ಸುಳ್ಯ ಡ್ಯಾನ್ಸಿಂಗ್ ಸ್ಟಾರ್ ನೃತ್ಯ ಸ್ಪರ್ಧೆ

Advt_Headding_Middle

ಜೂನಿಯರ್ ವಿಭಾಗದಲ್ಲಿ ಎನ್.ಸಿ.ಸ್ವರ ವಿನ್ನರ್

ಸೀನಿಯರ್ ವಿಭಾಗದಲ್ಲಿ ಸನಿಹ ಶೆಟ್ಟಿ ವಿನ್ನರ್

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಂಗಮಯೂರಿ ಕಲಾಶಾಲೆ ಸುದ್ದಿ ಸಮೂಹ ಸಂಸ್ಥೆ ಹಾಗೂ ಸಿಗ್ನೇಚರ್ ಡ್ಯಾನ್ಸ್ ಕಂಪೆನಿ ಮೈಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸುಳ್ಯ ಡ್ಯಾನ್ಸಿಂಗ್ ಸ್ಟಾರ್ ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನ.7ರಂದು ರಾತ್ರಿ ನಡೆಯಿತು.

ಸುದ್ದಿ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

 ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿಜೇತ ರಾಹುಲ್ ಎಸ್.ರಾವ್, ಸುದ್ದಿ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಸುದ್ದಿ ವೆಬ್‌ಸೈಟ್ ಮತ್ತು ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ಸಿಗ್ನೇಚರ್ ಡ್ಯಾನ್ಸ್ ಕಂಪೆನಿಯ ವಿನೋದ್ ಕರ್ಕೆರ, ತೀರ್ಪುಗಾರರಾದ ಪ್ರದೀಪ್ ಕುಶಾಲನಗರ, ಅಭಿಷೇಕ್ ಮಡಿಕೇರಿ, ಗಾಡ್ವಿನ್ ದಿನಕರ್ ಪುತ್ತೂರು, ರಂಗಮಯೂರಿಯ ಪೋಷಕ ಭವಾನಿಶಂಕರ ಅಡ್ತಲೆ, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿ, ಡ್ಯಾನ್ಸಿಂಗ್ ಸ್ಟಾರ್ ವಿಜೇತರ ಪಟ್ಟಿ ವಾಚಿಸಿದರು.

ಡ್ಯಾನ್ಸಿಂಗ್ ಸ್ಟಾರ್ ವಿಜೇತರು :
ಜೂನಿಯರ್ ವಿಭಾಗದಲ್ಲಿ ಸ್ವರ ಎನ್.ಸಿ.ಪ್ರಥಮ, ಹಾರ್ದಿಕಾ ಕೆರೆಕೋಡಿ ದ್ವಿತೀಯ, ಸೋನಾ ಅಡ್ಕಾರು ತೃತೀಯ ಬಹುಮಾನ ಪಡೆದುಕೊಂಡರೆ, ಸೀನಿಯರ್ ವಿಭಾಗದಲ್ಲಿ ಸನಿಹ ಶೆಟ್ಟಿ ಪ್ರಥಮ, ಇಂಚರ ಪಿ.ಆರ್.ದ್ವಿತೀಯ, ಸಿಂಚನ ಪುತ್ತಿಲ ತೃತೀಯ ಬಹುಮಾನ ಪಡೆದರು.

 

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.