ಸಂಘದ ನಿರ್ಣಯಕ್ಕೆ ಬದ್ಧನಾಗಿ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧೆ

Advt_Headding_Middle
Advt_Headding_Middle

 

ಆಮಿಷಕ್ಕೆ ಬಲಿಯಾಗಿಲ್ಲ : ಅಭ್ಯರ್ಥಿ ಹೇಮಾನಂದ ಹಲ್ದಡ್ಕ ಸ್ಪಷ್ಟನೆ

ಉಡುಪಿ ಜಿಲ್ಲಾ ಸಂಘದಲ್ಲಿ ಒಕ್ಕಲಿಗರ ಸಂಘದ ಚುನಾವಣೆಯ ವಿಚಾರದಲ್ಲಿ ನಡೆದ ಸಭೆಯ ನಿರ್ಣಯಕ್ಕೆ ಬದ್ಧನಾಗಿ ಸ್ಪರ್ಧೆಗಿಳಿದಿದ್ದೇನೆ ಹೊರತು ಯಾವುದೇ ಆಮಿಷಕ್ಕೆ ನಾನು ಬಲಿಯಾಗಿಲ್ಲ ಎಂದು ಒಕ್ಕಲಿಗರ ಸಂಘದ ಚುನಾವಣೆಯ ಅಭ್ಯರ್ಥಿಯಾಗಿರುವ ಹೇಮಾನಂದ ಹಲ್ದಡ್ಕರು ಹೇಳಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆಯ ಸ್ಪರ್ಧೆಯ ವಿಚಾರ ನಮ್ಮ ಸಂಘದಲ್ಲಿ ಬಂದಾಗ ಅರಂಭದಲ್ಲಿ ಸಿದ್ಧರಾಜೇ ಗೌಡರ ಹೆಸರು ಬಂತು. ಆಗ ನಮ್ಮ ಜಿಲ್ಲಾಧ್ಯಕ್ಷ ಸುರೇಶ್ ಗೌಡರು ನನ್ನನ್ನು ಸೂಚನೆ ಮಾಡಿದರು. ಬಳಿಕದ ಬೆಳವಣಿಗೆಯಲ್ಲಿ ಇದನ್ನು ಸಂಘದ ಚುನಾವಣೆಯಲ್ಲಿ ನಿರ್ಣಯ ಮಾಡಿ ಘೋಷಣೆಯನ್ನೂ ಮಾಡಲಾಯಿತು. ಬಳಿಕ ಸ್ವಾಮೀಜಿಯವರನ್ನು ಭೇಟಿ ಮಾಡಿ ನಾಮಪತ್ರವನ್ನು ಸಲ್ಲಿಸಿದೆ. ನಾನು ಸುಳ್ಯಕ್ಕೆ ಬಂದು ನನ್ನ ಕೆಲಸ ಆರಂಭ ಮಾಡಿದೆ. ಈ ವೇಳೆ ಕೆಲವರಲ್ಲಿ ಸದಸ್ಯತ್ವ ಆಗಿದ್ದರೂ ಓಟರ್ ಕಾರ್ಡ್ ಇಲ್ಲದಿರುವುದು ಗಮನಕ್ಕೆ ಬಂತು. ನಾನು ಕಾರ್ಡ್ ಕೊಡಿಸಲು ಬೇಕಾದ ವ್ಯವಸ್ಥೆಯಲ್ಲಿ ತೊಡಗಿದೆ.

ಉಡುಪಿಯಲ್ಲಿ ನಮ್ಮ ಸಂಘಕ್ಕೆ ಸ್ವಂತ ನಿವೇಶನ ಇಲ್ಲ. ಕಟ್ಟಡವೂ ಇಲ್ಲ. ಇದೆಲ್ಲ ಆಗಬೇಕು ಎಂಬುದು ನಮ್ಮ ಬೇಡಿಕೆ.
ನಾಮಪತ್ರ ವಾಪಸ್ ಪಡೆಯುವ ಹಿಂದಿನ ದಿನ ನನ್ನನ್ನು ಜಿಲ್ಲಾಧ್ಯಕ್ಷರು ಮಂಗಳೂರಿಗೆ ಬರುವಂತೆ ಹೇಳಿ ನಾವೊಂದು ನಿರ್ಣಯಕ್ಕೆ ಬರೋಣ ಎಂದು ಹೇಳಿದರು. ಈ ವಿಷಯವನ್ನು ನಾನೂ ಇತರ ಸದಸ್ಯರಿಗೆ ತಿಳಿಸಿದೆ. ಅದರಂತೆ ಅಂದು ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಸಂಘದ ಎಲ್ಲ ಸದಸ್ಯರೂ ಭಾಗವಹಿಸಿದರು. ನಾಮಪತ್ರ ವಾಪಸ್ ಪಡೆಯುವ ವಿಚಾರ ಪ್ರಸ್ತಾಪವನ್ನು ಮಾಡಿದ ಜಿಲ್ಲಾಧ್ಯಕ್ಷರು ಇದರಿಂದ ಹಿಂದಕ್ಕೆ ಬಂದರೆ ಇದು ಸಂಘಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿದರು. ಯಾವ ರೀತಿ ಎಂದು ಅವರು ವಿವರಿಸಲಿಲ್ಲ. ನಾನು ಸಂಘ ಚುನಾವಣೆಯ ಸಂದರ್ಭದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬಂದ ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಸುರೇಶ ಗೌಡರು ರಾಜೀನಾಮೆಯ ಅರ್ಜಿಯನ್ನೂ ಸಂಘಕ್ಕೆ ನೀಡಿದರು. ಉಳಿದ ಸದಸ್ಯರು ಎಲ್ಲರೂ ಸೈಲೆಂಟ್ ಆಗಿ ಚುನಾವಣೆಯಲ್ಲಿ ಸದಸ್ಯರು ಅವರ ಅವರವರ ನಿರ್ಧಾರದಂತೆ ಮಾಡಬಹುದು ಎಂಬ ವಿಚಾರವೂ ಪ್ರಸ್ತಾಪವಾಯಿತು. ನಾನು ಯಾಕೆ ಸಂಘದ ನಿರ್ಣಯಕ್ಕೆ ಬದ್ಧ ಎಂದು ಹೇಳಿದೇನೆಂದರೆ ಭಾಸ್ಕರ ದೇವಸ್ಯರು ಸ್ಪರ್ಧಾ ಕಣದಲ್ಲಿ ಉಳಿದರೆ ನಾವು ವಾಪಸ್ ತೆಗೆಯುವುದೆಂದು ಮಾತುಕತೆ ಆಗಿತ್ತು. ಭಾಸ್ಕರ ದೇವಸ್ಯರು ಕಣದಿಂದ ಹಿಂದೆ ಸರಿದುದರಿಂದ ನಾನು ಸ್ಪರ್ಧೆಯಲ್ಲಿ ಮುಂದುವರಿದೆ ಎಂದು ಹೇಳಿದರು.

 

ಸುಳ್ಯದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿರುವುದು ಡಾ| ಕುರುಂಜಿಯವರು. ಅವರ ಮೇಲೆ ಅಪಾರ ಗೌರವವಿದೆ. ಅಲ್ಲಿಯೇ ನಾನೂ ಶಿಕ್ಷಣ ಪಡೆದುದು. ಅವರ ಇಬ್ಬರು ಮಕ್ಕಳು ಇಂದು ಸ್ಪರ್ಧೆಯಲ್ಲಿದ್ದಾರೆ.

ಅವರ ಜತೆಗೆ ನಾನೂ ಸ್ಪರ್ಧೆಯಲ್ಲಿರುವುದು ಖುಷಿ ಕೊಡುತ್ತಿದೆ. ನಾನು ಗೆಲ್ಲುತ್ತೇನೆ ಎಂದು ಹೇಳುವುದಕ್ಕಿಂತಲೂ ಸ್ಪರ್ಧೆಯಲ್ಲಿದ್ದೇನೆ ಎಂಬುದು ಮುಖ್ಯ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವುದೇ ಆಮಿಷಕ್ಕೆ ನಾನು ಬಲಿಯಾಲ್ಲ ಎಂದು ಸ್ಪಷ್ಟ ಪಡಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.