ನಮ್ಮೂರ ಶಾಲೆ ಉಳಿಸೋಣ ತಂಡದಿಂದ ಕಲ್ಲುಗುಂಡಿ ಸರಕಾರಿ ಶಾಲೆಗೆ ಮೂಲಭೂತ ಸೌಕರ್ಯದ ಕೊಡುಗೆ

Advt_Headding_Middle

 

ನ.14 ರಂದು‌ ಹಸ್ತಾಂತರ ಕಾರ್ಯಕ್ರಮ

 

ಇತ್ತೀಚಿನ ದಿನಗಳಲ್ಲಿ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪುತ್ತಿರುವ ಇಂತಹ ಕ್ಲಿಷ್ಟವಾದ ಸಂದರ್ಭ ಕಲ್ಲುಗುಂಡಿ ಸರಕಾರಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ನಮ್ಮೂರ ಶಾಲೆ ಉಳಿಸೋಣ ತಂಡ ಕಟ್ಟಿಕೊಂಡು ಶಾಲೆಗೆ ಅಗತ್ಯವಾಗಿ ಬೇಕಾದ ಮೂಲ ಸೌಕರ್ಯ ಕಲ್ಪಿಸಿದ್ದು ಇದರ ಹಸ್ತಾಂತರ ಕಾರ್ಯಕ್ರಮ ನ.14 ರಂದು ನಡೆಯಲಿದೆ ಎಂದು‌ ನಮ್ಮೂರ ಶಾಲೆ ಉಳಿಸೋಣ ತಂಡದ ನೇತೃತ್ವ ವಹಿಸಿರುವ ಪತ್ರಕರ್ತ ಹೇಮಂತ್ ಸಂಪಾಜೆ ಹೇಳಿದರು.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ‌ ಈ ವಿವರ ನೀಡಿದರು. ಕಲ್ಲುಗುಂಡಿಯ ಸರಕಾರಿ ಕನ್ನಡ ಶಾಲೆ ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಮಾಣಿಕ ಪ್ರಯತ್ನವನ್ನು ನಾವು ಅಲ್ಲಿನ ಹಳೆ ವಿದ್ಯಾರ್ಥಿಗಳು ಮಾಡಿದ್ದೇವೆ. ಕರೋನಾ ಎರಡನೇ ಅಲೆಯ ಸಂಕಷ್ಟದ ಸಂದರ್ಭದಲ್ಲಿಯೂ ಗುರು ಹಿರಿಯರ ಆಶೀರ್ವಾದ ಪಡೆದು ಒಂದು ವಾಟ್ಸ್ಆಪ್ ಗ್ರೂಪ್ ಶುರು ಮಾಡಿದ್ದೆವು.

ಇದಕ್ಕೆ ‘ನಮ್ಮೂರ ಶಾಲೆ ಉಳಿಸೋಣ’ ಎಂಬ ಹೆಸರನ್ನು ಕೊಟ್ಟಿದ್ದೇವೆ. ಜಾಲತಾಣದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳನ್ನು ಒಟ್ಟುಗೂಡಿಸಿ ಸತತ ಪರಿಶ್ರಮ ವಹಿಸಿ ಧನ ಸಂಗ್ರಹಿಸಿದೆವು. ಒಟ್ಟು 2 ಲಕ್ಷದ 41 ಸಾವಿರ ರೂ.ಗೂ ಅಧಿಕ ಹಣ ಕಲೆಕ್ಟ್ ಮಾಡಿದ್ದೆವು. ಅದರಲ್ಲಿ ಶಾಲೆಗೆ 4 ಸಿಸಿಟಿವಿ ಕ್ಯಾಮರಾ, 1 ಇನ್ವರ್ಟರ್ ಚಾರ್ಜರ್ ವಿತ್ ಬ್ಯಾಟರಿ , 26 ಬೆಂಚ್ – ಡೆಸ್ಕ್, 8 ಫ್ಯಾನ್ ನೀಡಿದ್ದೇವೆ.

ಜತೆಗೆ ಅಲ್ಲಿ ಹಾಳಾಗಿದ್ದ ಸ್ವಿಚ್ ಬೋರ್ಡ್ ಸರಿಪಡಿಸಿದ್ದೇವೆ. ಸದ್ಯ ಎಲ್ಲವನ್ನೂ ಶಾಲೆಗೆ ಹಸ್ತಾಂತರಿಸುವ ಕಾರ್ಯಕ್ರಮ ಭಾನುವಾರ ನ. 14 ರಂದು ಬೆಳಗ್ಗೆ 10 ಗಂಟೆಗೆ ಕಲ್ಲುಗುಂಡಿ ಶಾಲೆಯಲ್ಲಿ ನೆರವೇರಲಿದೆ.

ಕಾರ್ಯಕ್ರಮಕ್ಕೆ ನಮ್ಮ ತಂಡದ ಮಾರ್ಗದರ್ಶಕರಾಗಿರುವ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ನಿವೃತ್ತ ನಬಾರ್ಡ್ ಅಧಿಕಾರಿಯಾಗಿರುವ ಎಂಸಿ ನಾಣಯ್ಯ, ತಾಲೂಕು ಶಿಕ್ಷಣಾಧಿಕಾರಿಗಳಾದ ಮಹಾದೇವ್ , ಹಳೆ ವಿದ್ಯಾರ್ಥಿ ಗಳ ತಂಡದ ನೇತೃತ್ವ ವಹಿಸಿದ ಪತ್ರಕರ್ತ ಹೇಮಂತ್ ಸಂಪಾಜೆ, ವಿನಯ್ ಸುವರ್ಣ, ಶರತ್ ಕೈಪಡ್ಕ ಹಾಗೂ ಶಾಲೆಯ ಅಧ್ಯಾಪಕ ವೃಂದ ಸೇರಿದಂತೆ ಪ್ರಮುಖರು ಹಾಜರಿರಲಿದ್ದಾರೆ ಎಂದು‌ ಹೇಳಿದರು.

ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು‌ ಮಾತನಾಡಿ “ಎಲ್ಲಾ ಶಾಲೆಗಳಿಗೂ ಅಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ದೊಡ್ಡ ಆಧಾರ. ಅವರಲ್ಲಿ ಸಾಕಷ್ಟು ಜನ ಶ್ರೀಮಂತರು ಇದ್ದಾರೆ. ಅವರು‌ ಕೊಡುವ ದಾನದಿಂದ ಶಾಲೆಯನ್ನು ಬಲಪಡಿಸಬಹುದು. ಕಲ್ಲುಗುಂಡಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಕಾರ್ಯ ಇನ್ನೊಬ್ಬರಿಗೆ ಪ್ರೇರಣೆಯಾಗುಂತದ್ದು. ಸುಳ್ಯ ತಾಲೂಕಿನಲ್ಲಿ‌ ಮೂಲ ಭೂತ ಸೌಕರ್ಯ ಆಗಬೇಕಾದ ಶಾಲೆಗಳು ಇನ್ನೂ ಇವೆ. ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದರೆ ಸರಕಾರದ ಅನುದಾನಕ್ಕೆ ಕಾಯದೆ ಶಾಲೆಯನ್ನು ಅಭಿವೃದ್ಧಿ ಪಡಿಸಬಹುದು ಎಂದು‌ ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಮಾತನಾಡಿ ಹಿರಿಯ‌ ವಿದ್ಯಾರ್ಥಿಗಳ ಕೊಡುಗೆಗಳನ್ನು ಶ್ಲಾಘಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.