ನ.27,28 : ಮರ್ಕಂಜದ ಅಂಗಡಿಮಜಲು ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವ

Advt_Headding_Middle

 

 

ಮರ್ಕಂಜ ಗ್ರಾಮದ ಅಂಗಡಿಮಜಲು ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವವು ನ.27 ಮತ್ತು 28ರಂದು ನಡೆಯಲಿದೆ.

ಮರ್ಕಂಜ ಗ್ರಾಮದ ಅಂಗಡಿಮಜಲು ಎಂಬಲ್ಲಿ ಪೂರ್ವಜರು ಆರಾಧನೆಯಂತೆ ಪೊಡಿಯ ಮುಗೇರ ಎಂಬವರು ಆರಾಧಿಸಿಕೊಂಡು ಬಂದ ದೈವಗಳ ಸರಿಯಾದ ಆರಾಧನೆ ಇಲ್ಲದ ಸಂದರ್ಭದಲ್ಲಿ ಅವರ ಮಗನಾದ ರಾಧಾಕೃಷ್ಣರವರು ಆರಾಧಿಸಿಕೊಂಡು ಬರುತ್ತಿದ್ದರು. ಈ ಸಂದರ್ಭ ಕುಟುಂಬದವರು ಯಾರು ಇರಲಿಲ್ಲ. ಆಗ ತೊಡಿಕಾನದ ಚಾಂಬಾಡು ಕುಟುಂಬದ ಯಜಮಾನ ಗುರುವ ಎಂಬವರಿಗೆ ಅನಾರೋಗ್ಯ ಬಂದು ಒಂದು ದಿನದ ಪ್ರಶ್ನಾ ಚಿಂತನೆ ನಡೆಸಿದಾಗ ಪೂರ್ವಜರು ಆರಾಧಿಸಿಕೊಂಡು ಬರುತ್ತಿದ್ದ ದೈವಗಳ ಆರಾಧನೆ ನಿಂತು ಹೋಗಿರುವುದಾಗಿಯೂ, ಅದನ್ನು ಮುಂದುವರೆಸುವಂತೆಯೂ ಕಂಡುಬಂದಿತ್ತು. ಅದರಂತೆ ಕುಟುಂಬದ ಯಜಮಾನ ಗುರುವ ಚಾಂಬಾಡುರವರ ನೇತೃತ್ವದಲ್ಲಿ ತರವಾಡು ಮನೆ ನಿರ್ಮಿಸಲು ಮುಂದಾದರು. ಊರಿನ ಮುಖಂಡರುಗಳಾ ಹರೀಶ್ ಕಂಜಿಪಿಲಿ,  ಕಿಶೋರ್ ಕುಮಾರ್ ಉಳುವಾರು,  ಪುಷ್ಪ ಮೇದಪ್ಪ, ಪ್ರಭಾಕರ ರೈ, ಅಮೃತ ಕುಮಾರ್ ರೈ, ಶಾಂತಪ್ಪ ರೈ ಅಂಗಡಿಮಜಲು ಮುಂತಾದವರ ಉಪಸ್ಥಿತಿಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಿದರು. ಇದರ ಅಧ್ಯಕ್ಷರಾಗಿ ಬಾಬು ಅಂಗಡಿಮಜಲುರವರನ್ನು ಆಯ್ಕೆ ಮಾಡಲಾಯಿತು.

ಅದರಂತೆ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಊರ ಹಾಗೂ ಪರವೂರ ದಾನಿಗಳು ಹಾಗೂ ಕರ್ನಾಟಕ ಸರಕಾರದ ವಿಶೇಷ ಅನುದಾನಗಳನ್ನು ಬಳಸಿಕೊಂಡು ಅಂಗಡಿಮಜಲಿನಲ್ಲಿ ತರವಾಡು ಮನೆ ಎದ್ದು ನಿಂತಿದೆ. ಮೇ.2 ಮತ್ತು 3 ರಂದು ಪ್ರತಿಷ್ಠಾ ಕಾರ್ಯಕ್ರಮ ಹಾಗೂ ದೈವಗಳ ನೇಮೋತ್ಸವ ಮತ್ತು ಸಭಾ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ ಕೊರೋನಾ ವೈರಸ್ ಹರಡವಿಕೆ ತಡೆಗಟ್ಟಲು ಕಾರ್ಯಕ್ರಮಗಳಿಗೆ ಸರಕಾರ ವಿಧಿಸಿದ ನಿರ್ಬಂಧದಿಂದಾಗಿ ಪ್ರತಿಷ್ಠಾ ಕಾರ್ಯಕ್ರಮ ಮಾತ್ರ ಮಾಡಲಾಯಿತು. ಇದೀಗ ಸರಕಾರ ವಿಧಿಸಿದ ನಿರ್ಭಂಧಗಳನ್ನು ತೆರವು ಗೊಳಿಸಿದ ಕಾರಣ ದೈವಗಳ ನೇಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ : ನ.27ರಂದು ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ಹಿಡಿಯುವುದು, ರಾತ್ರಿ ಚೌಕಾರು ಮಂತ್ರವಾದಿ ಗುಳಿಗ, ಪಾಷಾಣಮೂರ್ತಿ, ಮಯ್ಯೋಂತಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ನ.28ರಂದು ಬೆಳಿಗ್ಗೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಬಳಿಕ ಕೊರಗಜ್ಜ ನೇಮ, ರಾಹುಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಗಳ‌ ಕೃಪೆಗೆ ಪಾತ್ರರಾಗಬೇಕೆಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಬು ಮೊಗೇರ ಅಂಗಡಿಮಜಲು ಹಾಗೂ ಕುಟುಂಬದ ಯಜಮಾನ ಗುರುವ ತೊಡಿಕಾನ ಚಾಂಬಾಡುರವರು ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.