ಅನ್ಯಕೋಮಿನ ಯುವಕನಿಂದ ಹಿಂದೂ‌ ಯುವತಿಯ ಜತೆ ಅನುಚಿತ ವರ್ತನೆ ಬಗ್ಗೆ ಪೊಲೀಸ್ ದೂರು

Advt_Headding_Middle

 

ಯುವಕನ ವಿರುದ್ಧ ಕೇಸು ದಾಖಲು

ಮಡಿಕೇರಿಯ ಅನ್ಯಕೋಮಿನ ಯುವಕನೋರ್ವ ಸಾಮಾಜಿಕ ಜಾಲತಾಣ ದಲ್ಲಿ ಪರಿಚಯವಾದ ಯುವತಿಯೋರ್ವಳನ್ನು ನಾನು ಹಿಂದೂ ಯುವಕನೆಂದು ಸುಳ್ಳು ಹೆಸರು ಹೇಳಿ ಯುವತಿಯನ್ನು ನಂಬಿಸಿ ಆಕೆಯನ್ನು ಬಲಾತ್ಕರವಾಗಿ ಸುತ್ತಾಡಿಸಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ವಂಚನೆಗೆ ಒಳಗಾದ ಯುವತಿ ಸುಳ್ಯ ಪೋಲಿಸ್ ಮೆಟ್ಟಿಲೇರಿ ದೂರು ನೀಡಿದ ಘಟನೆ ನ.೧೧ ರಂದು ವರದಿಯಾಗಿದೆ.
ಆರೋಪಿ ಯುವಕನು ಕಳೆದ ೨ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು ಕೌಶಲ್ ‌ಎಂಬ‌ ಹೆಸರಿನಿಂದ ನನ್ನ ಜತೆ ಜಾಲತಾಣದಲ್ಲಿ ಪರಿಚಯ ಬೆಳೆಸಿಕೊಂಡಿದ್ದನು.
ನ.೧೧ ರಂದು ಆತ ನನ್ನನ್ನು ಸುಳ್ಯಕ್ಕೆ ಬರುವಂತೆ ಒತ್ತಾಯ ಮಾಡಿರುತ್ತಾನೆ. ಆತ ಹಿಂದೂ ಯುವಕನೆಂದು ನಂಬಿ ನಾನು ‌ಆತನ ಒತ್ತಾಯಕ್ಕೆ ಮಣಿದು‌ ಮಧ್ಯಾಹ್ನ ‌೧೨ ಗಂಟೆಗೆ ಸುಳ್ಯಕ್ಕೆ ಬಂದಿರುತ್ತೇನೆ. ಅಲ್ಲಿಂದ ಅವನು ನನ್ನನ್ನು‌ ಬೈಕಿನಲ್ಲಿ‌ ಕುಳಿತುಕೊಳ್ಳುವಂತೆ ಹೇಳಿರುತ್ತಾನೆ. ನಾನು ಅವನನ್ನು ನಮ್ಮವನೆಂದು ನಂಬಿ ಕುಳಿತುಕೊಂಡಿರುತ್ತೇನೆ. ಬೈಕಿನಲ್ಲಿ ಕುಳ್ಳಿರಿಸಿದ ನಂತರ ಅವನು ನೇರವಾಗಿ ಮಡಿಕೇರಿ ಕಡೆಗೆ ಬೈಕನ್ನು ಚಲಾಯಿಸಿರುತ್ತಾನೆ. ನಾನು ಮಡಿಕೇರಿಗೆ ಬರುವುದಿಲ್ಲ ಎಂದು ಹೇಳಿದರೂ ಆತನು ಬೈಕನ್ನು ರಭಸದಿಂದ ಮಡಿಕೇರಿಗೆ ಚಲಾಯಿಸಿರುತ್ತಾನೆ.ಅಲ್ಲಿ ನನ್ನನ್ನು ಪಾರ್ಕಿಗೆ ಕರೆದು ಕೊಂಡು ಹೋಗಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿರುವುದಲ್ಲದೆ ನನ್ನ ಕೈಯನ್ನೆಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಆಗ ನಾನು ವಿರೋಧಿಸಿದಾಗ ನಿನ್ನನ್ನು‌ ಕೊಲ್ಲುತ್ತೇನೆ ಎಂದು‌ ಬೆದರಿಸಿ ನಾನು ಹಿಂದೂ‌‌ ಅಲ್ಲ ಮುಸ್ಲಿಂ ನನ್ನ ‌ಹೆಸರು ತಸ್ಲೀಮ್ ಎಂದು ಹೇಳಿದ್ದಾನೆ.ಅಲ್ಲದೆ ನನ್ನನ್ನು ಬಿಟ್ಟು ಹೋದರೆ ನಮ್ಮಿಬ್ಬರ ಫೋಟೊ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ನಾನು ಯಾರಲ್ಲಿಯೂ ಹೇಳುವುದಿಲ್ಲ. ನನ್ನನ್ನು ಸುಳ್ಯ ಕ್ಕೆ ಬಿಡು ಎಂದು ಕೇಳಿಕೊಂಡಿದ್ದೇನೆ.ಅದಕ್ಕೆ ಒಪ್ಪಿ ಆತನು ಮತ್ತೆ ನನ್ನನ್ನು ಸುಳ್ಯಕ್ಕೆ ಕರೆ ತಂದು ಬಿಟ್ಟಿರುತ್ತಾನೆ. ನನಗೆ ಜೀವ ಬೆದರಿಕೆ ನೀಡಿ ಸುಳ್ಳು ಹೇಳಿ‌ ವಂಚನೆ ಮಾಡಿ‌ ಅನುಚಿತವಾಗಿ ವರ್ತಿಸಿದ ಆತನ ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ವಂಚನೆಗೊಳಗಾದ ಯುವತಿ ಸುಳ್ಯ ಪೋಲಿಸ್ ಠಾಣೆಯಲ್ಲಿ‌ದೂರು ನೀಡಿರುವ ಬಗ್ಗೆ ತಿಳಿದು ಬಂದಿದೆ. ಯುವಕನು ಮೂಲತಃ ಮಡಿಕೇರಿಯವನಾಗಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.