ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರಿ ‌ಸಂಘದ ವಾರ್ಷಿಕ ಸಾಮಾನ್ಯ ಸಭೆ

Advt_Headding_Middle

 

ನಿವ್ವಳ ಲಾಭ ರೂ. 5.3 ಲಕ್ಷ, ಶೇ. 25% ಡಿವಿಡೆಂಟ್

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ 2020- 21 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ತಿರುಮಲೇಶ್ವರ ಕುಡುಂಬಿಲ ರವರ ಅಧ್ಯಕ್ಷತೆಯಲ್ಲಿ ಸಂಘದ ‌ಸಭಾಂಗಣದಲ್ಲಿ ನ.18 ರಂದು ನಡೆಯಿತು.
ವರದಿ ಸಾಲಿನಲ್ಲಿ 1.74 ಲೀಟರ್ ಹಾಲು ‌ಖರೀದಿಸಲಾಗಿದ್ದು ರೂ. 52.53 ಲಕ್ಷ ಪಾವತಿಸಲಾಗಿದೆ.ಸಂಘದಿಂದ ಜುಮ್ಲಾ ರೂ. 59.೦8 ಲಕ್ಷ ಮೌಲ್ಯದ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಪ್ರಸ್ತುತ 291 ಮಂದಿ ‌ಸದಸ್ಯರನ್ನು ಹೊಂದಿದೆ. ಸದಸ್ಯರಿಂದ ರೂ. 1.1೦ ಲಕ್ಷ ದಷ್ಟು ಪಾಲು ಬಂಡವಾಳ ಸಂಘಕ್ಕೆ ಜಮೆಯಾಗಿರುವುದು. 2020-21 ನೇ ಸಾಲಿನ ನಿವ್ವಳ ಲಾಭ ರೂ. 5,೦3,849.1೦ ಆಗಿರುತ್ತದೆ. ಪ್ರಸ್ತುತ ವರ್ಷ ಶೇ. 25% ರಷ್ಟು ಡಿವಿಡೆಂಟ್ ಘೋಷಣೆ ಮಾಡಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಯತೀಶ್ ಹಿರಿಯಡ್ಕ, ನಿರ್ದೇಶಕರಾದ ನಾರಾಯಣ ಭಟ್, ರಾಮಕೃಷ್ಣ ಕಂಜರ್ಪಣೆ,‌ಸುಬ್ರಾಯ ಗೌಡ, ವೆಂಕಟ್ರಮಣ ಇಟ್ಟಿಗುಂಡಿ,ಹುಕ್ರ ಮುಗೇರ, ಮೀನಾಕ್ಷಿ ಹೆಚ್.ಕೆ,‌ಯಶೋದ ಬಿ,ಯಮುನಾ ಬಿ, ನಿವೃತ್ತ ಸಿ.ಇ.ಒ.ಶೇಖರ,‌ಸಿ.ಇ.ಒ ಯೋಗೀಶ್ ಕೊಂಡೆಬಾಯಿ ಉಪಸ್ಥಿತರಿದ್ದರು. ನಿವೃತ್ತ ಸಿ.ಇ.ಒ. ವಾಸುದೇವ ಮಾಡಬಾಕಿಲು, ಸಂಘದ ‌ಸದಸ್ಯರು, ಸಿಬ್ಬಂದಿ ವರ್ಗದವರು‌ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.