ಪೆರಾಜೆ ಚಿಗುರು ಯುವಕಮಂಡಲದಿಂದ ಶ್ರಮದಾನ

Advt_Headding_Middle

 

ಪೆರಾಜೆ ಗ್ರಾಮದ ಕುಂಬಳಚೇರಿ, ಮಜಿಕೋಡಿ ವ್ಯಾಪ್ತಿಯಿಂದ , ಇಲ್ಲಿಯ ಪ್ರಾಥಮಿಕ ಶಾಲೆ, ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪರಿಸರಕ್ಕೆ ಹೋಗುವ ಬೈಲುದಾರಿಯಲ್ಲಿ ಮಳೆಗಾಲ ನೀರು ಹೋಗಿ ಹೊಂಡಗಳು ಬಿದ್ದು ಹಾಗೂ ಗಿಡಗಳು ಬೆಳೆದು ನಿಂತಿದ್ದವು, ಇದನ್ನು ಚಿಗುರು ಯುವಕಮಂಡಲ ಪೆರಾಜೆಯ ಸದಸ್ಯರ ತಂಡ ಶ್ರಮದಾನವನ್ನು ಹಮ್ಮಿಕೊಂಡು ಬೈಲು ದಾರಿಗಳನ್ನು ದುರಸ್ಥಿಮಾಡುವುದರ ಮೂಲಕ ಶ್ರಮದಾನವನ್ನು ಯಶಸ್ವಿಗೊಳಿಸಿದರು.

ಈ ಕಾರ್ಯದಲ್ಲಿ ಚಿಗುರು ಯುವಕಮಂಡಲದ ಅಧ್ಯಕ್ಷ ಅರುಣ ಮಜಿಕೋಡಿ, ಕಾರ್ಯದರ್ಶಿ ಭವಿತ್ ಕುಂಬಳಚೇರಿ, ಖಜಾಂಜಿ ಪವನ್ ಕುಂಬಳಚೇರಿ, ಗ್ರಾಮಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಶ್ರಮದಾನಕ್ಕೆ ವೈನಾಟ್ ಕುಲವನ್ ದೇವಸ್ಥಾನದ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಸದಸ್ಯರಿಗೆ ಸಹಕರಿಸಿ ಪ್ರೋತ್ಸಾಹಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.