ಸುಬ್ರಹ್ಮಣ್ಯ: ಸಂವಿಧಾನ ಸಂಭ್ರಮ ವಿಚಾರ ಸಂಕಿರಣ

Advt_Headding_Middle
Advt_Headding_Middle

 

 

ಸಂವಿಧಾನ ಚೆನ್ನಾಗಿದೆ ಆದರೆ ನಮ್ಮಲ್ಲಿ ಅನುಷ್ಠಾನ ಇನ್ನೂ ಸದೃಢದತೆಯ ಅವಶ್ಯವಿದೆ

ಮಾದ್ಯಮಗಳು ಡಿಬೇಟ್ ಗೆ ಅವಕಾಶ ನೀಡಬೇಕು

ಅಂಗಾರ ಮತ್ತು ನನ್ನಲ್ಲಿ ಯಾವುದಲ್ಲೂ ಬದಲಾವಣೆ ಇಲ್ಲ. ನಾವು ಯಾವತ್ತೂ ಸರಳರೇ,ಸ್ಪಂದಿಸುವವರು

ಸಚಿವ ನಾರಾಯಣ ಸ್ವಾಮಿ ಹೇಳಿಕೆ

ನಮ್ಮ ಸಂವಿಧಾನ ಎಷ್ಟು ಚೆನ್ನಾಗಿದೆ ಎಂದರೆ ಅದಕ್ಕೆ ಯಾವ ದೇಶವೂ ಸಾಟಿ ಇಲ್ಲ. ಆದರೆ ನಮ್ಮಲ್ಲಿ ಸಂವಿಧಾನ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಕೆಲವೊಂದು ಕೇಸುಗಳು ೩೦ ವರ್ಷ ಕಳೆದರೂ ಜಡ್ಜ್ ಮೆಂಟ್ ಬರುತ್ತಿಲ್ಲ. ಹಾಗಾಗಿ ಸಂವಿಧಾನ ಇನಷ್ಟು ಸದೃಢವಾಗಿ ಅನುಷ್ಠಾನವಾಗಬೇಕಾಗಿದೆ ಎಂದು ಭಾರತ ಸರ್ಕಾರದ ಸಾಮಾಜಿಕ ಮತ್ತು ಸಬಲೀಕರಣ ರಾಜ್ಯ ಸಚಿವ ಎ ನಾರಾಯಣ ಸ್ವಾಮಿ ಹೇಳಿದ್ದಾರೆ.
ಅವರರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಸಂವಿಧಾನ ಸಂಭ್ರಮ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಸಮಾಜದ ಮೀಸಲಾತಿ ಹೋರಾಟಗಳು ದಿಕ್ಕು ತಪ್ಪಿಸುತ್ತಿವೆ. ಸಮಾಜದಲ್ಲಿ ಯಾವುದು ಮುಖ್ಯವೋ ಅದು ಆಗಬೇಕು. ಜಾಗೃತ ಸಮಾಜ ಒಟ್ಟು ವ್ಯವಸ್ಥೆಯಲ್ಲಿ ಕೆಟ್ಟ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಡಾ ನಿಂಗಯ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಇದ್ದರು.
ಸಭೆಯಲ್ಲಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರನ್ನು ಗೌರವಿಸಲಾಯಿತು.
ಯತೀಶ್ ಆರ್ವಾರ ಸ್ವಾಗತಿಸಿದರು. ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ವಂದಿಸಿದರು. ಕೆ ಎಸ್ ಎಸ್ ಕಾಲೇಜಿನ ಉಪನ್ಯಾಸಕರುಗಳಾದ ಆರತಿ, ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಖಂಡ ವೆಂಕಟ್ ದಂಬೆಕೋಡಿ, ವಿದ್ಯಾರ್ಥಿಗಳಾದ ಕೌಶಿಕ್ , ಸ್ವರಾಜ್, ರಕ್ಷಿತಾ, ಚುಂಚನ ಸಂವಾದದಲ್ಲಿ ಪಾಲ್ಗೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.