ಈ ಹಿಂದೆ ದ.ಕ.ದಿಂದ ಒಕ್ಕಲಿಗರ ಸಂಘದ ನಿರ್ದೇಶಕರಾದವರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿಲ್ಲ

Advt_Headding_Middle
Advt_Headding_Middle

 

ಸಂಘದ ಬಲವರ್ಧನೆಗಾಗಿ ನನ್ನ ಸ್ಪರ್ಧೆ : ಡಾ| ಕೆ.ವಿ.ಚಿದಾನಂದ

ಭಾಸ್ಕರ ಗೌಡ ದೇವಸ್ಯ, ಸುರೇಶ್ ಗೌಡರಿಂದ ಡಾ| ರೇಣುಕಾಪ್ರಸಾದ್ ಕೆ.ವಿ. ವಿರುದ್ಧ ಆರೋಪ – ಡಾ| ಕೆ.ವಿ. ಚಿದಾನಂದರಿಗೆ ಬೆಂಬಲದ ಘೋಷಣೆ

 

ಕಳೆದ ಹಲವಾರು ವರುಷಗಳಿಂದ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿರುವ ಒಕ್ಕಲಿಗರ ಸಂಘದ ನಿರ್ದೇಶಕರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ರಾಜ್ಯ ಒಕ್ಕಲಿಗರ ಸಂಘದಿಂದ ದೊರೆಯಬಹುದಾದ ಯಾವುದೇ ಸಹಾಯ ಹಾಗೂ ಅನುದಾನವನ್ನು ಒದಗಿಸುವಲ್ಲಿ ನಿಷ್ಕ್ರಿಯರಾಗಿರುವುದನ್ನು ಮನಗಂಡು, ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಹಾಗೂ ನಮ್ಮೂರಿನ ಅಭಿವೃದ್ಧಿಯ ಹಿತದೃಷ್ಠಿಯಿಂದ ಅತ್ಯಂತ ರಚನಾತ್ಮಕವಾಗಿ ರಾಜ್ಯ ಒಕ್ಕಲಿಗರ ಸಂಘವನ್ನು ಬಳಸಿಕೊಳ್ಳುವ ಉದ್ದೇಶದಿಂದ ನಾನು ಚುನಾವಣೆಗೆ ಸಮಷ್ಠಿಯ ಹಿತದೃಷ್ಠಿಯಿಂದ ಸ್ಪರ್ಧಿಸುತ್ತಿದ್ದೇನೆ ಎಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಾ ಕಣದಲ್ಲಿರುವ, ದಿ| ಡಾ| ಕುರುಂಜಿ ವೆಂಕಟ್ರಮಣ ಗೌಡರ ಹಿರಿಯ ಪುತ್ರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದರು ಹೇಳಿದ್ದಾರೆ.
ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಈ ಹಿಂದೆ ನಿರ್ದೇಶಕರಾಗಿದ್ದ ನಮ್ಮ ತಮ್ಮ ಡಾ| ರೇಣುಕಾಪ್ರಸಾದರು ನಮ್ಮ ಮೇಲಿನ ವೈಯಕ್ತಿಕ ದ್ವೇಷದಿಂದ ತನ್ನ ನಿರ್ದೇಶಕನ ಹುದ್ದೆ ಬಳಸಿಕೊಂಡು ನಮ್ಮ ತಂದೆಯವರು ಸ್ಥಾಪಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಆಡಳಿತ ನಿರ್ವಹಣೆಗೂ ಕಿರುಕುಳ ಉಂಟು ಮಾಡುತ್ತಿರುವುದು ತುಂಬಾ ಬೇಸರದ ವಿಚಾರ. ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಎಲ್ಲಾ ಗೌಡ ಸಂಘಗಳ ಹಾಗೂ ಜನಾಂಗದ ಅಭಿವೃದ್ಧಿಯ ಹಿನ್ನಲೆಯಲ್ಲಿ ಸಾಕಷ್ಟು ಸಂಪನ್ಮೂಲವಿರುವ ರಾಜ್ಯ ಸಂಘವನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಉದ್ದೇಶದಿಂದ ನಾನು ಸ್ಪರ್ಧೆಗಿಳಿದಿದ್ದೆನೆ. ಶೈಕ್ಷಣಿಕವಾಗಿ ಔದ್ಯೋಗಿಕವಾಗಿ, ಆರ್ಥಿಕವಾಗಿ ರಾಜ್ಯ ಸಂಘದಿಂದ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ನಮ್ಮ ಜಿಲ್ಲೆಗೆ ಪಡೆದು ಬಳಸಿಕೊಳ್ಳುವ ಯೋಜನೆ ನಮ್ಮ ಮುಂದಿದೆ. ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು ೭ ಸಾವಿರ ದಷ್ಟು ಮತಗಳನ್ನು ನಮ್ಮ ಜನಾಂಗದವರು ಹೊಂದಿದ್ದು ಅದನ್ನು ೩೦ ಸಾವಿರಕ್ಕೆ ಏರಿಸುವ ಗುರಿ ಇದೆ. ಈ ಎಲ್ಲಾ ಉದ್ದೇಶ ಹಾಗೂ ಯೋಜನೆಗಳೊಂದಿಗೆ ಸ್ಪರ್ಧಿಸುತ್ತಿರುವ ನನಗೆ ನಮ್ಮ ಜನಾಂಗ ಬಾಂಧವರು ಮತದಾನ ಮಾಡಿ ಆಶೀರ್ವದಿಸಬೇಕಾಗಿ ನಾನು ವಿನಂತಿಸುವುದಾಗಿ ಡಾ| ಚಿದಾನಂದರು ಹೇಳಿದರು.
ನಮ್ಮ ತಂದೆಯವರು ದ.ಕ.ದಿಂದ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಲ್ಲಿ ಭ್ರಷ್ಟಾಚಾರ ಇಲ್ಲದೆ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ.

ಆ ಬಳಿಕ ಬಂದ ನಿರ್ದೇಶಕರ ಆಡಳಿತದ ಶೈಲಿ ಸರಿ ಇಲ್ಲದೆ ಒಕ್ಕಲಿಗರ ಸಂಘ ಸಂಕಷ್ಟಕ್ಕೆ ಒಳಗಾಯಿತು. ಭ್ರಷ್ಟಾಚಾರ ನಡೆಸಿದರು. ಸೀಟುಗಳ ಹಗರಣ ನಡೆಯಿತು. ಬಳಿಕ ಆಡಳಿತಾಧಿಕಾರಿ ಅಲ್ಲಿಗೆ ಬರುವಂತಾಯಿತು. ಈಗ ಚುನಾವಣೆ ಬಂದಾಗ ಈ ಹಿಂದೆ ನಿರ್ದೇಶಕರಾದವರು ಸರಿಯಾಗಿ ಕೆಲಸ ಮಾಡಿಲ್ಲದಿರುವುದರಿಂದ ಅವರು ನಿಲ್ಲುವುದು ಸರಿಯಲ್ಲ ಎಂಬ ಹೋರಾಟ ನಡೆಯುತ್ತಿದೆ. ದ.ಕ. ಜಿಲ್ಲೆಯಲ್ಲಿ ಚುನಾವಣಾ ಪಟ್ಟಿಯನ್ನು ನೋಡಿದರೆ ನಾವು ಅಲ್ಪ ಸಂಖ್ಯಾತರಂತಿದ್ದೇವೆ. ೬ ಸಾವಿರದಷ್ಟು ಮಾತ್ರ ಮತದಾರರು ಇದ್ದಾರೆ. ದ.ಕ. ದಲ್ಲಿ ೬೦- ೭೦ ಸಾವಿರ ಒಕ್ಕಲಿಗರಿದ್ದರೂ ೬ ಸಾವಿರ ಮಾತ್ರ ಮತದಾರರನ್ನು ಮಾಡಿದ್ದಾರೆ. ನನ್ನ ತಮ್ಮ ಡಾ| ರೇಣುಕಾಪ್ರಸಾದರು ೧೮ ವರ್ಷ ನಿರ್ದೇಶಕರಾಗಿದ್ದರೂ ಮತದಾರರನ್ನು ಮಾಡದೇ ಕೇವಲ ೪ ಸಾವಿರಷ್ಟು ಮಂದಿಯನ್ನು ಮಾತ್ರ ಮಾಡಿ ಕಿಸೆಯಲ್ಲಿಟ್ಟು ಕುಳಿತಿದ್ದಾರೆ. ಈಗಿದ್ದರೆ ಆಗುವುದಿಲ್ಲವೆಂಬ ನಿಟ್ಟಿನಲ್ಲಿ ಎಲ್ಲರೂ ಸೇರಿ ನನ್ನ ಮಗನಾದ ಅಕ್ಷಯ್ ನಲ್ಲಿ ವಿಷಯ ಪ್ರಸ್ತಾಪಿಸಿದರು. ಆದರೆ ಅವನಿಗೆ ಮತವೇ ಇಲ್ಲ. ನನ್ನ ಮಗಳಿಗೂ ಮತ ಇಲ್ಲ. ರೇಣುಕಾಪ್ರಸಾದ್‌ಗೆ ನಾನೇ ನಿರ್ದೇಶಕನಾಗಿ ಇರಬೇಕು ಎಂದು ನಿರ್ಧರಿಸಿ ಯಾರನ್ನೂ ಮೆಂಬರ್ ಮಾಡದೇ ಹೋಗುತ್ತಿದ್ದಾರೆ.

ಯಾವ ರೀತಿಯ ಭ್ರಷ್ಟಾಚಾರ ನಡೆದು ನಾಲ್ಕೂವರೆ ವರ್ಷ ಆಡಳಿತಾಧಿಕಾರಿ ಬಂತೋ ಅದರಲ್ಲಿ ಮತ್ತೆ ಅವರು ನಿರ್ದೇಶಕನಾಗಿ ಮುಂದುವರಿಯುವುದು ಸರಿಯಲ್ಲವೆಂದು ಎಲ್ಲರೂ ನಿರ್ಧಾರ ಮಾಡಿದ್ದಾರೆ. ಭಾಸ್ಕರ ದೇವಸ್ಯ ಎಲ್ಲರೂ ಸೇರಿ ನನ್ನನ್ನು ಒತ್ತಾಯ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಅಧ್ಯಕ್ಷ ಸುರೇಶ್ ಗೌಡರು ಕೂಡಾ ನಮಗೆ ಬೆಂಬಲ ನೀಡಿದ್ದಾರೆ. ನಾವು ವಿನ್ ಆಗಲಿ ಆಗದಿರಲಿ ನಾನು ಚುನಾವನೆಗೆ ಸ್ಪರ್ಧಿಸಬೇಕೆಂದು ಎಲ್ಲರ ಅಪೇಕ್ಷೆ ಇದೆ. ನಾನು ಸ್ಪರ್ಧೆ ಮಾಡ್ತೇನೆ ಎಂದು ಕನಸಲ್ಲಿಯೂ ನಿರ್ಧರಿಸಿರಲಿಲ್ಲ. ಎಲ್ಲರ ಅಪೇಕ್ಷೆ ಯ ನಿಟ್ಟಿನಲ್ಲಿ ಈ ಸ್ಪಧೆಯಲ್ಲಿದ್ದೇನೆ ಎಂದು ಹೇಳಿದರು.

ಓಟಿನ ಐಡಿ ಅವರ ಕೈಯಲ್ಲಿದೆ ಎಂಬ ಮಾತು ಕೇಳಿ ಬಂತು. ನಾವೀಗಾಗಲೇ ಒಕ್ಕಲಿಗರ ಸಂಘದ ಅಧಿಕಾರಿಯವರಲ್ಲಿ ಮಾತನಾಡಿದ್ದೇವೆ. ಯಾರು ಸದಸ್ಯರಾಗಿ ಅವರಲ್ಲಿ ಐಡಿ ಇಲ್ಲವೋ ಅವರೆಲ್ಲ ೧೦೦ ರೂ ಕೊಟ್ಟರೆ ಐಡಿ ಕಾರ್ಡ್ ಕೊಡುವ ವ್ಯವಸ್ಥೆ ಅವರು ಮಾಡಿದ್ದಾರೆ. ಈ ಬೆಳವಣಿಗೆ ಆಗುತ್ತಿದ್ದರೆ ತನ್ನಿಂತಾನೆ ಐಡಿ ಕಾರ್ಡ್ ಸದಸ್ಯರ ಮನೆಗೆ ಬರಲು ಆರಂಭ ಆಗಿದೆ ಎಂದವರು ಹೇಳಿದರು.
ಉಡುಪಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸುರೇಶ್ ಬಿ.ಎಂ. ಮಾತನಾಡಿ, ರಾಜ್ಯ ಒಕ್ಕಲುಗರ ಸಂಘದ ಚುನಾವಣೆಯಲ್ಲಿ ಉಡುಪಿ ಜಿಲ್ಲೆ ಒಕ್ಕಲಿಗರ ಸೇವಾ ಸಂಘದ ಪರವಾಗಿ ಹೇಮಾನಂದ ಹರ್ದಡ್ಕ ಅವರನ್ನು ಸಂಘದ ನಿರ್ದೇಶನದಂತೆ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ ಸಂಘದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಧರ್ಮಪಾಲನಾಥ ಸ್ವಾಮೀಜಿಯವರ ಮಾರ್ಗದರ್ಶನದಂತೆ ನಾವು ಸುಳ್ಯದ ಶಿಲ್ಪಿ ಡಾ| ಕುರುಂಜಿ ವೆಂಕಟ್ರಮಣ ಗೌರವ ಗಮನದಲ್ಲಿಟ್ಟುಕೊಂಡು ಡಾ| ಕೆ.ವಿ. ಚಿದಾನಂದರವರಿಗೆ ಸಂಘವು ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಹೇಮಾನಂದರು ನಾಮಪತ್ರವನ್ನು ವಾಪಸ್ಸು ಪಡೆಯುವುದೆಂದು ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಿಸಲಾಯಿತು. ಆದರೆ ಅವರು ಆಸೆ ಆಮಿಷಕ್ಕೆ ಬಲಿಯಾಗಿ ನಮ್ಮ ನಿರ್ಣಯವನ್ನು ದಿಕ್ಕರಿಸಿದ್ದಾರೆ. ಉಡುಪಿ ಜಿಲ್ಲಾ ಒಕ್ಕಲಿಗರ ಸಂಘ ಡಾ| ಚಿದಾನಂದರನ್ನು ಬೆಂಬಲಿಸುತ್ತದೆ. ಈ ಹಿಂದೆ ನಿರ್ದೇಶಕರಾಗಿದ್ದ ಡಾ| ರೇಣುಕಾಪ್ರಸಾದರು ನಮ್ಮ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಆ ನೋವು ನಮಗಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಸಿ ಹಿಂಪಡೆದಿದ್ದ ಭಾಸ್ಕರ ದೇವಸ್ಯರು ಮಾತನಾಡಿ, “ಒಕ್ಕಲಿಗರ ಸಂಘದ ಚುನಾವಣೆಗೆ ಡಾ| ಕೆ.ವಿ. ಚಿದಾನಂದರು ಸ್ಪರ್ಧೆ ಮಾಡುತ್ತಿರುವುದರಿಂದ ನಾನು ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದೇನೆ. ಕಳೆದ ಸುಮಾರು 18 ವರ್ಷಗಳಿಂದ ನಿರ್ದೇಶಕರಾಗಿದ್ದರು ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಮ್ಮ ಸಮುದಾಯದ ಯಾವುದೇ ಕೆಲಸ ಕಾರ್ಯಗಳನ್ನು ಈ ಭಾಗದಲ್ಲಿ ನಿರ್ವಹಿಸದೇ ನಿಷ್ಕಯರಾಗಿದ್ದ ಪ್ರಯುಕ್ತ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದೆ. ಆದರೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ನಿಷ್ಕಳಂಕ ವ್ಯಕ್ತಿತ್ವದ ಸಮರ್ಥ ನಾಯಕತ್ವಗುಣದ ಕೊಡುಗೈ ದಾನಿಯಾದ ಡಾ| ಕೆ.ವಿ. ಚಿದಾನಂದರು ನಮ್ಮ ದಕ್ಷಿಣ ಕನ್ನಡ ಕ್ಷೇತ್ರದ ಗೌಡ ಜನಾಂಗದ ವತಿಯಿಂದ ಸ್ಪರ್ಧಿಸಲು ಮನಸ್ಸು ಮಾಡಿ ಒಪ್ಪಿಗೆ ನೀಡಿದ ಪ್ರಯುಕ್ತ ಅವರೇ ಈ ನಿರ್ದೇಶಕ ಹುದ್ದೆಗೆ ಸಮರ್ಥ ನಾಯಕರು ಎಂದು ಪರಿಗಣಿಸಿ ಅವರನ್ನು ನಾನು ಹಾಗೂ ನನ್ನ ಹಿತೈಷಿಗಳೆಲ್ಲಾ ಒಕ್ಕೊರಲಿನಿಂದ ಬೆಂಬಲಿಸುಂತೆ ತೀರ್ಮಾನಿಸಿದ್ದೇವೆ. ಅವರ ನೇತೃತ್ವದಲ್ಲಿ ನಮ್ಮ ಈ ಭಾಗಕ್ಕೆ ರಾಜ್ಯ ಒಕ್ಕಲಿಗರ ಸಂಘದಿಂದ ದೊಡ್ಡ ರೀತಿಯಿಂದ ಸಹಾಯವಾಗಬಹುದು. ಇದರಿಂದ ನಮ್ಮ ಜನಾಂಗಕ್ಕೆ ತುಂಬಾ ಪ್ರಯೋಜನವಾಗಬಹುದು ಎಂಬ ಆಶಾವಾದ ನಮ್ಮದು.
ಹಿಂದೆ ರಾಜ್ಯ ಸಂಘದ ನಿರ್ದೇಶಕರಾಗಿದ್ದ ಡಾ. ರೇಣುಕಾಪ್ರಸಾದರು ಸಂಘಕ್ಕೆ ಸದಸ್ಯರನ್ನು ಮಾಡಿದ್ದು ನೋಡಿದರೆ ಅವರು ಎಷ್ಟು ಕೆಲಸ ಮಾಡಿದ್ದಾರೆಂಬುದು ಗೊತ್ತಾಗುತ್ತದೆ. ಅವರಿಗೆ ಸಮುದಾಯವನ್ನು ಉದ್ದಾರ ಮಾಡುವ ಉದ್ದೇಶ ಇಲ್ಲ. ಬದಲು ಅವರು ನಿರ್ದೇಶಕರಾಗುವುದು ಮಾತ್ರ ಅವರ ಉದ್ದೇಶ. ೪ ಸಾವಿರದಷ್ಟು ಕಾರ್ಡ್‌ನ್ನು ಅವರು ಕಪಾಟಿನಲ್ಲಿಟ್ಟಿದ್ದಾರೆ ಎಂದು ಆರೋಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

  1. Usha k

    Family ಅಂದಾಗ ಸಮಸ್ಯೆ ಗಳು ಇದ್ದೇ ಇರುತ್ತವೆ. ಅದನ್ನು ಬೀದಿಗೆ ತಂದು ನಿಲ್ಲಿಸಿದ್ದು ಏಷ್ಟು ಸರಿ . ಅದು ಬೇರೆ ಪ್ರತಿಷ್ಠಿತ ಕುಟುಂಬ .. ಹಿರಿಯರು ಸೇರಿ ಕೂತು ಸಮಸ್ಯೆ ಪರಿಹಾರ ಮಾಡಬಹುದಿತ್ತು . ಅದನ್ನು ಬಿಟ್ಟು ಬೆಂಕಿ ಗೆ ಮತ್ತೆ ಮತ್ತೆ ಪೆಟ್ರೋಲ್ ಸುರಿಯೋ ಕೆಲ್ಸ ಮಾಡಬಾರದು .. ಮೂರನೇ ವ್ಯಕ್ತಿ ಯವರು ಕೂಡಾ ಕುಟುಂಬ ದ ವಿಷಯಕ್ಕೆ ದೂರವಿರುವುದೇ ಉತ್ತಮ .

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.