ಅಮರಪಡ್ನೂರು: ಹಲವು ವರ್ಷದ ಬೇಡಿಕೆಯ – ಕಲ್ಲುಮಲೆ ಕಾಲನಿ ‌ಸಂಪರ್ಕ‌ ರಸ್ತೆ ನಿರ್ಮಾಣ

Advt_Headding_Middle

 

ಅಮರಪಡ್ನೂರು ಗ್ರಾಮದ ಶೇಣಿ ಕಲ್ಲುಮಲೆಯ ಕಾಲನಿ ‌ಸಂಪರ್ಕ ರಸ್ತೆಯ ನಿರ್ಮಾಣ ಕಾರ್ಯ ‌ಅನೇಕ ಗೊಂದಲದ ನಡುವೆ ನಿರ್ಮಾಣ ವಾಗಿ ಈ ಭಾಗದ ಕಾಲನಿ ನಿವಾಸಿಗಳ ಬಹು ವರ್ಷಗಳ ಬೇಡಿಕೆ ಈಡೇರುವ‌ ಮೂಲಕ‌ ಸುಖಾಂತ್ಯ ಕಂಡಿದೆ.


ಜಿಲ್ಲಾಧಿಕಾರಿ ಯವರ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ರಸ್ತೆ ನಿರ್ಮಾಣದ ವಿಚಾರವಾಗಿ‌ ಪ್ರಸ್ತಾಪವಾಗಿದ್ದು ಈ ಬಗ್ಗೆ ಸ್ಥಳ ಜಿಲ್ಲಾಧಿಕಾರಿ ಯವರ ಆದೇಶದಂತೆ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ರಸ್ತೆ ನಿರ್ಮಾಣದ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲಿಸಿ ಜಾಗದ ಮಾಲಿಕರಾದ ನಾರಾಯಣ ಆಚಾರ್ಯರವರ ಜತೆ ಮಾತುಕತೆ ನಡೆಸಿದರು. ಈ ಸಂದರ್ಭ 8 ಅಡಿ ಅಗಲದ ರಸ್ತೆ ನಿರ್ಮಾಣಕ್ಕೆ ನಾರಾಯಣ ರವರು ಒಪ್ಪಿಕೊಂಡಿದ್ದರು. ಅದರಂತೆ ನ.11 ರಂದು ಗ್ರಾಮ ಕರಣಿಕರು ಗುರುತು ಮಾಡಿದಂತೆ ದಲಿತ ಮುಖಂಡೆ ಸರಸ್ವತಿ ಬೊಳಿಯಮಜಲು ರವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಹಿಟಾಚಿ ತೆಗೆದುಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾದಾಗ ನಾರಾಯಣ ಆಚಾರ್ಯ ರವರು ತನ್ನ ಓಮ್ನಿ ಕಾರನ್ನು ಅಡ್ಡಲಾಗಿ ನಿಲ್ಲಿಸಿ ತಡೆ ಒಡ್ಡಿದರು. ಈ ವಿಚಾರ ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ಹೋಗಿ ಉಪ ಆರಕ್ಷಕರು ಆಗಮಿಸಿ ಮಾತುಕತೆ ನಡೆಸಿದಾಗ ನಾರಾಯಣ ಆಚಾರ್ಯರು ನನ್ನ ಕೋಳಿ ಫಾರಂ ನಲ್ಲಿ ಬೆಳೆದು ನಿಂತ ಕೋಳಿಗಳಿದ್ದು ರಸ್ತೆ ನಿರ್ಮಾಣ ಸಂದರ್ಭ ನೀರಿನ ಟ್ಯಾಂಕ್ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಕೋಳಿಗಳಿಗೆ ನೀರಿನ ಅಭಾವದಿಂದ ತೋಂದರೆಯಾಗುತ್ತದೆ. ಕಲ್ಲಿನ ಕಟ್ಟೆ ತೆಗೆದು ಬೇರೆ ಕಟ್ಟೆ ನಿರ್ಮಿಸಿ ರಸ್ತೆ ನಿರ್ಮಾಣಕ್ಕೆ ಆಕ್ಷೇಪವಿಲ್ಲ ಎಂದು ತಿಳಿಸಿದ್ದರು. ಅದರಂತೆ ನ.13 ರಂದು ನಾರಾಯಣ ಆಚಾರ್ಯರ ಕೋಳಿ ಸಪ್ಲೈ ಆಗಿರುವುದರಿಂದ ಕಲ್ಲು ಕಟ್ಟೆಯನ್ನು ತೆರವುಗೊಳಿಸಿದ್ದರು. ಬಳಿಕ ನಾರಾಯಣ ರವರ ಬೇಡಿಕೆಯಂತೆ ಕೆಲಸ ಮಾಡಲು ಮುಂದಾದರು. ಬಳಿಕ ಸರಸ್ವತಿ ಬೊಳಿಯಮಜಲು ರವರ ನೇತೃತ್ವದಲ್ಲಿ ರಸ್ತೆ‌ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿ ಕೆಲಸ ಪ್ರಾರಂಭಿಸಲಾಯಿತು. ಸುಮಾರು 20 ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ಜಾತಕ ಪಕ್ಷಿ ಯಂತೆ ಕಾಯುತಿದ್ದ ಕಾಲನಿ ಫಲಾನುಭವಿಗಳ ಕೆಲವು ವರ್ಷದ ಬೇಡಿಕೆ ಇದೀಗ ಈಡೇರಿದಂತಾಗಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.