್ನು ಸಂಘದ ವತಿಯಿಂದ ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿದ ಗೌರವಿಸಲಾಯಿತು. ನಿರ್ದೇಶಕರಾದ ಸೋಮಶೇಖರ ಕೇವಳ ವಿದ್ಯಾರ್ಥಿಗಳ, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ, ದೊಡ್ಡ ರೈತರ ಮತ್ತು ಸಣ್ಣ ರೈತರ ಪಟ್ಟಿ ವಾಚಿಸಿದರು.
ಮಹಾಸಭೆಯಲ್ಲಿ ವರದಿ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ಪ್ರಭಾಕರ ಕೇವಳ, ಅಜಯ್ ವಾಲ್ತಾಜೆ, ರಾಜಕುಮಾರ ಪೂಂಬಾಡಿ, ಶ್ರೀಮತಿ ಪ್ರವೀಣ ಯತೀಂದ್ರನಾಥ್, ಶ್ರೀಮತಿ ತಾರಾ ಜೆ.ಸಿ., ಶ್ರೀಮತಿ ಕುಂಞಕ್ಕ ಸಿ.ಯಚ್., ವಿಶ್ವನಾಥ ಸಿ.ಯಚ್., ಪೇರಪ್ಪ ಮಲೆ, ಶೇಖರ ಕಜೆ ಉಪಸ್ಥಿತಿತರಿದ್ದರು. ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮರವರು ಸ್ವಾಗತಿಸಿ, ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ ವಂದಿಸಿದರು. ಪುಷ್ಪಾ ಪ್ರಾರ್ಥಿಸಿದರು. ಸೊಸೈಟಿ ಸಿಬ್ಬಂದಿಗಳು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.