ಸುಳ್ಯ‌ ವೈದ್ಯರ ಸಂಘದ ಪದಗ್ರಹಣ ಸಮಾರಂಭ

Advt_Headding_Middle

 

 

ಸುಳ್ಯ ಭಾರತೀಯ ವೈದ್ಯ ಸಂಘದ 2021-22 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ವೀಣಾ ಎನ್, ಕಾರ್ಯದರ್ಶಿ ಡಾ. ರವಿಕಾಂತ್ ಜಿ.ಒ. ರವರ ನೇತೃತ್ವದ ತಂಡದ ಪದಪ್ರದಾನ ಸಮಾರಂಭ ನ.19 ರಂದು ಸುಳ್ಯದ ರೋಟರಿ ಸಮುದಾಯ ಭವನದಲ್ಲಿ ನಡೆಯಿತು.

ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಸುರೇಶ್ ಕುಡ್ವ ಅನುಸ್ಥಾಪನ ಅಧಿಕಾರಿಯಾಗಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸುಳ್ಯ ಐ.ಎಂ.ಎ. ಅಧ್ಯಕ್ಷ ಡಾ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪದಪ್ರದಾನ ಸಮಾರಂಭದ ಬಳಿಕ ನೂತನ ಅಧ್ಯಕ್ಷೆ ಡಾ.ವೀಣಾ ಎನ್ ರವರ ಅಧ್ಯಕ್ಷತೆಯಲ್ಲಿ ‌ಕಾರ್ಯಕ್ರಮ ಮುಂದುವರಿಯಿತು.

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಚಿದಾನಂದ ಕೆ.ವಿ. ಮುಖ್ಯ ಅತಿಥಿಗಳಾಗಿದ್ದರು.

 

 

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಉಪಾಧ್ಯಕ್ಷ ಡಾ. ಕೆ.ಆರ್. ಕಾಮತ್, ವೈದ್ಯಕೀಯ ಸಂಘದ ರಾಜ್ಯ ಶಾಖೆ ಕಾರ್ಯಕಾರಿಣಿ ಸದಸ್ಯ ಡಾ. ಅಣ್ಣಯ್ಯ ಕುಲಾಲ್, ಐ.ಎಂ. ಎ. ಮಾಜಿ ಅಧ್ಯಕ್ಷೆ ಡಾ.ಗೀತಾ ದೊಪ್ಪ, ಕೇಂದ್ರ ಕಾರ್ಯಕಾರಿಣಿ ಸದಸ್ಯ ಡಾ.ಗಣೇಶ್ ಪ್ರಸಾದ್‌ ಮುದ್ರಾಜೆ ಗೌರವ ಉಪಸ್ಥಿತರಿದ್ದರು.

 

 


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಜಿ.ಕೆ. ಭಟ್ ಹಾಗೂ ರಾಜ್ಯಾಧ್ಯಕ್ಷ ಡಾ.ಸುರೇಶ್ ಕುಡ್ವ ರನ್ನು ಸನ್ಮಾನಿಸಲಾಯಿತು.

ಐ.ಎಂ.ಎ. ಸುಳ್ಯ ಶಾಖೆ ಕೋಶಾಧಿಕಾರಿ ಡಾ.ಗಣೇಶ್ ‌ಭಟ್, ನೂತನ ಕೋಶಾಧಿಕಾರಿ ಡಾ. ಸೌಮ್ಯ ಉಪಸ್ಥಿತರಿದ್ದರು.

ಐ.ಎಂ.ಎ. ಕಾರ್ಯದರ್ಶಿ ಡಾ.ರವಿಶಂಕರ್
ವಾಚಿಸಿದರು. ಡಾ.ಕರುಣಾಕರ ಕೆ.ವಿ.‌ ರಾಜ್ಯಾಧ್ಯಕ್ಷರನ್ನು ಪರಿಚಯಿಸಿದರು.
ಡಾ.ಭವ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಅಮಿತ್‌ ಕಾರ್ಯಕ್ರಮ ‌ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.