ಎಣ್ಮೂರು ಗುತ್ತಿಗೆ ಬೈಲಿನ ನಾಗಪ್ರತಿಷ್ಟೆ ಮತ್ತು ದೈವಗಳ ಪ್ರತಿಷ್ಠಾ ಕಲಶ

Advt_Headding_Middle

 

ಎಣ್ಮೂರು ಗ್ರಾಮದ ಗುತ್ತಿಗೆ ಬೈಲಿನ ಪುರಾತನವಾಗಿದ್ದ ನಾಗರ ಕಟ್ಟೆಯ ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವೆಂಬರ್ 20 ಮತ್ತು 21ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ನಾಗ ಪ್ರತಿಷ್ಟೆ ರಕ್ತೇಶ್ವರಿ ಮತ್ತು ಗುಳಿಗ ದೈವದ ಪ್ರತಿಷ್ಠೆ ಕಲಶವು ನಡೆಯಿತು. ನ. 18ರಂದು ಸರ್ಪ ಸಂಸ್ಕಾರ ನಡೆದು ನ. 20 ರಂದು ದೇವತಾ ಪ್ರಾರ್ಥನೆಯೊಂದಿಗೆ ವೈದಿಕ ಕಾರ್ಯಕ್ರಮ, ಪ್ರಸಾದ ವಿತರಣೆ, ನವೆಂಬರ್ 21ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷ ಬಲಿ, ಅಷ್ಟ ವಟು ಆರಾಧನೆ, ಪಂಚಮಿ ವಿಂಶತಿ ಕಲಶಪೂಜೆ, ಬಳಿಕ ನಾಗ ಪ್ರತಿಷ್ಠೆ ಮತ್ತು ದೈವಗಳ ಪ್ರತಿಷ್ಠೆ, ಸಾನ್ನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಸೌಹಾರ್ದ ಧಾರ್ಮಿಕ ಸಮಿತಿ ಅಧ್ಯಕ್ಷ ಕಾಯರ ಬಾಲಕೃಷ್ಣ ಗೌಡ, ಉಪಾಧ್ಯಕ್ಷ ದಾವೂದ್ ಎಂ.,ಪ್ರಸಾದ್ ರೈ ಗುತ್ತು, ಬಾಲಕೃಷ್ಣ ಗೌಡ ಗುತ್ತಿಗೆ, ಕಾರ್ಯದರ್ಶಿ ದೇವಿಪ್ರಸಾದ್ ಎಣ್ಮೂರು, ಸಂಚಾಲಕ ಮಹಮ್ಮದ್ ವೈ ಗುತ್ತಿಗೆ, ಜತೆಕಾರ್ಯದರ್ಶಿ ಪಚ್ಚೋಲಿ ದೇವಿನಗರ, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎ.ಆರ್., ಸದಸ್ಯರಾದ ಕಾಂಟ್ರ್ಯಾಕ್ಟರ್ ಅಬ್ದುಲ್ಲಾ, ಇಸ್ಮಾಯಿಲ್ ಜಿ. ಮಹಮ್ಮದ್ ಫಾಸ್ಟ್ ಫುಡ್, ಅಬ್ದುಲ್ ಗುತ್ತಿಗೆ ಮನೆ, ಮಮ್ಮು ತರಕಾರಿ, ಉಮ್ಮರ್ ಬ್ಯಾರಿ ಗುತ್ತಿಗೆ ಮನೆ, ಮಹಮ್ಮದಾಲಿ ಜಿ., ಅಬ್ದುಲ್ ರಜಾಕ್ ಮೊಹಮ್ಮದ್ ಗುತ್ತಿಗೆ, ಸಿರಾಜ್ ಬೆಳಂದೂರು, ಅಂಗಾರ ದೇವಿನಗರ, ಮೇಲುಸ್ತುವಾರಿ ಸಮಿತಿ ಸದಸ್ಯರುಗಳಾದ ಕೆ.ಎನ್. ರಘುನಾಥ ರೈ ಕಟ್ಟ ಬೀಡು, ಎನ್ ಜಿ ಲೋಕನಾಥ ರೈ ಎಣ್ಮೂರು ಪಟ್ಟೆ, ರಮೇಶ್ ಕೋಟೆ, ಎನ್ ಜಿ ಪ್ರಭಾಕರ ರೈ ಪಟ್ಟೆ, ಸುಜಿತ್ ರೈ ಪಟ್ಟೆ, ಜಯರಾಮ ರೈ, ಯೋಗಾನಂದ ಉಳ್ಳೆಲಾಡಿ, ರಾಜೀವಿ ರೈ ಕಲ್ಲೇರಿ, ಪ್ರಶಾಂತ್ ಕುಮಾರ್ ಶೆಟ್ಟಿ ಕಟ್ಟ ಬೀಡು ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ ಬಾಲಕೃಷ್ಣ ರೈ ಪಿಕಪ್, ಕೆ. ಚೋಮ ದೇವಿ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ರಾಜೀವಿ ರೈ ಕಲ್ಲೇರಿ, ಎಡಮಂಗಲ ಪಂಚಾಯತ್ ಉಪಾಧ್ಯಕ್ಷೆ ರೇವತಿ ರಘು, ರಾಮಚಂದ್ರ ರೈ ಕಲ್ಲೇರಿ, ಪ್ರಕಾಶ್ ಕುಳಾಯಿತ್ತೋಡಿ ಅಲ್ಲದೆ ಊರವರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.