ಸುಳ್ಯ ನೆಹರು ಮೆಮೋರಿಯಲ್ ಪ. ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Advt_Headding_Middle
Advt_Headding_Middle

 

“ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಂಸ್ಥೆಯ ಏಳಿಗೆಗೆ ಪೂರಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಆ ಮೂಲಕವಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ರಾಷ್ಟ್ರ ಚಿಂತನೆಯನ್ನು ಮೈಗೂಡಿಸಿಕೊಂಡು ಬಾಳ್ವೆ ನಡೆಸಿ ಎಂದು ಸುಳ್ಯ ಎನ್ನೆ 0ಸಿಯ ಶೈಕ್ಷಣಿಕ ಸಲಹೆಗಾರ ಪ್ರೊ ಎಂ ಬಾಲಚಂದ್ರ ಗೌಡ ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು .ಸಂಸ್ಥೆಯ ಪ್ರಾ0ಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸ , ಆತ್ಮ ಗೌರವ ಶಿಸ್ತು, ಸಹಕಾರ ಮೊದಲಾದ ಗುಣಗಳನ್ನು ವೃದ್ಧಿ ಗೊಳಿಸಿಕೊಳ್ಳುವುದರ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸದೃಢ ಸಮಾಜ ಕಟ್ಟುವಲ್ಲಿ ಕೈಜೋಡಿಸಬೇಕು ಹಾಗೂ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಸನ್ನಿವೇಶ, ಪರಿಸ್ಥಿತಿಗಳಿಂದ ವಿಚಲಿತರಾಗದೆ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯಿರಿ ಎಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಪ್ರಾ0ಶುಪಾಲರಾದ ಪ್ರೊ ಎಂ ಎಂ ರುದ್ರ ಕುಮಾರ್ ಉಪಸ್ಥಿತರಿದ್ದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಕು.ಬೇಬಿ ವಿದ್ಯಾ ಪಿ.ಬಿ.ಮತ್ತು ಶ್ರೀ ವಿನಯ ನಿಡ್ಯಮಲೆ, ವಿದ್ಯಾರ್ಥಿ ಸಂಘದ ಹೆಡ್ ಬಾಯ್ ಕೀರ್ತಿಕ್, ಹೆಡ್ ಗರ್ಲ್ ಕ್ಷಮಾ ಅಂಬೆಕಲ್ಲು, ಡೆಪ್ಯೂಟಿ ಹೆಡ್ ಬಾಯ್ ಸುಮಂತ್, ಡೆಪ್ಯೂಟಿ ಹೆಡ್ ಗರ್ಲ್ ಇಳಾಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೃತಿ ಜಿ ರಾವ್ ಪ್ರಾರ್ಥಿಸಿ, ಹೆಡ್ ಬಾಯ್ ಕೀರ್ತಿಕ್ ಎಲ್ ಬಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಶ್ರೀ ವಿನಯ ನಿಡ್ಯಮಲೆ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಪ್ರೊ ರುದ್ರ ಕುಮಾರ್ ಎಂ ಎಂ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಬ್ಯಾಡ್ಜ್ ಪ್ರಧಾನ ಮಾಡಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಕೃತಿ ಜಿ ರಾವ್ ಮತ್ತು ನಿಶ್ವಿತಾ ಆಶಯ ಗೀತೆ ಸಾದರ ಪಡಿಸಿದರು.ಡೆಪ್ಯೂಟಿ ಹೆಡ್ ಗರ್ಲ್ ಇಳಾಶ್ರೀ ಕೆ ವಿ ವಂದಿಸಿದರು. ರಾಶಿ ಡಿ ಡಿ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.