ಸಂಪಾಜೆ ಸಂಜೀವಿನಿ ಒಕ್ಕೂಟದಿಂದ ಟೈಲರಿಂಗ್ ಘಟಕ ಉದ್ಘಾಟನೆ ಮತ್ತು ಉಪ್ಪಿನಕಾಯಿ ಮಾರುಕಟ್ಟೆಗೆ ಬಿಡುಗಡೆ

Advt_Headding_Middle

 

ಸಂಜೀವಿನಿ ಒಕ್ಕೂಟದ ಸಂಪಾಜೆ ಇದರ ವತಿಯಿಂದ ಟೈಲರಿಂಗ್ ಘಟಕ ಮತ್ತು ಸ್ವ ಉದ್ಯೋಗ ದಿಂದ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಇಂದು ಕಲ್ಲುಗುಂಡಿ ಬಂಗ್ಲೆ ಗುಡ್ಡೆ ಸಂಜೀವಿನಿ ಕಟ್ಟಡದಲ್ಲಿ ನಡೆಯಿತು.

ಪ್ರಾ.ವ್ಯ.ಸೇ. ಸ. ಬ್ಯಾಂಕ್ ನಿ. ಇದರ ಅಧ್ಯಕ್ಷ ಸೋಮಶೇಖರ್ ಕ್ಯೊಂಗಾಜೆಯವರು ಟೈಲರಿಂಗ್ ಘಟಕ ವನ್ನು ಉದ್ಘಾಟಿಸಿ ಒಕ್ಕೂಟದ ಸರ್ವಸದಸ್ಯರಿಗೆ ಶುಭಹಾರೈಸಿದರು.

ಕಾಂತಿ ಮೋಹನ್ ಸಂಘ ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದರ್ಭದಲ್ಲಿ ಕಲ್ಲುಗುಂಡಿ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಲ್.ಆರ್.ಎಂ.ಎನ್. ಮೇಲ್ವಿಚಾರಕರಾದ ಮಹೇಶ್, ಸಂಪಾಜೆ ಲಯನ್ಸ್ ಕ್ಲಬ್ ಅದ್ಯಕ್ಷರಾದ ಟೀನಾಚರಣ್, ಕಲ್ಲುಗುಂಡಿ ಸಂಪಾಜೆ ವರ್ತಕರ ಸಂಘದ ಅಧ್ಯಕ್ಷರಾದ ಯು.ಬಿ. ಚಕ್ರಪಾಣಿ, ಸಜ್ಜನ ಪ್ರತಿಷ್ಠಾನ ಸಂಸ್ಥೆಯ ರಹೀಂ ಬೀಜದಕಟ್ಟೆ, ಪಾ.ವ್ಯ.ಸೇ.ಸ. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ವಿರೇಂದ್ರಕುಮಾರ್ ಜೈನ್, ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ದಮಯಂತಿ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಯಮುನ ಬಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹಿನಿ ರುಕ್ಮಯ್ಯ, ಸಂಜೀವಿನಿ ಒಕ್ಕೂಟವನ್ನು ಬಲಪಡಿಸುವುದಕ್ಕಾಗಿ ಯು. ಬಿ. ಚಕ್ರಪಾಣಿಯವರು ೧ ಟೈಲರಿಂಗ್ ಮೆಶಿನ್,ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ೨ ಮೆಶಿನ್ ,ಸಜ್ಜನ ಪ್ರತಿಷ್ಠಾನದಿಂದ ೧ ಕೊಟ್ಟು ಸಹಕರಿಸಿದರು. ಅಂಗನವಾಡಿ ಟೀಚರ್ ವಂದಿಸಿದರು. ಯಮುನಾ ಬಿ.ಎಸ್. ಸ್ವಾಗತಿಸಿದರು.

 ದಾನಿಗಳಿಗೆ ಸ್ಮರಿಣಿಕೆ ಕೊಟ್ಟು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ವಿಮಲಾ ಆರ್. ಪ್ರಸಾದ್ ,ರಜಿನಿಶರತ್, ಎಲ್.ಸಿ.ಆರ್.ಗಳಾದ ಯಶೋಧ ಡಿ ಆರ್.,ಶೌಮ್ಯಕುಮಾರಿ ಕಡೆಪಾಲ,ಜಗದೀಶ್ ರೈ,ಎಸ್.ಕೆ. ಹನೀಫ್, ಶೌವ್ವದ್ ಗೂನಡ್ಕ ಒಕ್ಕೂಟದ ಸರ್ವ ಸದಸ್ಯರು,ಪದಾಧಿಕಾರಿಗಳು ಭಾಗವಹಿಸಿದ್ದರು, ನಂತರ ಮಹಾಸಭೆ ನಡೆದು ಸಂಘದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.