ನಮ್ಮ ಮಕ್ಕಳು
ಬರಹ : ಜಯಶ್ರೀ ಪಲ್ಲತಡ್ಕ
ನಮ್ಮ ಹಿರಿಯರಿಗೆ ಹೆತ್ತವರಿಗೆ ನಮ್ಮ ಮಕ್ಕಳೇ ದೇವರು. ನಮ್ಮ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರನ್ನು ನಾವು ಬಹಳ ಶಿಸ್ತಿನಿಂದ ಹಾಗೂ ಪ್ರೀತಿಯಿಂದ ಬೆಳೆಸಬೇಕು. ಬದಲಾಗಿ ವಿಪರೀತ ಹೊಡೆದು ವಿಪರೀತ ಬೆದರಿಸುವುದು ಮಾಡಬಾರದು.ಯಾಕೆಂದರೆ ೧೮ ವರ್ಷದೊಳಗೆ ಹೆಚ್ಚಿನವರು ನಮ್ಮ ಆಶ್ರಯದಲ್ಲಿ ಬೆಳೆಯುತ್ತಾರೆ.ಈ ಅವಧಿಯಲ್ಲಿ ನಮ್ಮ ಕೈಲಾದಷ್ಟು ಉತ್ತಮವಾದ ಆಹಾರ , ವಿದ್ಯೆ, ಉಡುಪು ಹಾಗೂ ಅವರು ಬಯಸಿದ ಇತರ ಒಳ್ಳೆ ವಸ್ತುಗಳನ್ನು ಕೊಡಿಸಬೇಕು.ಇದಕ್ಕೋಸ್ಕರ ನಾವು ಯಾವುದೇ ಕೆಟ್ಟ ವಿಚಾರಗಳನ್ನು ನಮ್ಮ ಚಿಂತೆಗಳನ್ನು ಅವರ ಮುಂದೆ ಹಂಚಬಾರದು.ಮಕ್ಕಳು ತಪ್ಪು ಕೆಲಸ ಮಾಡಿದಾಗ ಕಣ್ಣಿನಲ್ಲಿ ಹೆದರಿಸಿ ನಂತರ ಬುದ್ದಿ ಮಾತನ್ನು ಹೇಳಿ ಸರಿ ದಾರಿಗೆ ತರಬೇಕು.
ಈ ಸಮಯದಲ್ಲಿ ನಾವು ಅವರಿಗೆ ನಮ್ಮ ಗುರು ಹಿರಿಯರಿಗೆ ಗೌರವ ಕೊಡುವುದನ್ನು ವಿದೇಯತೆಯಿಂದ ಮಾತನಾಡುವುದನ್ನು ಕಲಿಸಿ ಕೊಡಬೇಕು. ಮುಂದೆ ೧೮ ವರ್ಷ ಕಳೆದ ನಂತರ ನಮ್ಮ ಸ್ನೇಹಿತರಂತೆ ಅವರನ್ನು ಕಂಡು ತಮ್ಮ ವಿದ್ಯೆಯ ಕಡೆಗೆ ಹೆಚ್ಚು ಗಮನ ಕೊಡುವಂತೆ ನೋಡಿಕೊಳ್ಳ ಬೇಕು. ಕೃಷಿಯಿದ್ದಲ್ಲಿ ಕೃಷಿ, ಅಡುಗೆ ಗೊತ್ತಿದ್ದಲ್ಲಿ ಅಡುಗೆ ಕೆಲಸ ಕಲಿಸಿಕೊಡಬೇಕು.ಮುಖ್ಯವಾಗಿ ಗುರುಹಿರಿಯರು ನೆರೆ ಕರೆಯವರೊಂದಿಗೆ ಹೆಚ್ಚು ಅಲ್ಲದಿದ್ದರೂ ಮಿತವಾಗಿಯಾದರೂ ಮಾತನಾಡುವುದನ್ನು ಹೇಳಿ ಕೊಡಬೇಕು.
ಇಷ್ಟೆಲ್ಲಾ ಮಾಡಬೇಕಾದರೆ ಮೊದಲಾಗಿ ನಾವು ಹೆತ್ತವರು ಅವರ ಮುಂದೆ ಪ್ರತಿಯೊಂದು ವಿಷಯದಲ್ಲಿ ಶಿಸ್ತಿನಿಂದ ಇರಬೇಕು.ಹೀಗೆ ನಾವು ಮಾಡಿದರೆ ನಮ್ಮ ಇಂದಿನ ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಅನಿಸಿಕೆ.
‘ಮಕ್ಕಳ ದಿನಾಚರಣೆಯ ಶುಭಾಶಯಗಳು’
ಬರಹ : ಜಯಶ್ರೀ ರಾಮಚಂದ್ರ ಪಲ್ಲತ್ತಡ್ಕ , ಐವರ್ನಾಡು