ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ; ಸುಳ್ಯದಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸುತ್ತಿರುವ ಮತದಾರರು

Advt_Headding_Middle

 

ಕನ್ನಡ ಸಾಹಿತ್ಯ ಪರಿಷತ್ತಿಗೆ ಇಂದು ಮತದಾನ ನಡೆಯುತ್ತಿದ್ದು ಸುಳ್ಯದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಸುಳ್ಯ ತಾಲೂಕು ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ತಾಲೂಕು ಕಛೇರಿಯಲ್ಲಿ ಮತದಾನಕ್ಕೆ ಕಲ್ಪಿಸಲಾಗಿದ್ದು ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಲು ಆಗಮಿಸುತ್ತಿದ್ದಾರೆ. ಸುಳ್ಯ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ ಸಹಾಯಕ ಚುನಾವಣಾಧಿಕಾರಿ ಯಾಗಿದ್ದು, ಉಪನ್ಯಾಸಕ ರಾಮಚಂದ್ರ ಮುಗುಳಿ ಮತಗಟ್ಟೆಯ ಅಧ್ಯಕ್ಷರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹುದ್ದೆಗೆ ದಾಖಲೆಯ 21 ಸದಸ್ಯರು ಚುನಾವಣೆಗೆ ನಿಂತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಪ್ರದೀಪ್ ಕುಮಾರ್ ಕಲ್ಕೂರ ಚುನಾವಣೆಯಲ್ಲಿ ಇರದೇ ಇರುವುದರಿಂದ ಇಬ್ಬರು ಸ್ಪರ್ಧಾಳುಗಳ ಮಧ್ಯೆ ಚುನಾವಣೆ ಗರಿಗೆದರಿದೆ. ಎಂ.ಆರ್. ವಾಸುದೇವ ಹಾಗೂ ಎಂ.ಪಿ. ಶ್ರೀನಾಥ್ ಜಿಲ್ಲಾಧ್ಯಕ್ಷ ಸ್ಥಾನದ ಕಣದಲ್ಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.