ಪಂಜ : ಮಕ್ಕಳ ದಿನಾಚರಣೆ

Advt_Headding_Middle

ಜೇಸೀಐ ಪಂಜ ಪಂಚಶ್ರೀ ಮತ್ತು ಅಂಗನವಾಡಿ ಕೇಂದ್ರ ಪಂಜ, ಬಾಲವಿಕಾಸ ಸಮಿತಿ ಪಂಜ ಇವರ ಸಂಯುಕ್ತ ಆಶ್ರಯದಲ್ಲಿ ನ.೧೬ರಂದು ಮಕ್ಕಳ ದಿನಾಚರಣೆ ನಡೆಯಿತು.ಜೇಸೀಐ ಪಂಜ ಪಂಚಶ್ರೀ ಅಧ್ಯಕ್ಷ ಜೇಸೀ ಗಣೇಶ್‌ಪ್ರಸಾದ್ ಭೀಮಗುಳಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿ ಕೆ.ಯಂ. ಕಾರ್ಯಕ್ರಮವನ್ನು ದೀಪ ಬೆಳಗಿಸಿ, ನೆಹರೂರವರ ಭಾವಚಿತ್ರಕ್ಕೆ ಹೂ ಹಾಕುವುದರ ಮೂಲಕ ಉದ್ಘಾಟಿಸಿದರು.
ಅಂಗನವಾಡಿ ಕೇಂದ್ರಕ್ಕೆ ೩೫ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ಚಿದಾನಂದ ಬಿಳಿಮಲೆಯವರನ್ನು ಅಂಗನವಾಡಿ ಕೇಂದ್ರ ಮತ್ತು ಬಾಲವಿಕಾಸ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳಿಗೆ ನಡೆಸಿದ ಕೆಲವು ಸ್ಪರ್ಧೆಗಳ ಬಹುಮಾನವನ್ನು ಜೇಸೀಐ ಪಂಜ ಇದರ ವತಿಯಿಂದ ನೀಡಲಾಯಿತು. ಮಕ್ಕಳು ಕೇಕ್ ಕತ್ತರಿಸಿದರು. ಪಂಜದ ರಾಘವೇಂದ್ರ ಬೇಕರಿಯವರು ಸಿಹಿತಿಂಡಿ ವ್ಯವಸ್ಥೆ ಮಾಡಿದ್ದರು.
ಪಂಜ ಲಯನ್ಸ್ ಸದಸ್ಯ ಚಿದಾನಂದ ಬಿಳಿಮಲೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಜೇಸೀ ವಾಸುದೇವ ಮೆಲ್ತಾಡಿ, ಜೇಸೀ ಪ್ರವೀಣ್ ಕಾಯರ, ಜೇಸೀ ಕೌಶಿಕ್ ಕುದ್ವ ,ಪಂಜ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾಗೀರಥಿ, ಜೇಸೀಐ ಪಂಜ ನಿಕಟಪೂರ್ವ ಅಧ್ಯಕ್ಷ ಜೇಸೀ ನಾಗಮಣಿ ಕೆದಿಲ, ಜೇಸೀಐ ಪಂಜ ಪಂಚಶ್ರೀ ಕಾರ್ಯದರ್ಶಿ ಜೇಸೀ ಲೋಕೇಶ್ ಆಕ್ರಿಕಟ್ಟೆ, ಕಾರ್ಯಕ್ರಮ ನಿರ್ದೇಶಕ ಹೆಚ್.ಜಿ.ಎಫ್. ಶಿವಪ್ರಸಾದ್ ಹಾಲೆಮಜಲು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.