ಕೊಲ್ಲಮೊಗ್ರು: ಗೋವಿಂದ ನಗರ ಪಟ್ಟೆಮಜಲು ಕಿರುಸೇತುವೆ ನ್ಯಾಯಾಧೀಶರಿಂದ ವೀಕ್ಷಣೆ

Advt_Headding_Middle

 

ಮಳೆಯಿಂದಾಗಿ ಕೊಲ್ಲಮೊಗ್ರು ಗ್ರಾಮದ ಗೋವಿಂದ ನಗರದಿಂದ ಪಟ್ಟೆ ಮಜಲು ಸಂಪರ್ಕಿಸುವ ಕಿರು ಸೇತುವೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿ ಸೇತುವೆಯ ಒಂದು ಭಾಗದ ಪಿಲ್ಲರ್ ಗೋಡೆ ಹಾನಿಗೊಂಡಿದ್ದು ಮುಂದಿನ ದಿನಗಳಲ್ಲಿ ಕುಸಿಯುವ ಭೀತಿಯಲ್ಲಿದೆ.

ನ.7 ರಂದು ಕೊಲ್ಲಮೊಗ್ರ ದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭ ಸುಳ್ಯದ ಕಿರಿಯ ಸಿವಿಲ್ ನ್ಯಾಯಾಧೀಶ ಯಶವಂತ ಕುಮಾರ್ ರವರ ಬಳಿ ಈ ಭಾಗದ ನಿವಾಸಿ ಕೃಷ್ಣಮೂರ್ತಿ ಭಟ್ ರವರು ಸೇತುವೆ ದುರಸ್ತಿಗೊಂಡಿರುವ ಬಗ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡುವಂತೆ ಕೋರಿಕೊಂಡರು.


ಅವರ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು ಹಾನಿಗೊಂಡಿರುವ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸಂದರ್ಭದಲ್ಲಿ ವೀಕ್ಷಣೆಗೆ ತೆರಳಿದ್ದ ಸ್ಥಳೀಯ ಗ್ರಾಪಂ ಅಧ್ಯಕ್ಷ, ಹಾಗೂ ಪಿ.ಡಿ.ಓ. ರವರ ಬಳಿ ಸೇತುವೆ ದುರಸ್ತಿ ಗೊಳಿಸಿ ಕೊಡುವ ಬಗ್ಗೆ ಹೇಳಿದರು.


ಅದಕ್ಕೆ ಉತ್ತರಿಸಿದ ಅಧ್ಯಕ್ಷರು ಪಂಚಾಯತ್ ನಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಗೆ ಹಣವಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಯಂ. ವೆಂಕಪ್ಪ ಗೌಡ, ಪಿ.ಡಿ. ಓ. ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.