ನ.19 : ಮಂಡೆಕೋಲಿನಲ್ಲಿ ಉಚಿತ ಇ- ಶ್ರಮ್ ಕಾರ್ಡ್ ನೋಂದಣಿ ಕಾರ್ಯಕ್ರಮ

Advt_Headding_Middle

 

 

ಸುದ್ದಿ ಡಿಜಿಟಲ್ ಸೇವಾ ಕೇಂದ್ರ ಸುಳ್ಯ ಮತ್ತು ಮಂಡೆಕೋಲು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಸರಕಾರದಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲ್ಪಡುವ ಇ-ಶ್ರಮ್ ಕಾರ್ಡ್ ನ ಉಚಿತ ನೋಂದಣಿ ಕಾರ್ಯಕ್ರಮವು ನ.19 ರಂದು ಮಂಡೆಕೋಲು ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿದೆ.

ನೋಂದಾವಣೆಗೆ ಬೇಕಾಗುವ ದಾಖಲೆಗಳು

1. ಆಧಾರ್ ಕಾರ್ಡ್
2.ಬ್ಯಾಂಕ್ ಪಾಸ್ ಪುಸ್ತಕ
3. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
4. ನಾಮಿನಿ ಆಧಾರ್ ಕಾರ್ಡ್

*ಯಾರೆಲ್ಲ ಅರ್ಹರು*

ಸಣ್ಣ ಮತ್ತು ಕನಿಷ್ಠ ರೈತರು

ಕೃಷಿ ಕಾರ್ಮಿಕರು

ಮೀನುಗಾರರು

ಪಶು ಸಂಗೋಪನೆಯಲ್ಲಿ ತೊಡಗಿರುವವರು

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು

ಬಡಗಿ

ಶುಶ್ರೂಷಕಿಯರು

ಗೃಹ ಕಾರ್ಮಿಕರು

ಕ್ಷೌರಿಕರು

ತರಕಾರಿ ಮತ್ತು ಹಣ್ಣು ಮಾರಾಟಗಾರರು

ಸುದ್ದಿ ಪತ್ರಿಕೆ ಮಾರಾಟಗಾರರು

ಆಟೋ, ಟ್ಯಾಕ್ಸಿ , ಲಾರಿ, ಚಾಲಕರು

ಬೀದಿ ವ್ಯಾಪಾರಿಗಳು

ವಲಸೆ ಕಾರ್ಮಿಕರು

ಎಲೆಕ್ಟ್ರಿಷಿಯನ್

ಟೈಲರ್ ಗಳು

ಆಶಾಕಾರ್ತೆಯರು

ಪೋಟೊಗ್ರಾಫರ್ಸ್

ಮ್ಯಾಕೆನಿಕ್ಸ್

ಮೋಟಾರು ವೆಹಿಕಲ್ ಮ್ಯಾಕೆನಿಕ್ಸ್ ಮತ್ತು ರೀಪೇರಿ‌ ಮಾಡುವರು

ಪ್ಲಂಬರ್‌ಗಳು ಮತ್ತು ಪೈಪ್ ಫಿಟ್ಟರ್‌ಗಳು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು

*ಯಾರೆಲ್ಲ ನೋಂದಾಯಿಸಬಹುದು?*

16 ರಿಂದ 59 ವಯಸ್ಸಿನ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹು.
EPFO ​​ಅಥವಾ ESIC ನ ಸದಸ್ಯರಾಗಿರಬಾರದು.
ಆದಾಯ ತೆರಿಗೆ ಪಾವತಿಸುವವರಾಗಿರಬಾರದು.

*ಪ್ರಯೋಜನಗಳೇನು?*

1. ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ 2 ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದ್ರೆ 2 ಲಕ್ಷ ರೂ. ಸಿಗಲಿದೆ.
2. ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರೋ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ನೋಂದಾಯಿತ ಕಾರ್ಮಿಕ ಅರ್ಹನಾಗಿದ್ದಾನೆ.
3. ತುರ್ತು ಸಂದರ್ಭ ಹಾಗೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಇ-ಶ್ರಮ ಕಾರ್ಡ್ ಹೊಂದಿರೋರು ಎಲ್ಲ ರೀತಿಯ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.