ಸುಳ್ಯ ತಮಿಳು ಕಲಾವಿದರ ವೇದಿಕೆಯ ಮಹಿಳಾ ಭಜನಾ ತಂಡ ಅಸ್ತಿತ್ವಕ್ಕೆ

Advt_Headding_Middle

 

ಸುಳ್ಯ ತಾಲೂಕು ತಮಿಳು ಕಲಾವಿದರ ವೇದಿಕೆಯ ಆಶ್ರಯದಲ್ಲಿ ಮಹಿಳಾ ಭಜನಾ ತಂಡವು ನ.೨೨ ರಂದು ಸುಳ್ಯ ಸಪ್ತಸ್ವರ ಸಂಗೀತ ಕಲಾ ಶಾಲೆಯಲ್ಲಿ ಅಸ್ತಿತ್ವಕ್ಕೆ ಬಂದಿತು.
ಭಜನಾ ತಂಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಮಿಳು ಕಲಾವಿದರ ‌ವೇದಿಕೆಯ ಅಧ್ಯಕ್ಷ ಕಣ್ಣದಾಸ್ ವಹಿಸಿದ್ದರು. ಹಿರಿಯರಾದ ಎಂ.ಪಳನಿಮುತ್ತು ದೀಪ ಬೆಳಗಿಸಿದರು. ಮುಖ್ಯ ಅಭ್ಯಾಗತರಾಗಿ ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ, ಸುದ್ದಿ ವರದಿಗಾರ ಶಿವಪ್ರಸಾದ್ ‌ಆಲೆಟ್ಟಿ ,ಬಾರ್ಪಣೆ ಮುತ್ತುಮಾರಿಯಮ್ಮದೇವಸ್ಥಾನದ ಗೌರವಾಧ್ಯಕ್ಷ ದಯಾಳನ್, ಸಂಘದ ‌ಪ್ರ. ಕಾರ್ಯದರ್ಶಿ ಮುತ್ತುಕುಮಾರಿ,‌ಭಜನಾ ತರಬೇತುದಾರ ಯೋಗಿಶ್ ಜಯನಗರ ವೇದಿಕೆಯಲ್ಲಿದ್ದರು. ಕು.ತೃಷಾ ಪ್ರಾರ್ಥಿಸಿದರು. ಉಪನ್ಯಾಸಕಿ ಜ್ಯೋತಿಲಕ್ಷ್ಮೀ ಸ್ವಾಗತಿಸಿದರು. ಪೆರುಮಾಳ್ ಐವರ್ನಾಡು ವಂದಿಸಿದರು. ರಮೇಶ್ ಮೇದಿನಡ್ಕ ಕಾರ್ಯಕ್ರಮ‌ ನಿರೂಪಿಸಿದರು. ನೂತನ ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು. ಕಲಾವಿದರ ವೇದಿಕೆಯ ಸದಸ್ಯರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.