ಪೈಸಾರಿ ಜಾಗಕ್ಕೆ ಸಂಬಂಧಪಟ್ಟ ಸಮಸ್ಯೆ ನಿವಾರಣೆ , ಅಡಿಕೆಗೆ ಹಳದಿ ರೋಗಕ್ಕೆ ಸೂಕ್ತ‌ಕ್ರಮಕ್ಕೆ ಒತ್ತಾಯ

Advt_Headding_Middle

 

ರೈತ‌ಮೋರ್ಚಾ ರಾಜ್ಯಾಧ್ಯಕ್ಷರಿಗೆ ಕೊಡಗು ರೈತ‌ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ‌ಕುಂದಲ್ಪಾಡಿ‌ ಮನವಿ

ಪೈಸಾರಿ‌ ಜಾಗಕ್ಕೆ ಸಂಬಂಧಿಸಿ ಸಮಸ್ಯೆ ನಿವಾರಣೆ, ಅಡಿಕೆ ಹಳದಿ ಎಲೆ ರೋಗಕ್ಕೆ ಸೂಕ್ತ ಕ್ರಮಕ್ಕೆ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಪರಿಹಾರವನ್ನು ಒದಗಿಸಿಕೊಡುವಂತೆ ಕೊಡಗು ಜಿಲ್ಲಾ ರೈತ‌ಮೋರ್ಚಾ ಅಧ್ಯಕ್ಷ ‌ನಾಗೇಶ್ ಕುಂದಲ್ಪಾಡಿಯವರು ರೈತ‌ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿಯವರನ್ನು ಒತ್ತಾಯಿಸಿದ್ದಾರೆ.

ಇಂದು ಸುಳ್ಯದಲ್ಲಿ ರೈತ‌ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಕೊಡಗು ‌ಜಿಲ್ಲಾ ರೈತರ ಪರವಾಗಿ ರಾಜ್ಯಾಧ್ಯಕ್ಷ ರಿಗೆ ಮನವಿ‌ಸಲ್ಲಿಸುವುದಾಗಿ ಅವರು‌ ಹೇಳಿದರು.

ಮನವಿಯಲ್ಲಿ ಅಡಿಕೆ ತೋಟಕ್ಕೆ ಹಳದಿರೋಗ ವ್ಯಾಪಕವಾಗಿ ಆವರಿಸಿರುವುದರಿಂದ ಕೊಡಗು ಮತ್ತು ದಕ ಜಿಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆ ರೈತರು ಸಂಕಷ್ಟಕ್ಕೆ ಸಿಕ್ಕಿರುವುದರಿಂದ , ಹಳದಿ ರೋಗಕ್ಕೆ ಸೂಕ್ತ ನೆಲೆಗಟ್ಟಿನಲ್ಲಿ ಸಂಶೋಧನೆ ಮಾಡುವುದಕ್ಕೆ ಸರಕಾರದಿಂದ ವಿಶೇಷ ಅನುದಾನವನ್ನು ಒದಗಿಸಿಕೊಡುವುದಕ್ಕೆ ವುವಸ್ಥೆ ಮಾಡುವುದು .
ಕೊಡಗು ಜಿಲ್ಲೆಯ ಹಾರಂಗಿ ಹಿನ್ನೀರು ಮುಳುಗಡೆಯಾಗಿರುವ ( 1970 ) ಅರಣ್ಯ ಪ್ರದೇಶಕ್ಕೆ ಬದಲಾಗಿ ಕಂದಾಯ ಇಲಾಖೆ ಮೂಲಕ 11,72229 ಹೆಕ್ಟೇರ್‌ ಜಾಗ ನೀಡಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪ ನೀಡಿದ್ದು , ಈ ತೀರ್ಪನ್ನು ಪುನರ್ ಪರಿಶೀಲಿಸಲು ಸರಕಾರ ವ್ಯವಸ್ಥೆ ಮಾಡುವುದಕ್ಕೆ ಕಂದಾಯ ಸಚಿವರ ಮೂಲಕ ಸಮಾಲೋಚನೆ ಮಾಡುವುದು .
( ನ್ಯಾಯಾಲಯದ ತೀರ್ಪಿನಂತೆ 30 ಸಾವಿರ ಎಕರೆಯಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಸಾವಿರಾರು ಮಂದಿ ರೈತರ ಜೀವನಕ್ಕೆ ತೊಂದರೆಯಾಗುತ್ತದೆ ಮತ್ತು ರೈತರು ಈಗಾಗಲೇ ಪೈಸಾರಿ ಜಾಗದಲ್ಲಿ ವಾಸ , ಕೃಷಿ ಮಾಡಿಕೊಂಡಿದ್ದು ಅಕ್ರಮ – ಸಕ್ರಮದಡಿ ಜಾಗ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ)
ರೈತರು , ವಿಮಾ ಕಂತು ಪಾವತಿಸಿದ ಪ್ರಧಾನಮಂತ್ರಿ ಪಸಲ್‌ಭಿಮಾ ಯೋಜನೆಯಡಿಯಲ್ಲಿ ರೈತರ ಬೆಳೆ ನಷ್ಟಕ್ಕೆ ಅನುಗುಣವಾಗಿ ಸಕಾಲದಲ್ಲಿ ಪರಿಹಾರವನ್ನು ಒದಗಿಸಿಕೊಡುವುದಕ್ಕೆ ಒತ್ತಡ ಮಾಡುವುದು .
ಕೊಡಗು ಜಿಲ್ಲೆಯಲ್ಲಿ ಅತಿವಥಷ್ಟಿಯಿಂದ ಕಾಫಿ , ಅಡಿಕೆ ಮತ್ತು ಕರಿಮೆಣಸು ಬೆಳೆ ನಷ್ಟವಾಗಿದ್ದು , ಜಿಲ್ಲೆಯನ್ನು ಅತಿವೃಷ್ಟಿ ಜಿಲ್ಲೆಯೆಂದು ಘೋಷಣೆ ಮಾಡುವುದು ಮತ್ತು ಪರಿಹಾರ ಮೊತ್ತವನ್ನು ಹೆಚ್ಚಿಸುವುದು ಹಾಗೂ ಸಕಾಲದಲ್ಲಿ ಕೊಡುವಂತೆ ವ್ಯವಸ್ಥೆ ಮಾಡುವುದು .
ಅಸ್ಸಾಮಿಗಳ ಸೋಗಿನಲ್ಲಿ ಬಾಂಗ್ಲಾದೇಶಿಗರು , ಕೊಡಗು ಜಿಲ್ಲೆಗೆ ನುಸುಳುತ್ತಿರುವರನ್ನು ತಡೆಯುವುದಕ್ಕೆ ಕಾನೂನು ಕ್ರಮ ಒದಗಿಸಬೇಕು ಮತ್ತು ಅಸ್ಸಾಮಿ ಕಾರ್ಮಿಕರಿಂದ ರೈತರ ಮೇಲೆ ಆಗುವ ತೊಂದರೆಗಳ ಬಗ್ಗೆ ಗಮನ ಹರಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು .
ಹಳ್ಳಿಯಲ್ಲಿರುವ ಅನುದಾನಿತ ಖಾಸಗಿ ಶಾಲೆಗಳ ಶಿಕ್ಷಕರ ನೇಮಕಕ್ಕೆ ಅನುದಾನವನ್ನು ಸರಕಾರ ಒದಗಿಸಿಕೊಡುವುದಕ್ಕೆ ವ್ಯವಸ್ಥೆ ಮಾಡುವುದು . ಇದರಿಂದ ರೈತರ ಮಕ್ಕಳಿಗೆ ಹೆಚ್ಚು ಅನುಕೂಲವಾಗುವುದು ಎಂದು ಅವರು ಮಾಡಿದ ಮನವಿಯಲ್ಲಿ‌ ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.