ಪಾಂಡಿಗದ್ದೆ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ನೋಟ್ ಪುಸ್ತಕ ವಿತರಣೆ ಮತ್ತು ಇ-ಸ್ಲೇಟ್ ಕೊಡುಗೆ

Advt_Headding_Middle

ಪಾಂಡಿಗದ್ದೆ ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಇದೇ ದಿನ ನಡೆದ ಸಭಾ ಕಾರ್‍ಯಕ್ರಮದಲ್ಲಿ ಚಾಚಾ ನೆಹರೂರವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ, ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವ ಜಯರಾಮ ಕಂಬಳರವರು ಕೊಡಮಾಡಿದ ಸುಮಾರು 1೦,೦೦೦ ರೂ. ಮೌಲ್ಯದ ನೋಟ್ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವ ಪುಷ್ಪರಾಜ್, ಮಂಗಳೂರು ಇವರ ವಿಶೇಷ ಪ್ರಯತ್ನದಿಂದ ಕೊಡಲಾದ ಇ-ಸ್ಲೇಟ್ ಗಳನ್ನು ಶಾಲೆಯ ಎಲ್ಲಾ ನಲಿಕಲಿ ಮಕ್ಕಳಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಾಚಣ್ಣ ಕೆರೆಮೂಲೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾನಿಗಳಾದ ಜಯರಾಮ ಕಂಬಳ, ಪಂಜ-ಎಣ್ಮೂರು ಕ್ಲಸ್ಟರ್ ಸಿ.ಆರ್.ಪಿ.ಗಳಾಗಿರುವ ಜಯಂತ್ ಕೆ. ಭಾಗವಹಿಸಿದ್ದರು. ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಉಷಾ ಕಂಬಳ, ಶಾಲಾ ನಾಯಕಿ ಸಹನಾ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಮಕ್ಕಳ ಪೋಷಕರು ಮತ್ತು ಊರಿನ ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಧರ್ಮಾವತಿ ಟಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕರಾದ ಯಶೋಧರ್ ಕೆ. ವಂದಿಸಿದರು. ಸಹಶಿಕ್ಷಕರಾದ ಅಶೋಕ್ ಕುಮಾರ್ ಕಾರ್‍ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.