ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ

Advt_Headding_Middle

ಸುಳ್ಯ ಭಾಗದ ಗೌಡ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಿ

ಸ್ವಾಮೀಜಿ, ಸಮುದಾಯದ ಮುಖಂಡರ ಮಧ್ಯ ಪ್ರವೇಶಕ್ಕೆ ಗೌಡ ಸಮಾಜ ಹಿತರಕ್ಷಣಾ ವೇದಿಕೆ ಆಗ್ರಹ

ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಚುನಾವಣೆಯ ವಿಷಯದಲ್ಲಿ ಸುಳ್ಯ ಭಾಗದ ಗೌಡ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಸ್ವಾಮೀಜಿಯವರು, ಸಮುದಾಯದ ಮುಖಂಡರು ಮುಂದಾಗಬೇಕು ಎಂದು ಗೌಡ ಸಮಾಜ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.


ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೌಡ ಸಮಾಜದ ಹಿತರಕ್ಷಣಾ ವೇದಿಕೆಯ ಸಂಚಾಲಕ ಯತೀಶ್ ಆರ್ವಾರ್ ರವರು ಮಾತನಾಡಿ “ಸುಳ್ಯಕ್ಕೆ ಸಂಬಂಧಿಸಿದಂತೆ ಕುರುಂಜಿ ವೆಂಕಟ್ರಮಣ ಗೌಡರ ಸಾಧನೆ ಕೇವಲ ಒಬ್ಬ ವ್ಯಕ್ತಿ, ಕುಟುಂಬ, ಜಾತಿಗೆ ಸೀಮಿತವಾಗದೆ ಇಡೀ ಸಮಾಜದ ಸಾಧನೆಯಾಗಿದೆ.

ಈ ಕಾರಣದಿಂದ ಕುರುಂಜಿಯವರು ಕಟ್ಟಿರುವ ಸಂಸ್ಥೆಯು ಸುಳ್ಯದ ಗುರುತಾಗಿದೆ. ಆದರೆ ಇದರ ನಾಯಕತ್ವ ವಹಿಸಿರುವ ಕುರುಂಜಿಯವರ ಎರಡು ಕಣ್ಣುಗಳಂತಿರುವ ಅವರ ಇಬ್ಬರು ಪುತ್ರರು, ಒಕ್ಕಲಿಗ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿರುವುದು ಸಮಾಜದಲ್ಲಿ ಗೊಂದಲ, ಬೇಸರ, ನೋವಿಗೆ ಕಾರಣವಾಗಿದೆ. ವಿಶೇಷವಾಗಿ ಗೌಡ ಸಮುದಾಯ ಈ ಬೆಳವಣಿಗೆಯನ್ನು ಅಸ್ವೀಕಾರ ಮಾಡಿದೆ.

ಕೆವಿಜಿಯವರ ಮಕ್ಕಳ ಸ್ಪರ್ಧೆ ಸಮಂಜಸವಲ್ಲದ ಈ ಬೆಳವಣಿಗೆ ನಡೆಯಲು ಕೇವಲ ವೈಯಕ್ತಿಕ ಅಥವಾ ಕೌಟುಂಬಿಕ ಭಿನ್ನಮತ ಮಾತ್ರ ಕಾರಣವಲ್ಲದೆ, ಬಾಹ್ಯ ಶಕ್ತಿಗಳ ಕುಮ್ಮಕ್ಕು ಸಹ ಇರಬಹುದೆಂದು ಗೌಡ ಸಮುದಾಯವು ಬಲವಾದ ಸಂಶಯವನ್ನು ವ್ಯಕ್ತ ಪಡಿಸುತ್ತಿದ್ದು, ಇದು ಹೌದಾದರೆ ನಮ್ಮ ವೇದಿಕೆಯು ಅಂತಹ ಸಮಾಜಘಾತುಕ ಶಕ್ತಿಗಳನ್ನು ತೀವ್ರವಾಗಿ ಖಂಡಿಸುತ್ತದೆ. ಹಾಗೂ ಇದಕ್ಕೆ ಅವಕಾಶ ನೀಡಬಾರದೆಂದು ಸಂಬಂಧಿಸಿದವರಲ್ಲಿ ಆಗ್ರಹಿಸುತ್ತದೆ.

ಸುಳ್ಯ ಭಾಗದ ಗೌಡ ಸಮುದಾಯವು ಜೇನು ಗೂಡಿನ ರೀತಿಯಲ್ಲಿ ಒಗ್ಗಟ್ಟಾಗಿದ್ದು ಇದು ಸಮುದಾಯಕ್ಕೆ ಮತ್ತು ಸಮಾಜಕ್ಕೆ ಹೆಮ್ಮೆಯಾಗಿದೆ. ಆದರೆ ಇಂದು ನಡೆಯುತ್ತಿರುವ ಬೆಳವಣಿಗೆಯ ಕಾರಣದಿಂದ ಗೌಡ ಸಮುದಾಯ ಒಡೆದರೆ ಅದು ಇಡೀ ಸಮಾಜಕ್ಕೆ ಋಣಾತ್ಮಕ ಪರಿಣಾಮ ಬೀರಬಹುದಾಗಿದ್ದು ಮಾತ್ರವಲ್ಲದೆ ವಿಶೇಷವಾಗಿ ಗೌಡ ಸಮುದಾಯ ದ್ವಂದ್ವಪೂರಿತ ವಿಘಟನೆಯ ಹಾದಿಗೆ ಸಾಗಬಹುದಾದ ಸಾಧ್ಯತೆಯನ್ನು ವೇದಿಕೆಯು ಬಲವಾಗಿ ಎಚ್ಚರಿಸುತ್ತದೆ.

ಪ್ರಸ್ತುತ ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯ ಸ್ಪರ್ಧೆಗೆ ಮುಂದಾಗಿರುವ ಗೌಡ ಸಮುದಾಯದ 3ಮಂದಿ ಕೂಡಾ ತಾವೇ ಪರಸ್ಪರ ಮಾತುಕತೆಯ ಮೂಲಕ ಸರ್ವ ಸಮ್ಮತಿಯ ಒಬ್ಬರು ಮಾತ್ರ ಸ್ಪರ್ಧೆ ಮಾಡಿ ಸಮಾಜದಲ್ಲಿ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟು ಗೌಡ ಸಮುದಾಯದ ಹೆಮ್ಮೆಗೆ ಭಾಜನರಾಗಬೇಕೆಂದು ವೇದಿಕೆಯು ಆಗ್ರಹಿಸುತ್ತದೆ.

ವಿಶೇಷವಾಗಿ ಗೌಡ ಸಮುದಾಯದಲ್ಲಿ ಉಂಟಾಗಿರುವ ಈ ಗೊಂದಲವನ್ನು ಸರಿಪಡಿಸಿ ಸಮುದಾಯದ ಒಗ್ಗಟ್ಟನ್ನು ಇನ್ನಷ್ಟು ಗಟ್ಟಿಗೊಳ್ಳಲು ಸೌಹಾರ್ದಯುವತಾದ ನಿರ್ಧಾರವನ್ನು ಮಾತುಕತೆಯ ಮೂಲಕ ಕಂಡುಕೊಳ್ಳಬೇಕೆಂದು ಸ್ವಾಮೀಜಿಯವರಲ್ಲಿ, ಸಮುದಾಯದ ಮುಖಂಡರಲ್ಲಿ ಹಾಗೂ ಈ ಮತ ಕ್ಷೇತ್ರದಲ್ಲಿನ 3 ಜಿಲ್ಲೆಗಳಲ್ಲಿನ ಗೌಡ ಜಾತಿಯ ವಿವಿಧ ಸಂಘಟನೆಗಳಲ್ಲಿ ವೇದಿಕೆಯು ಪ್ರಬಲವಾಗಿ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.
ನಾವು ಈಗಾಗಲೇ ಸಮಾಜದಲ್ಲಿ ಸಕ್ರಿಯವಾಗಿರುವ ಗೌಡ ಸಮುದಾಯದ ಸಂಘಟನೆಯವಲ್ಲಿ ಈ ವಿಚಾರ ಪ್ರಸ್ತಾಪಿಸಿzವೆ.

ಅವರು ಪ್ರಯತ್ನ ಪಟ್ಟಿದ್ದಾರೆಂಬ ಅರಿವೂ ನಮ್ಮಲ್ಲಿದೆ. ಆದರೆ ಅದು ಫಲ ಕಂಡಿಲ್ಲ. ಫಲ ಕಾಣದಿದ್ದರೆ ಪರಿಣಾಮ ಸಮಾಜದ ಮೇಲಾಗುತ್ತದೆ ಎಂದ ಯತೀಶ್ ರವರು, ಅವರಿಬ್ಬರು ಚುನಾವಣೆಗೆ ನಿಂತರೇ ಚುನಾವಣೆಗೆ ಹೋಗುವುದಿಲ್ಲ ಎಂಬ ಮಾತನ್ನೂ ಕೆಲವರು ಹೇಳುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಚುನಾವನೆಗೆ ಹೋಗಬೇಡಿ ಎಂದು ನಾವು ಹೇಳಲು ಬರುವುದಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಗೊಂದಲ ನಿವಾರಣೆಯಾಗಿ ಒಗ್ಗಟ್ಟು ಮೂಡಬೇಕೆನ್ನುವುದು ನಮ್ಮ ಒತ್ತಾಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌಡ ಸಮಾಜ ಹಿತರಕ್ಷಣಾ ವೇದಿಕೆ ಸದಸ್ಯರುಗಳಾದ ಕುಸುಮಾಧರ ಎ.ಟಿ., ಮನುದೇವ್ ಪರಮಲೆ, ಅನೂಪ್ ಬೀಲಿಮಲೆ, ಮಹೇಶ್ ಮೂಲೆಮಜಲು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.