ಕಿದು ಸಿಪಿಸಿಆರ್‌ಐ ಗುತ್ತಿಗೆ ನವೀಕರಣ ಶೀಘ್ರ ಪರಿಹರಿಸಿ

Advt_Headding_Middle

ವೈಜ್ಞಾನಿಕ, ಸಹಾಯಕ ಸಿಬ್ಬಂದಿಗಳ ಮರು ನೇಮಿಸಲು ಆಗ್ರಹ

ನವೀಕರಿಸಿ ಉಳಿಸಿಕೊಳ್ಳದಿದ್ದರೆ ಉಗ್ರ ಹೋರಾಟಕ್ಕೆ ಬದ್ದ

ಸುಬ್ರಹ್ಮಣ್ಯ: ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜನಪ್ರತಿನಿಧಿಗಳ ಹೇಳಿಕೆ

“ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕಿದು ಎಂಬಲ್ಲಿರುವ ಅಂತರಾಷ್ಟ್ರೀಯ ತೆಂಗು ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ)ವನ್ನು ಇಲ್ಲೇ ಉಳಿಸಲು ಎಲ್ಲಾ ಪ್ರಯತ್ನಗಳು ನಡೆಸಲಾಗುತ್ತಿದೆ ಎಂದು ಹೇಳಲಾದರೂ ಇಲ್ಲಿಗೆ ವೈಜ್ಞಾನಿಕ ಹಾಗೂ ಸಹಾಯಕ ಸಿಬ್ಬಂದಿಗಳನ್ನು ಬೇರೆಡೆ ವರ್ಗಾಯಿಸಲಾಗುತ್ತಿದೆ. ಉನ್ನತ ಮಟ್ಟದ ಅಧಿಕಾರಿಗಳು ಒಳಗಿಂದೊಳಗೆ ಸ್ಥಳಾಂತರಿಸಲು ಹುನ್ನಾರ ನಡೆಸಿದ್ದಾರೆ. ಒಂದೊಮ್ಮೆ ಇದನ್ನು ಇಲ್ಲೇ ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾದಿತು” ಎಂದು ಬಿಜೆಪಿ ಮುಖಂಡ ವಾಡ್ಯಪ್ಪ ಗೌಡ ಎರ್ಮಾಯಿಲ್ ಆಗ್ರಹಿಸಿದರು. ಅವರು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದರು.


“ಈ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಗುತ್ತಿಗೆ ನವೀಕರಣ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ, ಇಲ್ಲಿಗೆ ವೈಜ್ಞಾನಿಕ ಹಾಗೂ ಸಹಾಯಕ ಸಿಬ್ಬಂದಿಗಳನ್ನು ಮರುನೇಮಿಸಿ ಈ ಸಂಸ್ಥೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ರೈತರ ಹಿತ ಕಾಯುವ ಸಂಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ” ಎಂದರು.

“ರೈತರಿಗೆ ಅತ್ಯಂತ ಅವಶ್ಯಕವಾಗಿರುವ ಸಿಪಿಸಿಆರ್‌ಐನ್ನು ಈ ಹಿಂದೆ ಕೆಲ ಅಧಿಕಾರಿಗಳು ಇಲ್ಲಿಂದ ತೆರವಿಗೆ ಯತ್ನಿಸಿದ್ದರು, ಆದರೆ ಇಲ್ಲಿನ ಜನತೆಯ ಒತ್ತಡ ಹಾಗೂ ನಾವು ಸಂಬಂಧಿಸಿದ ಜನಪ್ರತಿನಿಧಿಗಳು, ಸಚಿವರಿಗೆ ಸಲ್ಲಿಸಿದ ಮನವಿಯಿಂದ ಇದೀಗ ತಾತ್ಕಾಲಿಕವಾಗಿ ತೆರವು ಕಾರ್ಯ ನಿಂತಿದೆ. ಅರಣ್ಯ ಇಲಾಖೆಯಿಂದ ಗುತ್ತಿಗೆ ಪಡೆದಿದ್ದ ಈ ಭೂಮಿಯ ಗುತ್ತಿಗೆ ಅವಧಿ 2000ನೇ ಇಸವಿಗೆ ಮುಗಿದಿದ್ದು, ಬಳಿಕ ನವೀಕರಣವನ್ನು ಸಿಪಿಸಿಆರ್‌ಐ ಸಂಸ್ಥೆ ಬಾಕಿ ಉಳಿಸಿದ ಹಿನ್ನಲೆಯಲ್ಲಿ ಇಲ್ಲಿನ ಅಭಿವೃದ್ಧಿಗೆ ತೊಂದರೆಯಾಗಿದೆ”ಎಂದು ದೂರಿದರು. ಇಲ್ಲಿನ ಸಂಸ್ಥೆಯನ್ನು ಆಂಧ್ರಪ್ರದೇಶದ ಸಮಲಕೋಟದಲ್ಲಿ ನೂತನ ಸಂಸ್ಥೆಯನ್ನು ಸ್ಥಾಪಿಸಲು ಅಧಿಕಾರಿಗಳು ತಯಾರಿ ನಡೆಸಿದ್ದರು. ಈ ಕಾರಣದಿಂದ ಇಲ್ಲಿನ ವೈಜ್ಞಾನಿಕ ಹುದ್ದೆಯನ್ನು ತೆರವುಗೊಳಿಸಲಾಗಿದೆ. ಅಂದು ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದಿಂದ, ಗ್ರಾಮಸ್ಥರ ಹೋರಾಟದ ಫಲವಾಗಿ ಈ ಎಲ್ಲಾ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ನೀಡಿದ್ದರು. ಆದರೆ ಇನ್ನೂ ಈ ಗುತ್ತಿಗೆಯ ಬಾಕಿ ಹಣವನ್ನು ಸಂಸ್ಥೆಯು ಪಾವತಿಸದ ಕಾರಣ ರೈತರು, ಗ್ರಾಮಸ್ಥರು, ಕಾರ್ಮಿಕರು ಈ ಸಂಸ್ಥೆ ಅರಣ್ಯ ಇಲಾಖೆಯ ಪಾಲಾಗುವ ಆತಂಕ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯನ್ನು ಇಲ್ಲಿಯೇ ಉಳಿಸಿ ಕೃಷಿ ಪೂರಕ ಚಟುವಟಿಕೆ, ಕಾರ್ಯಕ್ರಮ ನಡೆಸುವಂತೆ, ಇಲ್ಲಿನ ಕಾರ್ಮಿಕರ ನಿರುದ್ಯೋಗ ತಪ್ಪಿಸುವಂತೆ ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಂಜೀವ ಮಠಂದೂರು ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ, ಅವರು ಪೂರಕ ಭರವಸೆ ನೀಡಿದ್ದಾರೆ ಎಂದರು.

ಇದನ್ನೇ ಆಶ್ರಯಿಸಿ ತಾತ್ಕಾಲಿಕವಾಗಿರುವ ದುಡಿಯುವ ಕಾರ್ಮಿಕರು ಹಲವು ಮಂದಿ ಇದ್ದಾರೆ ಅವರೆಲ್ಲಾ ಆತಂಕದಿಂದಿದ್ದಾರೆ ಎಂದ ಅವರು ಸಮಸ್ಯೆ ಬಗೆಹರಿಯದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಜಿ.ಪಂ. ವಲಯ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ನಡುತೋಟ , ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ದಾಮೋದರ ಗುಂಡ್ಯ, ಶಿವರಾಮ ನೆಕ್ರಾಜೆ, ಸರೋಜಿನಿ ಜಯಪ್ರಕಾಶ್, ಮುರಳೀಧರ ಎರ್ಮಾಯಿಲ್, ಯಶವಂತ್, ಪ್ರದೀಪ್ ಸಣ್ಣಾರ, ದಿನೇಶ್, ರವಿಚಂದ್ರ, ಯುಪ್ರಿತ್, ಜಯರಾಜ್, ನೇಮಿಚಂದ್ರ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.