ಹಳೆ ವಿದ್ಯಾರ್ಥಿಗಳಿಂದ ಸರಕಾರಿ ಶಾಲೆಗೆ ಕೊಡುಗೆಗಳ ಹಸ್ತಾಂತರ

Advt_Headding_Middle

ಲಾಕ್ಡೌನ್ ಅವಧಿಯಲ್ಲಿ ಹಣ ಸಂಗ್ರಹಿಸಿದ್ದ ಹಳೆ ವಿದ್ಯಾರ್ಥಿಗಳು

ಜಾಲತಾಣದಲ್ಲೇ 2,41,741.00 ರೂ.ಹಣ ಸಂಗ್ರಹಣೆ

ಮಕ್ಕಳ ಕೊರತೆಯಿಂದ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವ ಸಂದರ್ಭದಲ್ಲಿ ಇಲ್ಲೊಂದು ಹಳೆ ವಿದ್ಯಾರ್ಥಿಗಳ ತಂಡ ಲಾಕ್ಡೌನ್ ಅವಧಿಯಲ್ಲೇ ಜಾಲತಾಣ ಬಳಸಿಕೊಂಡು ಕಲ್ಲುಗುಂಡಿ ಸರಕಾರಿ ಶಾಲೆಗೆ ಒಟ್ಟು 2,41,741.00 ರೂ. ಹಣ ಸಂಗ್ರಹಿಸಿ ಅದರಲ್ಲಿ 4 ಸಿಟಿಟಿವಿ, 1 ಇನ್ವರ್ಟರ್, ತಲಾ 26 ಬೆಂಚ್-ಡೆಸ್ಕ್, 8 ಫ್ಯಾನ್ ಕೊಡುಗೆಗಳನ್ನು ನೀಡಿದ್ದಾರೆ.

ಭಾನುವಾರ ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಕೊಡುಗೆಯಾಗಿ ನೀಡಿದ ಎಲ್ಲ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ನೆರವೇರಿತು. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕೊಂದಲಕಾಡು ನಾರಾಯಣ್ ಭಟ್ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ನಮ್ಮೂರ ಶಾಲೆ ಉಳಿಸೋಣ ವಾಟ್ಸಪ್ ಗ್ರೂಪ್ ನ ರೂವಾರಿ ಪತ್ರಕರ್ತ ಹೇಮಂತ್ ಸಂಪಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧನ ಸಂಗ್ರಹಕ್ಕಾದ ಸವಾಲು, ಅದನ್ನು ಮೆಟ್ಟಿ ನಿಂತು ನಡೆದ ದಾರಿ, ಕೊನೆಗೆ ಸಿಕ್ಕಿದ ಯಶಸ್ಸು, ಸ್ನೇಹಿತರ ಸಹಕಾರ ಸೇರಿದಂತೆ ಎಲ್ಲ ವಿಚಾರದ ಬಗ್ಗೆ ವಿವರಿಸಿದರು.


ಸ್ಫೂರ್ತಿ ಪಡೆಯಿರಿ: ಎಂಸಿ ನಾಣಯ್ಯ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ನಿವೃತ್ತ ಎಜಿಎಂ ಆಗಿರುವ ಎಂ ಸಿ ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ ಕಲಿಯುವುದು ಮುಖ್ಯವಲ್ಲ. ಓದಿದ ನಂತರ ಸಮಾಜಕ್ಕೆ ಯಾವ ಕೊಡುಗೆ ನೀಡುತ್ತಾರೆ ಅನ್ನುವುದು ಮುಖ್ಯ. ಸಂಪಾಜೆಯಲ್ಲಿ ಶುರುವಾದ ಹಳೆ ವಿದ್ಯಾರ್ಥಿಗಳ ಇಂತಹ ಮಾದರಿ ನಡೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸ್ಫೂರ್ತಿಯಾಗಲಿ. ಇನ್ನಷ್ಟು ಸಮಾಜಮುಖಿ ಕಾರ್ಯಕ್ಕೆ ವೇದಿಕೆಯಾಗಲಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ನಮ್ಮೂರ ಶಾಲೆ ಉಳಿಸೋಣ ತಂಡದಿಂದ ಆಗಲಿ. ಸರಕಾರಿ ಕನ್ನಡ ಶಾಲೆ ಉಳಿಸುವ ಹೋರಾಟ ಪ್ರತಿ ಜಿಲ್ಲೆಯಲ್ಲೂ ಅಭಿಯಾನವಾಗಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಪ್ರಾಥಮಿಕ ವಿಭಾಗದ ಎಸ್ಡಿಎಂಸಿ ಅಧ್ಯಕ್ಷರಾದ ಮಧುಸೂಧನ್, ಹಳೆ ವಿದ್ಯಾರ್ಥಿಗಳ ತಂಡದ ನಾಯಕರುಗಳಾದ ವಿನಯ್ ಸುವರ್ಣ, ಶರತ್ ಕೈಪಡ್ಕ, ಹೈಸ್ಕೂಲ್ ವಿಭಾಗದ ಎಸ್ ಡಿ ಎಂಸಿ ಅಧ್ಯಕ್ಷರಾದ ಹೊನ್ನಪ್ಪ ಆಚಾರ್ಯ, ಮುಖ್ಯೋಪಾಧ್ಯಾಯರಾದ (ಪ್ರಭಾರ) ಚಂದ್ರಾವತಿ ಉಪಸ್ಥಿತರಿದ್ದರು. ಇದೇ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿಕೆ ಹಮೀದ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು. ಉಳಿದಂತೆ ದೈಹಿಕ ಶಿಕ್ಷಣ ಶಿಕ್ಷಕರಾದ ಧನಂಜಯ್ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.

ಭಯದಿಂದ ಶಿಕ್ಷಣ ವ್ಯವಸ್ಥೆ ಹೊರಬರುವುದು ಯಾವಾಗ?: ದಾಮ್ಲೆ
ನಮ್ಮೂರ ಶಾಲೆ ಉಳಿಸೋಣ ತಂಡದ ಮಾರ್ಗದರ್ಶಕರಾಗಿರುವ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ|ಚಂದ್ರಶೇಖರ ದಾಮ್ಲೆ ಮಾತನಾಡಿ, ವಿದ್ಯಾರ್ಥಿಗಳು ಸಬಲರಾಗಿ ಸ್ವಯಂ ಪ್ರೇರಿತರಾಗಿ ಇಂತಹ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ನಮ್ಮೂರ ಶಾಲೆ ಉಳಿಸೋಣ ತಂಡದ ನೇತೃತ್ವ ವಹಿಸಿದ ಪತ್ರಕರ್ತ ಹೇಮಂತ್ ಸಂಪಾಜೆ, ಅವರೊಂದಿಗೆ ಕೈ ಜೋಡಿಸಿದ ವಿನಯ್ ಸುವರ್ಣ, ಶರತ್ ಕೈಪಡ್ಕ ತಂಡದ ಸಾಹಸ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಸರಕಾರದ ವ್ಯವಸ್ಥೆಯಲ್ಲಿ ಭಯ ಅನ್ನುವ ವಾತಾವರಣ ನಿರ್ಮಾಣವಾಗಿರುವುದರಿಂದ ಸರಕಾರಿ ಶಾಲೆಗಳು ಇಂದು ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಅಧಿಕಾರಿ ವರ್ಗದವರು ಭಯದಿಂದ ಒಬ್ಬರಿಗೊಬ್ಬರು ನಿಯಂತ್ರಣ ಹೇರಿಕೊಂಡು ಕೆಲಸ ಮಾಡುತ್ತಾರೆ, ಮೇಲಿನ ಕ್ರಮಾಂಕದಿಂದ ಹಿಡಿದು ಕೆಳಗಿನ ಶಿಕ್ಷಕರ ವರ್ಗದ ತನಕ ಭಯವೇ ಇವರನ್ನು ಆಳುತ್ತದೆ. ಇದರ ಪರಿಣಾಮ ಮಕ್ಕಳ ಮೇಲೂ ಆಗುತ್ತದೆ. ಇಂತಹ ವ್ಯವಸ್ಥೆಯಿಂದ ಶಿಕ್ಷಕರು, ಮುಖ್ಯೋಪಾಧ್ಯಾಯರು ಬಲಿಪಶುಗಳಾಗುತ್ತಾರೆ. ಇಂತಹ ವ್ಯವಸ್ಥೆ ಶಿಕ್ಷಣ ವ್ಯವಸ್ಥೆಯಿಂದ ದೂರವಾದಾಗ ಮಾತ್ರ ಸರಕಾರಿ ಶಾಲೆಯ ಬೆಳವಣಿಗೆ ಸಾಧ್ಯ ಎಂದು ಕಿವಿಮಾತು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.