ಪ್ರಮುಖ ಮೂರು ಸಮಸ್ಯೆಗಳನ್ನು ಪರಿಹರಿಸದಿದ್ದರೆ ಗ್ರಾ.ಪಂ. ಎದುರು ಪ್ರತಿಭಟನೆಯ ಎಚ್ಚರಿಕೆ

Advt_Headding_Middle
Advt_Headding_Middle

ಜಾಲ್ಸೂರು ಊರ ನಾಗರಿಕರಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ಜಾಲ್ಸೂರು ಮಹಾಬಲಡ್ಕ ಪ.ಜಾತಿ, ಪಂಗಡ ಕಾಲೊನಿ ರಸ್ತೆಯನ್ನು ಗ್ರಾ.ಪಂ. ರಸ್ತೆಯನ್ನಾಗಿ ಪರಿವರ್ತನೆ ಮಾಡದ ಗ್ರಾ.ಪಂ., ಗ್ರಾಮಸಭೆಯಲ್ಲಿ ಮರಸಂಕ ಅಂಗನವಾಡಿ ಶಿಕ್ಷಕಿಯನ್ನು ಬದಲಾಯಿಸುವಂತೆ ನಿರ್ಣಯವಾಗಿದ್ದರೂ ಕ್ರಮ ಕೈಗೊಳ್ಳದ ಪಂಚಾಯತ್ ಹಾಗೂ ಮರಸಂಕ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಮಾಡದ ವಿರುದ್ಧ ಜಾಲ್ಸೂರು ಊರ ನಾಗರಿಕರು ಸೇರಿ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ನ. ೨೭ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,
ಜಾಲ್ಸೂರು ಗ್ರಾಮ ಪಂಚಾಯತ್‌ಗೊಳಪಟ್ಟ ಮಹಾಬಲಡ್ಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೊನಿಗೆ ತೆರಳುವಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಮಾಡಿದ್ದು, ಗ್ರಾ. ಪಂ. ಕ್ರಿಯಾಯೋಜನೆಯಲ್ಲಿ ಮಹಾಬಲಡ್ಕ – ಮುದ್ದ ರಸ್ತೆಗೆ ೧೪ನೇ ಹಣಕಾಸು ಯೋಜನೆಯಡಿಯಲ್ಲಿ ರಸ್ತೆಯ ಅಭಿವೃದ್ಧಿಗಾಗಿ ಅನುದಾನ ಮಂಜೂರುಗೊಂಡಿದ್ದು, ನೂತನ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ಈ ರಸ್ತೆಯನ್ನು ಗ್ರಾ.ಪಂ. ರಸ್ತೆಯನ್ನಾಗಿ ಇನ್ನೂ ಗ್ರಾಮ ಪಂಚಾಯತ್ ಪರಿವರ್ತಿಸಿ ಕೊಟ್ಟಿಲ್ಲ ಎಂದು ಊರ ನಾಗರಿಕರಾದ ಕೃಷ್ಣಪ್ಪ ನಾಯ್ಕ ಮಹಾಬಲಡ್ಕ ಹೇಳಿದರು.
ಮರಸಂಕ ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಪೋಷಕರ ನಡುವಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಜಾಲ್ಸೂರು ಗ್ರಾಮಸಭೆಯಲ್ಲಿ ಅಂಗನವಾಡಿ ಶಿಕ್ಷಕಿಯನ್ನು ಬದಲಾಯಿಸುವಂತೆ ಸಿಡಿಪಿಒ ಅವರಿಗೆ ಪತ್ರ ಬರೆಯುವುದೆಂದು ನಿರ್ಣಯ ಮಾಡಲಾಗಿತ್ತು. ಆದರೆ ಗ್ರಾಮ ಸಭೆ ಕಳೆದು ಒಂದು ತಿಂಗಳು ಕಳೆದರೂ ಇನ್ನೂ ಗ್ರಾ.ಪಂ. ವತಿಯಿಂದ ಸಿಡಿಪಿಒ ಕಚೇರಿಗೆ ನಿರ್ಣಯ ಪತ್ರ ಕಳುಹಿಸಿಕೊಟ್ಟಿಲ್ಲ ಎಂದು ಸತೀಶ್ ಮರಸಂಕ ಹೇಳಿದರಲ್ಲದೆ ಮರಸಂಕ ಪ್ರದೇಶದಲ್ಲಿ ೯ ಮನೆಗಳಿಗೆ ತೆರಳಲು ಸಂಪರ್ಕ ರಸ್ತೆ ಹಾಗೂ ಸೇತುವೆ ಇಲ್ಲದೆ ಕಳೆದ ಮಳೆಗಾಲದಲ್ಲಿ ಮಹಿಳೆಯೋರ್ವರನ್ನು ಸ್ಟ್ರೆಚರ್ ಮೂಲಕ ಹೊಳೆ ದಾಟಿಸಿದ ವೀಡಿಯೋ ರಾಜ್ಯ ಮಟ್ಟದಲ್ಲಿ ವೈರಲ್ ಆಗಿ ಸುಳ್ಯದಿಂದ ತಹಶೀಲ್ದಾರ್, ಇ.ಒ. ಸೇರಿದಂತೆ ಇಲಾಖಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಹೋಗಿ ತಿಂಗಳುಗಳು ಕಳೆದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಮೂರು ಬೇಡಿಕೆಗಳನ್ನು ಮಾಡಿ ಕೊಡದಿದ್ದರೆ ಜಾಲ್ಸೂರು ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಊರ ನಾಗರಿಕರಾದ ಕೃಷ್ಣಪ್ಪ ನಾಯ್ಕ ಮಹಾಬಲಡ್ಕ, ಸತೀಶ್ ಮರಸಂಕ, ಜಯರಾಮ ಮಹಾಬಲಡ್ಕ, ಮುರಳಿ, ಅಮ್ಮಣ್ಣಿ ಮಹಾಬಲಡ್ಕ, ಪ್ರೇಮಾ ಮಹಾಬಲಡ್ಕ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.