ಸುಳ್ಯದಲ್ಲಿ ಜೇನು ಪೆಟ್ಟಿಗೆ ಹಾಗೂ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮ

Advt_Headding_Middle


ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು ಮತ್ತು ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯದಲ್ಲಿ ೫ ದಿನಗಳ ಜೇನು ಕೃಷಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತರಬೇತಿ ಪಡಕೊಂಡವರಿಗೆ ನ. ೧೭ ರಂದು ಜೇನು ಪೆಟ್ಟಿಗೆ ಹಾಗೂ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮ ಜರಗಿತು. ಈ ಸಮಾರಂಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು ಇದರ ರಾಜ್ಯ ನಿರ್ದೇಶಕರಾದ ಡಾ. ಮೋಹನ್ ರಾವ್, ಉಪನಿರ್ದೇಶಕರುಗಳಾದ ಬಾಲಕೃಷ್ಣ ಮತ್ತು ನಿಂಗದೊರೈ ಉಪಸ್ಥಿತರಿದ್ದರು. ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರ ಕೋಲ್ಚಾರ್‌ರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.

 


ಕೆ.ವಿ.ಐ.ಸಿ ಯ ರಾಜ್ಯ ನಿರ್ದೇಶಕರಾದ ಡಾ. ಮೋಹನ್ ರಾವ್ ಮಾತನಾಡಿ ಸರಕಾರದಿಂದ ಮತ್ತು ಆಯೋಗದಿಂದ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಕೃಷಿಯಲ್ಲಿ ರಾಸಾಯನಿಕಗಳನ್ನು ಕಡಿಮೆ ಮಾಡುವುದರೊಂದಿಗೆ ಜೇನು ನೋಣಗಳ ಸಂತತಿಗಳನ್ನು ಹೆಚ್ಚಿಸಲು ಸಲಹೆ ನೀಡಿ ಕೃಷಿಕರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ ಚಂದ್ರ ಕೋಲ್ಚಾರ್ರವರು ಮಾತನಾಡಿ ಜೇನು ಕೃಷಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಬೆಳೆ ವಿಮೆ ಒದಗಿಸುವುದು, ಮತ್ತು ಜೇನು ಪರಿಕರಗಳಿಗೆ ಸಹಾಯಧನವನ್ನು ಸಹಕಾರಿ ಸಂಘದ ಮುಖಾಂತರ ವಿತರಿಸುವಂತೆ ವಿನಂತಿಸಿದರು.
ವ್ಯವಸ್ಥಾಪನಾ ನಿರ್ದೇಶಕರಾದ ತಿಮ್ಮಯ್ಯ ತಿಂಡಿಮನೆ ಇವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತರಬೇತಿಯ ವರದಿಯನ್ನು ಶಾಖಾ ವ್ಯವಸ್ಥಾಪಕರಾದ ಚೈತ್ರ ಯಸ್. ಮಂಡಿಸಿದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಎ.ಟಿ. ಕುಸುಮಾಧರರವರು ವಂದಿಸಿದರು. ಕೆವಿಐಸಿಯ ಮುಖ್ಯ ತರಬೇತುದಾರರಾದ ವೀರಪ್ಪ ಗೌಡ ಕೆ. ಇವರು ೫ ದಿನಗಳ ತರಬೇತಿಯನ್ನು ನಡೆಸಿಕೊಡುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

 


Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.