ಸುಳ್ಯ ನಗರದ ಮುಖ್ಯರಸ್ತೆಯಲ್ಲಿ ದುರಸ್ತಿಗೊಳಗಾಗಿರುವ ಸ್ಲ್ಯಾಬ್ ಗಳ ಪರಿಶೀಲನೆ ನಡೆಸಿದ ನಗರ ಪಂಚಾಯತ್ ಅಧಿಕಾರಿಗಳು

Advt_Headding_Middle

 

ಕಳೆದ ಕೆಲವು ದಿನಗಳ ಹಿಂದೆ ಸುದ್ದಿ ಮಧ್ಯಮದ ಮೂಲಕ ಸುಳ್ಯ ನಗರದ ಮುಖ್ಯ ರಸ್ತೆಗಳಲ್ಲಿ ಹಲವಾರು ಕಡೆ ಚರಂಡಿಗೆ ಅಳವಡಿಸಿರುವ ಸ್ಲ್ಯಾಬ್ ಕಲ್ಲುಗಳು ಕುಸಿದು ಬಿದ್ದು ಸಾರ್ವಜನಿಕರು ಅನುಭವಿಸುವ ಸಮಸ್ಯೆಗಳ ಬಗ್ಗೆ ವರದಿ ಮಾಡಲಾಗಿತ್ತು.
ಇದರಿಂದ ಸಾರ್ವಜನಿಕರಿಗೆ ಆದ ತೊಂದರೆಗಳು ಮತ್ತು ಉಂಟಾಗಬಹುದಾದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ವರದಿಗಳನ್ನು ಬಿತ್ತರಿಸಲಾಗಿತ್ತು.
ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಇಂದು ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸ್ಲ್ಯಾಬ್ ಕುಸಿತಕ್ಕೊಳಗಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ ಮುಖ್ಯ ಅಧಿಕಾರಿ ಎಂ ಆರ್ ಸ್ವಾಮಿ ಮಾಧ್ಯಮದಲ್ಲಿ ಬಂದಿರುವ ವರದಿಯನ್ನು ಗಮನಿಸಿ ಸ್ಥಳಕ್ಕೆ ಭೇಟಿ ನೀಡಿದ್ದು ನಾಳೆಯಿಂದಲೇ ಮುರಿದು ಬಿದ್ದಿರುವ ಸ್ಲ್ಯಾಬ್ ಗಳ ಜೋಡಣೆ, ಹಾಗೂ ಫುಟ್ಪಾತ್ ಗಳ ಬದಿಯಲ್ಲಿರುವ ಹುಲ್ಲು ಮತ್ತು ಸಣ್ಣಪುಟ್ಟ ಗಿಡಗಳನ್ನು ಸ್ವಚ್ಛ ಮಾಡಿಸಿ ಕೊಡಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಆರೋಗ್ಯ ನಿರೀಕ್ಷಕ ಲಿಂಗರಾಜು, ಹಾಗೂ ಸಿಬ್ಬಂದಿ ವರ್ಗದವರು ಘಟನೆಗಳ ಕುರಿತು ಸುದ್ದಿ ಚಾನಲ್ ಮೂಲಕ ವರದಿ ಮಾಡಲು ತೆರಳಿದ ಸಂದರ್ಭ ಈ ಸಮಸ್ಯೆಗಳ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದ ಸ್ಥಳೀಯ ಉದ್ಯಮಿ ರಂಜಿತ್ ಪೂಜಾರಿ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.