ತಂಟೆಪ್ಪಾಡಿ: ಸಂಚಾರಕ್ಕೆ ಅಯೋಗ್ಯವಾದ ಕಿಲಂಗೋಡಿ ರಸ್ತೆ

Advt_Headding_Middle

ಕಳಂಜ ಗ್ರಾಮದ ತಂಟೆಪ್ಪಾಡಿ ಕಿಲಂಗೋಡಿ ರಸ್ತೆಯು ಡಾಮರ್‌ಎದ್ದು ಹೋಗಿ‌ ಜಲ್ಲಿಕಲ್ಲುಗಳು ಮೇಲೆ ಬಂದು ಸಂಚಾರಕ್ಕೆ ಅಯೋಗ್ಯವಾಗಿದೆ.

ಕಿಲಂಗೋಡಿ ಎಂಬಲ್ಲಿ ಒಂದು‌ ಕಿ.ಪ್ರಾ. ಶಾಲೆ, ಅಂಗನವಾಡಿ ಕೇಂದ್ರ, ಭಜನಾ ಮಂದಿರ ಇದ್ದು, ಸುಮಾರು 50 ಕ್ಕಿಂತಲೂ ಹೆಚ್ಚು ಪ.ಜಾತಿಯ ಕುಟುಂಬಗಳು ವಾಸವಾಗಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಆಹಾರ ಸಾಮಾಗ್ರಿಗಳನ್ನು ತರುವ ವಾಹನದವರು‌ ಈ‌ ರಸ್ತೆಯಲ್ಲಿ ಬರಲು‌ ನಿರಾಕರಿಸುತ್ತಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಊರವರು ಪಂಚಾಯತ್ ಗೆ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳು, ಜನಪ್ರತಿನಿಧಿಗಳು ಗಮನ ಹರಿಸಲಿ ಎಂಬುದು ಸುದ್ದಿಯ ಆಶಯ. ಸಧ್ಯಕ್ಕೆ ಸ್ಥಳೀಯರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ‌ ಉಪಾಧ್ಯಕ್ಷ ಲಿಂಗಪ್ಪ ಗೌಡ ತಂಟೆಪ್ಪಾಡಿಯವರು ರಸ್ತೆಯ ಎರಡೂ ಬದಿಗಳಲ್ಲಿ ಕಾಡು ತೆಗೆಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.