ಗುತ್ತಿಗಾರು: ಬಾರ್‌ನಲ್ಲಿ ಹೊಡೆದಾಟ, ಐವರ ಮೇಲೆ ಎಫ್ ಐ ಆರ್ ದಾಖಲು

Advt_Headding_Middle

ಗುತ್ತಿಗಾರಿನ ಬಾರ್‌ವೊಂದರಲ್ಲಿ ಹೊಡೆದಾಟವಾಗಿದ್ದು, ಐವರ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಎಫ್ ಐ ಆರ್ ದಾಖಲಾದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ.

ಗುತ್ತಿಗಾರಿನ ಮಧು ಬಾರ್ & ರೆಸ್ಟೋರೆಂಟ್‌ಗೆ ಬಾರ್ ಆಗವಿಸಿದ ಯುವಕರು ಬಿಲ್ ವಿಚಾರವಾಗಿ ಕ್ಯಾಶಿಯರ್ ಬಳಿ ಚೌಕಾಸಿ ಮಾಡಿದ್ದು, ಈ ಬಗ್ಗೆ ಕ್ಯಾಶಿಯರ್ ಬಾರ್ ಮಾಲಕ ಹರ್ಷಿತ್ ಅವರೊಂದಿಗೆ ಚರ್ಚಿಸುವಂತೆ ಹೆಳಿದ್ದರೆನ್ನಲಾಗಿದೆ. ಯುವಕರು ಹರ್ಷಿತ್ ಅವರೊಂದಿಗೆ ಮಾತನಾಡುತ್ತಾ ಹರ್ಷಿತ್ ರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬಾರ್ ಮಾಲಕ ಸುಬ್ರಹ್ಮಣ್ಯ ಠಾಣೆಯಲ್ಲಿ ಸಚಿನ್, ದಿನೇಶ್, ವರ್ಷಿತ್, ಹರ್ಷಿತ್, ರಕ್ಷಿತ್‌ರ ಮೇಲೆ ದೂರು ನೀಡಿದ್ದು, ಅವರ ಮೇಲೆ ಎಫ್ ಐ ಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ. ಹಲ್ಲೆ ಸಂದರ್ಭ ಸ್ಥಳದಲ್ಲಿದ್ದ ಪೂರ್ಣಾನಂದರಿಗೂ ಇದೇ ಯುವಕರು ಹೊಡೆದಿರುವುದಾಗಿ ತಿಳಿದು ಬಂದಿದ್ದು, ಪೂರ್ಣಚಂದ್ರರೂ ಸುಬ್ರಹ್ಮಣ್ಯ ಠಾಣೆಗೆ ದೂರು ಕೊಟ್ಟಿರುವುದಾಗಿ ತಿಳಿದುಬಂದಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.