ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಿಬ್ಬಂದಿಗಳ ನೇಮಕಾತಿ ಸಂದರ್ಭ ಸ್ಥಳೀಯರಿಗೆ ಆದ್ಯತೆ ನೀಡಿ

Advt_Headding_Middle
Advt_Headding_Middle

 

ಬ್ಲಾಕ್ ‌ಕಾಂಗ್ರೆಸ್‌ ಉಪಾಧ್ಯಕ್ಷ ‌ಪರಶುರಾಮ ಚಿಲ್ತಡ್ಕ ಒತ್ತಾಯ

 

ಪ್ರಸಿದ್ದ ಪುಣ್ಯ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಿಬ್ಬಂದಿಗಳ ನೇಮಕಾತಿ ಹಾಗೂ ಅಲ್ಲಿಯ ಎಲ್ಲ‌ ಕೆಲಸ ಕಾರ್ಯ ನಡೆಸುವಾಗ ಸ್ಥಳೀಯರಿಗೆ ಆದ್ಯತೆ ‌ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪರಶುರಾಮ ಚಿಲ್ತಡ್ಕ‌ ಒತ್ತಾಯಿಸಿದ್ದಾರೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಿಬ್ಬಂದಿಗಳ ನೇಮಕಾತಿ ಆಗುತ್ತಿರುವುದು ಸಂತೋಷ. ಆದರೆ ನೇಮಕಾತಿ ಸಂದರ್ಭದಲ್ಲಿ ಸರಕಾರ ಹಾಗೂ ಅಲ್ಲಿಯ ಆಡಳಿತ ಮಂಡಳಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು.

ಈಗಾಗಲೇ ಸುಳ್ಯ ಹಾಗೂ ಕಡಬ ತಾಲೂಕಿನ ಸುತ್ತಮುತ್ತಲಿನವರು ಅರ್ಜಿ ಸಲ್ಲಿಸಿದ್ದರೂ ಅವರನ್ನು ನೇಮಕಾತಿ‌ ಮಾಡದೆ ಹೊರಗಿನವರಿಗೆ ಆದ್ಯತೆ‌ ನೀಡಲಾಗಿದೆ. ಇದು ಸರಿಯಲ್ಲ. ಸ್ಥಳೀಯ ದೇವಸ್ಥಾನಕ್ಕೆ ಸ್ಥಳೀಯರಿಗೆ ಮೊದಲ ಆದ್ಯತೆ ಸಿಗಬೇಕೆಂದು ನಮ್ಮ ಆಗ್ರಹ ಎಂದು‌ ಹೇಳಿದರು.

ದೇವಸ್ಥಾನದ ಸರ್ಪಸಂಸ್ಕಾರ ನಡೆಸುವ ಪೂಜೆಯಲ್ಲಿ ಸ್ಥಳೀಯ ಬ್ರಾಹ್ಮಣರಿಗೆ ಆದ್ಯತೆ ನೀಡಬೇಕು. ಅಲ್ಲಿಯ ಕನ್ ಸ್ಟ್ರಕ್ಷನ್ ಕೆಲಸ ದಲ್ಲಿಯೂ ಸ್ಥಳೀಯ ಕಾರ್ಮಿಕರಿಗೆ ಕೆಲಸ ಕೊಡಬೇಕು.

ವ್ಯಾಪಾರ ಮಳಿಗೆಯಲ್ಲಿಯೂ ಸ್ಥಳೀಯ ರನ್ನು ಪರಿಗಣಿಸಬೇಕೆನ್ನುವುದು ನಮ್ಮ‌ಬೇಡಿಕೆ. ಈ ಬಗ್ಗೆ ಸ್ಥಳೀಯ ರು ಈಗಾಗಲೇ ಬೇಡಿಕೆ ಇಟ್ಟಿದ್ದಾರೆ ಎಂದ ಅವರು, ಇದು ರಾಜಕೀಯ ಹೇಳಿಕೆ ಅಲ್ಲ. ಸ್ಥಳೀಯ ಯುವಕರ ಅಭಿಪ್ರಾಯವನ್ನು ಮುಂದಿಟ್ಟಿದ್ದೇವೆ.

ಆದ್ದರಿಂದ ಈ‌ ಭಾಗದ ಶಾಸಕರು, ದೇವಸ್ಥಾನದ ಆಡಳಿತ ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರವಿ ಗುಂಡಡ್ಕ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.