ಯೇನೆಕಲ್ಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಗೌಡ ಪರಮಲೆ ನಿಧನ

Advt_Headding_Middle
Advt_Headding_Middle

 

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಪರಮಾಲೆ ಗೋಪಾಲ ಗೌಡರು ನ. 28ರಂದು ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು. ಸುಬ್ರಹ್ಮಣ್ಯ ಗ್ರಾ.ಪಂ.ನ ಅಧ್ಯಕ್ಷರಾಗಿ, ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ, ಬಾಲಾಡಿ ಶ್ರೀ ಆದಿಶಕ್ತಿ ಭಜನಾ ಮಂದಿರ ಅಧ್ಯಕ್ಷರಾಗಿ, ಯೇನೆಕಲ್ಲು ರೈತ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಲ್ಲದೆ ಯೇನೆಕಲ್ಲಿನ ಎಲ್ಲಾ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದರು. ಆದ್ಯಾತ್ಮಿಕ ವಿಷಯಗಳಾದ ಧ್ಯಾನ, ಯೋಗ ತರಗತಿಗಳನ್ನು ನಡೆಸುವ ನುರಿತ ಗುರುಗಳನ್ನು ಊರಿನ ಭಜನಾ ಮಂದಿರಕ್ಕೆ ಕರೆಸಿ ಊರಿನವರಿಗೆ ಕಲಿತು ಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತಿದ್ದರು.
ಮೃತರು ಪತ್ನಿ ಶ್ರೀಮತಿ ಚೆನ್ನಮ್ಮ, ಪುತ್ರರಾದ ಶ್ರೀನಿವಾಸ ಗೌಡ ಪರಮಲೆ, ತೀರ್ಥೇಶ್ ಪರಮಲೆ, ಪುತ್ರಿ ಶ್ರೀಮತಿ ಯೋಗಿತಾ ರಾಜೇಶ್ ಅಜ್ಜಿಮನೆ, ಸಹೋದರರಾದ ಪುರುಷೋತ್ತಮ ಗೌಡ ಪರಮಲೆ, ಈಶ್ವರ ಗೌಡ ಪರಮಲೆ, ಚಂದ್ರಶೇಖರ ಗೌಡ ಪರಮಲೆ, ಪೋಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ನೇತ್ರಕುಮಾರ್ ಪರಮಲೆ, ಸಹೋದರಿಯರಾದ ಶ್ರೀಮತಿ ಉಷಾ ಮಾಧವ ಗೌಡ ಅಂಬೆಕಲ್ಲು, ಶ್ರೀಮತಿ ವೇದಾವತಿ ಕೂಸಪ್ಪ ಗೌಡ ಕುತ್ಯಾಳ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.