ಕಲ್ಚೆರ್ಪೆಗೆ ಜಿಲ್ಲಾಧಿಕಾರಿಗಳ ಭೇಟಿ : ಬರ್ನಿಂಗ್ ಮೆಷಿನ್ ವೀಕ್ಷಣೆ

Advt_Headding_Middle
Advt_Headding_Middle

 

ಸಮಸ್ಯೆ ಹೇಳಿದ ಊರವರಲ್ಲಿ ಸಲಹೆ ಕೇಳಿದ ಡಿ.ಸಿ.

ಚುನಾವಣೆ ನೀತಿ ಸಂಹಿತೆ ಬಳಿಕ ಸುಳ್ಯದಲ್ಲಿ ಸಭೆಯ ಭರವಸೆ

 

ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರು ಇಂದು ಸುಳ್ಯ ನಗರದ ಕಸ ವಿಲೇವಾರಿ ಪ್ರದೇಶವಾಗಿರುವ ಮತ್ತು ಬರ್ನಿಂಗ್ ಮೆಷಿನ್ ಅಳವಡಿಸಲಾಗಿರುವ ಕಲ್ಚೆರ್ಪೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಹಶೀಲ್ದಾರ್ ಅನಿತಾಲಕ್ಷ್ಮೀ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶರತ್ ರಿಂದ ಜಾಗದ ಮಾಹಿತಿ ಪಡೆದರು‌. ಆ ವೇಳೆಗೆ ಅಲ್ಲಿಗೆ ಬಂದ ಸ್ಥಳೀಯರಾದ ಅಶೋಕ್ ಪೀಚೆಯವರು ಜಿಲ್ಲಾಧಿಕಾರಿಗಳೊಂದಿಗೆ ಕಸ ಹಾಕಲು ಆರಂಭವಾದ ಕಳೆದ 14 ವರ್ಷದಿಂದ ಈ‌ಭಾಗದ ಜನರು ಅನುಭವಿಸಿದ ತೊಂದರೆ ಹಾಗೂ ಮಳೆಗಾಲದಲ್ಲಿ ನೀರು ಪಯಸ್ವಿನಿ ಸೇರುವ ಕುರಿತು ಹೇಳಿಕೊಂಡರು. ಆಗ ಜಿಲ್ಲಾಧಿಕಾರಿ ಗಳು ನೀವು ಏನೇ ಹೇಳುವುದಿದ್ದರೆ ಲಿಖಿತವಾಗಿ ಕೊಡಿ. ಸಮಸ್ಯೆ ಯ ಜತೆಗೆ ಪರಿಹಾರಕ್ಕೆ ಸಲಹೆಯನ್ನು ನೀಡಬೇಕು ಎಂದು ಹೇಳಿದರು. ಬಳಿಕ ನ.ಪಂ. ಮುಖ್ಯಾಧಿಕಾರಿ ಮತ್ತು ಹೆಚ್ .ಐ. ಯವರಿಗೆ ಮೆಷಿನ್ ಅಳವಡಿಸಿ ಯಾಕೆ ಚಾಲನೆ ನೀಡಿಲ್ಲ ಎಂದು ಪ್ರಶ್ನಿಸಿದರು. ಆಗ ನ.ಪಂ. ಅಧಿಕಾರಿ ಗಳು ಇನ್ನೂ ಕೆಲಸ ಬಾಕಿ ಇರುವುದಾಗಿ ಹೇಳಿದಾಗ, ಯಾಕೆ ಮಾಡಿಸಲು ಆಗುವುದಿಲ್ಲ. ನೀವು ಕೆಲಸ ಮಾಡಿಸದಿದ್ದರೆ ಜನರು ಮಾತನಾಡದೇ ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದರು.
ಬಳಿಕ ಸುದ್ದಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, “ತ್ಯಾಜ್ಯ ವಿಲೇವಾರಿ ಕುರಿತು ಸಮಸ್ಯೆ ಇರುವುದು ನಮ್ಮ ಗಮನದಲ್ಲಿದೆ. ಇಲ್ಲಿಯ ಜಾಗದ ಸಮಸ್ಯೆ ಏನೆಂದು ನೋಡಲು ಬಂದಿದ್ದೇನೆ. ಕಸ ವಿಲೇವಾರಿ ವೈಜ್ಞಾನಿಕ ವಾಗಿ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತೇವೆ. ಸಮಸ್ಯೆಗಳು ಇರುವುದು ಹೌದು. ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹೆಚ್ಚು ಏನನ್ನೂ ಹೇಳುವುದಿಲ್ಲ. ಚುನಾವಣೆ ಮುಗಿದ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮತ್ತು ಸ್ಥಳೀಯರಿದ್ದು ಸಭೆ ನಡೆಸಿ ಸಮಸ್ಯೆಯ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದರು.

ಎ.ಸಿ. ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಅನಿತಾಲಕ್ಷ್ಮೀ ಜತೆಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.