‌ಅಮರಪಡ್ನೂರು: ಕಲ್ಲು ಮಲೆ ಕಾಲನಿ ಸಂಪರ್ಕ ‌ರಸ್ತೆ ನಿರ್ಮಾಣಕ್ಕೆ ಕಾರು ಅಡ್ಡ ನಿಲ್ಲಿಸಿ ಅಡ್ಡಿ

Advt_Headding_Middle

 

ಫಲಾನುಭವಿಗಳಿಂದ‌ ಅಧಿಕಾರಿಗಳಿಗೆ ದೂರು

ಒಪ್ಪಿಕೊಂಡಂತೆ ಕೆಲಸ ಮಾಡುವುದಾದರೆ ನನ್ನಿಂದ ಅಭ್ಯಂತರವಿಲ್ಲ – ನಾರಾಯಣ ಆಚಾರ್ಯ

ಅಮರ ಪಡ್ನೂರು ಗ್ರಾಮದ ಕಲ್ಲು ಮಲೆ ಪರಿಶಿಷ್ಟ ಜಾತಿ ಕಾಲನಿಗೆ ಸಂಪರ್ಕ ಕಲ್ಪಿಸುವ ಕಾಲುದಾರಿಯನ್ನು ಅಗಲೀಕರಣಗೊಳಿಸಿ ರಸ್ತೆ ನಿರ್ಮಾಣಕ್ಕೆ ಕೋರಿ ಗೋಪಾಲಕೃಷ್ಣ ಆಚಾರ್ಯ ಕಲ್ಲುಮಲೆ ಯವರು ಅಮರಮುಡ್ನೂರು ವಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮನವಿಯನ್ನು ಸಲ್ಲಿಸಿದ್ದರು.

ಈ ಸಂದರ್ಭ ಖಾಸಗಿ ಜಾಗದ ಹಕ್ಕುದಾರರಾದ ನಾರಾಯಣ ಆಚಾರ್ಯರವರನ್ನು ಕರೆದು ಮಾತುಕತೆ ನಡೆಸಿದ ಜಿಲ್ಲಾಧಿಕಾರಿಯವರು ತಹಶಿಲ್ದಾರರವರಿಗೆ ಸ್ಥಳ ಪರಿಶೀಲಿಸುವಂತೆ ಸೂಚಿಸಿದರು. ತಹಶಿಲ್ದಾರರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಖಾಸಗಿ ಜಾಗದ ಮಾಲಕ ನಾರಾಯಣ ಆಚಾರ್ಯ ರವರ ಜತೆ ಮಾತುಕತೆ ನಡೆಸಿದ ಸಂದರ್ಭ ರಸ್ತೆಗೆ 8 ಅಡಿ ಜಾಗ ಬಿಟ್ಟುಕೊಡುವುದಾಗಿ ಅವರು ಒಪ್ಪಿಕೊಂಡಿದ್ದರು.

ಅದರಂತೆ ನ. 11ರಂದು ದಲಿತ ಸಮಿತಿಯ ಸರಸ್ವತಿ ಬೊಳಿಯ ಮಜಲು ರವರು ಹಾಗೂ ಕಾಲೋನಿಯ ಫಲಾನುಭವಿಗಳು ರಸ್ತೆ ನಿರ್ಮಿಸಲು ಜೆಸಿಬಿ ಕೊಂಡು ಹೋದ ಸಂದರ್ಭದಲ್ಲಿ ಮತ್ತೆ ನಾರಾಯಣ ಆಚಾರ್ಯರು ಕೆಲಸ ಆರಂಭಿಸುವ ಮುಂಚೆಯೇ ತಮ್ಮ ಓಮ್ನಿ ಕಾರನ್ನು ಅಡ್ಡ ನಿಲ್ಲಿಸಿ ಅಡ್ಡಿಪಡಿಸಿದರು ಎಂದು‌ ಸರಸ್ವತಿ ಬೊಳಿಯಮಜಲು ರವರು ಸುಳ್ಯ ಪೋಲಿಸರಿಗೆ ದೂರು ನೀಡಿದರು.

 ಸ್ಥಳಕ್ಕೆ ‌ಪೋಲಿಸರು ಬಂದು ಮಾತುಕತೆ ನಡೆಸಿ‌ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಂದು ತಿಳಿದು ಬಂದಿದೆ. ಪ್ರಕರಣದ ಬಗ್ಗೆ ಸುಳ್ಯ ‌ತಹಶೀಲ್ದಾರ್ ರವರಿಗೆ ಕಾಲನಿ ನಿವಾಸಿಗಳು ದೂರು ನೀಡಿರುತ್ತಾರೆ.

ನಾರಾಯಣ ಆಚಾರ್ಯ ‌ಪ್ರತಿಕ್ರಿಯೆ:

“ನನ್ನ ಜಾಗದ ಬದಿ ಕಾಲುದಾರಿ ಇದ್ದು ಅದನ್ನು ರಸ್ತೆ ಮಾಡಲು 8 ಅಡಿ ಅಗಲಗೊಳಿಸಿ ರಸ್ತೆ ನಿರ್ಮಿಸಲು ನಾನು ಒಪ್ಪಿಕೊಂಡಿರುತ್ತೇನೆ. ಆದರೆ ರಸ್ತೆ ನಿರ್ಮಿಸುವುದಕ್ಕೆ ‌ಮೊದಲು ನನ್ನ ಜಾಗದ ಬದಿ ಕಲ್ಲು ಕಟ್ಟೆ ನಿರ್ಮಿಸಿಕೊಡಬೇಕು. ರಸ್ತೆ ‌ನಿರ್ಮಿಸುವ ಸಂದರ್ಭದಲ್ಲಿ ಕೃಷಿ ಬೆಳೆಗಳಿಗೆ ಹಾಗೂ ಕಟ್ಟಡ ಇನ್ನಿತರ ವಸ್ತುಗಳಿಗೆ ಹಾನಿಯಾಗಬಾರದು‌ ಎಂಬ ಷರತ್ತಿನ ಮೇರೆಗೆ ಒಪ್ಪಿಗೆ ನೀಡಿದ್ದೇನೆ. ಆದರೆ ಇದೀಗ ಅವರು ತಹಶಿಲ್ದಾರರ ಸಮ್ಮುಖದಲ್ಲಿ ‌ಒಪ್ಪಿಕೊಂಡಿರುವ ಹಾಗೆ ‌ಯಾವುದೆ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಜೆಸಿಬಿ ತಂದು ‌ಕೆಲಸ ಆರಂಭಿಸಿರುವುದು ಸರಿಯಲ್ಲ. ಇದರಿಂದ ನನ್ನ ಕೃಷಿಗೆ ಮತ್ತು‌ ಕಟ್ಟಡಕ್ಕೆ‌ ಹಾನಿಯಾಗುವುದು. ಅದಕ್ಕೆ ನಾನು‌ ನನ್ನ ‌ಜಾಗದಲ್ಲಿ‌ ಕಾರನ್ನು‌ ಅಡ್ಡಲಾಗಿ ‌ನಿಲ್ಲಿಸಿದ್ದೇನೆ.
ಕೆಲಸ ಆರಂಭಿಸುವ ಮುಂಚಿತವಾಗಿ ಅವರು ತಹಶಿಲ್ದಾರರ ‌ಸಮ್ಮುಖದಲ್ಲಿ ಒಪ್ಪಿದಂತೆ ಕೆಲಸ ಮಾಡುವುದಾದರೆ ನನ್ನಿಂದ ಅಭ್ಯಂತರವಿಲ್ಲ‌” ಎಂದು‌‌ ಸುದ್ದಿಗೆ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.