ಮರ್ಕಂಜ : ನಿರಂತರ ಮಳೆಗೆ ಪನ್ನೆ ಸೇತುವೆಯ ಮಣ್ಣು ಕುಸಿತ

Advt_Headding_Middle

 

ಕುಸಿತಗೊಂಡಲ್ಲಿಗೆ ಮಣ್ಣು ಹಾಕಿ ಸರಿಮಾಡಿದ ಗ್ರಾ.ಪಂ. ಉಪಾಧ್ಯಕ್ಷ – ಸದಸ್ಯರು

ಮಾದರಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ಅರಂತೋಡು ಸೇವಾಜೆ ರಸ್ತೆಯು ಪನಿವಾರ ಸಾನಿಧ್ಯದಿಂದ ಮೊದಲು ಸಿಗುವ ಪನ್ನೆ ಎಂಬಲ್ಲಿರುವ ಸೇತುವೆಯೊಂದರ ಮಣ್ಣು ಕುಸಿದು ಮರ್ಕಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರೇ ಮಣ್ಣು ಹಾಕಿಸಿ ಸರಿಪಡಿಸಿದ ಘಟನೆ ಇಂದು ವರದಿಯಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಅರಂತೋಡು ಎಲಿಮಲೆಯ ರಸ್ತೆಯ ಚರಂಡಿಗಳು ಸರಿಯಿಲ್ಲದೇ ಮಳೆ ನೀರು ರಸ್ತೆಯಲ್ಲಿ ಬಂದು ಸೇತುವೆಯ ಮೇಲೆ ನಿಂತು ಪನ್ನೆ ಸೇತುವೆಯ ಮಣ್ಣು ಕುಸಿದು ಭಾರೀ ಗಾತ್ರದ ರಂಧ್ರ ನಿರ್ಮಾಣವಾಗಿತ್ತು. ಇದು ವಾಹನ ಸವಾರರಿಗೆ ಭಾರೀ ಅಪಾಯವನ್ನು ತಂದೊಡ್ಡುವಂತಿತ್ತು. ಇದನ್ನು ಅರಿತ ಮರ್ಕಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವಿಂದ ಅಳವುಪಾರೆಯವರು ತಕ್ಷಣ ಸ್ಪಂದಿಸಿ, ಟಿಪ್ಪರ್ ಮೂಲಕ ಮಣ್ಣು ತರಿಸಿ, ಹಾಕಿ ಸೇತುವೆಯಲ್ಲಿ ನಿರ್ಮಾಣವಾದ ರಂಧ್ರವನ್ನು ಸರಿಪಡಿಸಿದರು. ಮರ್ಕಂಜ ಗ್ರಾ.ಪಂ. ಸದಸ್ಯ ರಾಜೇಂದ್ರ ಕೊಚ್ಚಿ ಸಹಕರಿಸಿದರು. ಇಲಾಖೆಯವರು ಮಾಡಬೇಕಾದ ಕಾರ್ಯವನ್ನು ಜನಪ್ರತಿನಿಧಿಗಳು ಸ್ಪಂದಿಸಿ, ಸ್ವತಃ ಮಾಡಿ ಮಾದರಿಯಾದ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.

“ಪನ್ನೆ ಸೇತುವೆಯಲ್ಲಿ ಮಳೆ ನೀರು ಬಂದು ರಂಧ್ರ ನಿರ್ಮಾಣ ವಾಗಿತ್ತು. ಇದರಿಂದ ಸಾರ್ವಜನಿಕ ರಿಗೆ ತೊಂದರೆಯಾಗುವುದನ್ನು ಮನಗಂಡು ಇಲಾಖೆಯವರಿಗೆ ಕಾಯದೇ, ಸಾರ್ವಜನಿಕರಿಗೆ ಯಾವುದೇ ಅಪಾಯವಾಗಬಾರದೆಂದು ತಕ್ಷಣ ಮಣ್ಣು ಹಾಕಿ ಸರಿಪಡಿಸಿದ್ದೇವೆ.
ಗೋವಿಂದ ಅಳವುಪಾರೆ, ಉಪಾಧ್ಯಕ್ಷ ರು, ಗ್ರಾ.ಪಂ. ಮರ್ಕಂಜ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.