ಎಣ್ಮೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸೈಬರ್ ಕ್ರೈಂ ದಿನಾಚರಣೆ

Advt_Headding_Middle

 

ವಿದ್ಯಾರ್ಥಿಗಳು ಫೇಸ್ ಬುಕ್,ವಾಟ್ಸಾಪ್ ಗಳಿಂದ ದೂರವಿರಿ : ಆಂಜನೇಯ ರೆಡ್ಡಿ

ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ಸೈಬರ್ ಕ್ರೈಂ ದಿನಾಚರಣೆಯು ನ.16 ರಂದು ನಡೆಯಿತು.
ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿಯವರು ಸಂಪನ್ಮೂಲ ವ್ಯಕ್ತಿಯಾಗಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ಓದಿನ ಕಡೆ ಹೆಚ್ಚು ಗಮನಕೊಡಬೇಕು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇರುತ್ತದೆ.
ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇರುತ್ತದೋ ಅದನ್ನು ಆಯ್ಕೆ ಮಾಡಿಕೊಂಡು ಮುಂದಿನ ದಿನದಲ್ಲಿ ಉತ್ತಮವಾಗಿ ಕಲಿತು ಯಾವುದಾದರೂ ಸಾಧನೆ ಮಾಡಿ ತೋರಿಸಬೇಕು ಎಂದು ಹೇಳಿದರು.
ಫೇಸ್ ಬುಕ್,ವಾಟ್ಸಾಪ್ ಗಳನ್ನು ಬಳಸುವುದು ಕಡಿಮೆ ಮಾಡಬೇಕು.
ಒಳ್ಳೆಯ ಕೆಲಸಕ್ಕೆ ಮಾತ್ರ ಮೊಬೈಲ್ ಬಳಕೆ ಮಾಡಬೇಕು.
ಅನಾಮಧೇಯ ಫೋನ್ ಗಳು ಬಂದರೆ ತುಂಬಾ ಜಾಗ್ರತೆಯಿಂದ ಕಾಲ್ ಸ್ವೀಕರಿಸಬೇಕು.
ಇದರಿಂದ ಮೋಸ ಹೋಗುವ ಸಂಭವವಿರುತ್ತದೆ.
ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಹಣವೂ ಹೋಗುವ ಸಂಭವವಿರುತ್ತದೆ ಎಂದು ಹೇಳಿದರು.
ಅಪರಾಧಗಳ ಪ್ರಕರಣಗಳು ನಡೆಯುವ ಬಗ್ಗೆ ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರಲ್ಲದೆ.
ಇತ್ತೀಚೆಗೆ ದಿನಗಳಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ಉದಾಹರಣೆಯನ್ನು ನೀಡಿ ವಿವರಿಸಿದರು.
ಮಾಹಿತಿ ನೀಡುತ್ತಿರುವಾಗ ವಿದ್ಯಾರ್ಥಿಗಳಿಗೆ ಕೆಲವು ಪ್ರಶ್ನೆಯನ್ನು ಕೂಡ ಕೇಳಿದರು.
ಸರಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಪೆನ್ನು ನೀಡಿ ಕಲಿಕೆಗೆ ಪ್ರೋತ್ಸಾಹಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಶೀತಲರವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಬೆಳ್ಳಾರೆ ಠಾಣೆಯ ಎ.ಎಸ್.ಐ.ಭಾಸ್ಕರ ಅಡ್ಕಾರು, ಹೆಡ್ ಕಾನ್ಸ್ ಟೇಬಲ್ ಬಾಲಕೃಷ್ಣ, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಸರಣಾಧಿಕಾರಿ ಗಣೇಶ್ ಕುಕ್ಕುದಡಿ ಉಪಸ್ಥಿತರಿದ್ದರು.
ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳಾದ ಅಪೇಕ್ಷಾ,ಕೆ.ಕೀರ್ತಿ ಕೆ.ಬಿ,ದಿಶಾ ಕೆ.ಜೆ,ವರ್ಷಾ ಕೆ,ಚೈತನ್ಯಾ ಪಿ.ಪ್ರಾರ್ಥಿಸಿದರು.
ಶಿಕ್ಷಕ ಸಂತೋಷ್ ವಂದಿಸಿದರು.
ಶಿಕ್ಷಕ ವೃಂದದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.