ನ.18 : ಅಮರಮುಡ್ನೂರಿನಲ್ಲಿ ಉಚಿತ ಇ- ಶ್ರಮ್ ಕಾರ್ಡ್ ನೋಂದಣಿ ಕಾರ್ಯಕ್ರಮ

Advt_Headding_Middle

ಸುದ್ದಿ ಡಿಜಿಟಲ್ ಸೇವಾ ಕೇಂದ್ರ ಸುಳ್ಯ ಮತ್ತು ಅಮರಮುಡ್ನೂರು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಸರಕಾರದಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲ್ಪಡುವ ಇ-ಶ್ರಮ್ ಕಾರ್ಡ್ ನ ಉಚಿತ ನೋಂದಣಿ ಕಾರ್ಯಕ್ರಮವು ನ.18 ರಂದು ಅಮರಮುಡ್ನೂರು (ಕುಕ್ಕುಜಡ್ಕ) ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿದೆ.
ಸಮಯ: ಬೆಳಗ್ಗೆ 10.30-1.00 ತನಕ

ನೋಂದಾವಣೆಗೆ ಬೇಕಾಗುವ ದಾಖಲೆಗಳು

1. ಆಧಾರ್ ಕಾರ್ಡ್
2.ಬ್ಯಾಂಕ್ ಪಾಸ್ ಪುಸ್ತಕ
3. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
4. ನಾಮಿನಿ ಆಧಾರ್ ಕಾರ್ಡ್

ಯಾರೆಲ್ಲ ಅರ್ಹರು

ಸಣ್ಣ ಮತ್ತು ಕನಿಷ್ಠ ರೈತರು

ಕೃಷಿ ಕಾರ್ಮಿಕರು

ಮೀನುಗಾರರು

ಪಶು ಸಂಗೋಪನೆಯಲ್ಲಿ ತೊಡಗಿರುವವರು

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು

ಬಡಗಿ

ಶುಶ್ರೂಷಕಿಯರು

ಗೃಹ ಕಾರ್ಮಿಕರು

ಕ್ಷೌರಿಕರು

ತರಕಾರಿ ಮತ್ತು ಹಣ್ಣು ಮಾರಾಟಗಾರರು

ಸುದ್ದಿ ಪತ್ರಿಕೆ ಮಾರಾಟಗಾರರು

ಆಟೋ, ಟ್ಯಾಕ್ಸಿ , ಲಾರಿ, ಚಾಲಕರು

ಬೀದಿ ವ್ಯಾಪಾರಿಗಳು

ವಲಸೆ ಕಾರ್ಮಿಕರು

ಎಲೆಕ್ಟ್ರಿಷಿಯನ್

ಟೈಲರ್ ಗಳು

ಆಶಾಕಾರ್ತೆಯರು

ಪೋಟೊಗ್ರಾಫರ್ಸ್

ಮ್ಯಾಕೆನಿಕ್ಸ್

ಮೋಟಾರು ವೆಹಿಕಲ್ ಮ್ಯಾಕೆನಿಕ್ಸ್ ಮತ್ತು ರೀಪೇರಿ‌ ಮಾಡುವರು

ಪ್ಲಂಬರ್‌ಗಳು ಮತ್ತು ಪೈಪ್ ಫಿಟ್ಟರ್‌ಗಳು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು

ಯಾರೆಲ್ಲ ನೋಂದಾಯಿಸಬಹುದು?
16 ರಿಂದ 59 ವಯಸ್ಸಿನ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹು.
EPFO ​​ಅಥವಾ ESIC ನ ಸದಸ್ಯರಾಗಿರಬಾರದು.
ಆದಾಯ ತೆರಿಗೆ ಪಾವತಿಸುವವರಾಗಿರಬಾರದು.

ಪ್ರಯೋಜನಗಳೇನು?

1. ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ 2 ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದ್ರೆ 2 ಲಕ್ಷ ರೂ. ಸಿಗಲಿದೆ.
2. ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರೋ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ನೋಂದಾಯಿತ ಕಾರ್ಮಿಕ ಅರ್ಹನಾಗಿದ್ದಾನೆ.
3. ತುರ್ತು ಸಂದರ್ಭ ಹಾಗೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಇ-ಶ್ರಮ ಕಾರ್ಡ್ ಹೊಂದಿರೋರು ಎಲ್ಲ ರೀತಿಯ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.