ಜಯನಗರ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟನೆ

Advt_Headding_Middle

 

ಸುಳ್ಯ ಜಯನಗರ 19ನೇ ವಾರ್ಡಿನಲ್ಲಿ ಶಾಸಕರ ಅನುದಾನದಿಂದ ನಿರ್ಮಿಸಲಾದ ನೂತನ 353 ಮೀಟರ್ ಉದ್ದದ ಕಾಂಕ್ರೀಟಿಕರಣಗೊಳಿಸಿದ ರಸ್ತೆಯನ್ನು ನ.11ರಂದು ಸಾಂಕೇತಿಕವಾಗಿ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಸಂಚರಿಸಲು ಅನುವು ಮಾಡಿಕೊಡಲಾಯಿತು.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಸ್ತೆ ಉದ್ಘಾಟನಾ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಯಿತು. ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ನಗರ ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಕ್,ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಊರಿನ ಮುಖಂಡರುಗಳಾದ ರಾಧಾಕೃಷ್ಣ ನಾಯಕ್, ಮಂಜುನಾಥ್ ಬಳ್ಳಾರಿ, ಸುರೇಂದ್ರ ಕಾಮತ್, ಜಗನ್ನಾಥ್, ಶಂಕರ ಪಾಟಾಳಿ, ಸೂರಜ್, ಅಬ್ದುಲ್ ರಹಿಮಾನ್ ಮುಟ್ಟತ್ತೋಡಿ, ನವಾಜ್, ನವೀನ ಮಚಾದೋ, ಮಹಾಲಿಂಗ ಪಾಠಾಳಿ, ಅಬ್ಬಾಸ್ ಪಿ., ಶಫೀಕ್,ಚಾಲ್ಸ್ ಡಿಸೋಜಾ, ಮಹಮ್ಮದ್ ಕುಂಞಿ ಬೆಟ್ಟಂಪಾಡಿ, ಅಬ್ದುಲ್ ರಜಾಕ್(ಜಜ್ಜ ), ಬಶೀರ್ ಸಕಾಫಿ,ಮಿನಾಜ್ ಅಂಜಿಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.