ಸಮಾಜದ ಅಭಿವೃದ್ಧಿಗೆ ಉತ್ತಮ ಬರಹಗಳು ಅವಶ್ಯಕ : ಡಾ. ಉಮ್ಮರ್ ಬೀಜದಕಟ್ಟೆ

Advt_Headding_Middle
Advt_Headding_Middle

 

 

ಪರಸ್ಪರ ಮನುಷ್ಯ-ಮನುಷ್ಯರ ನಡುವೆ ಕಂದಕ ನಿರ್ಮಾಣವಾಗುತ್ತಿರುವ ಪ್ರಸಕ್ತ ಸನ್ನಿವೇಶಗಳಲ್ಲಿ ಉತ್ತಮ ಬರಹಗಳು ಮನುಷ್ಯ ಮನಸ್ಸುಗಳನ್ನು ಜೋಡಿಸುವುದರ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಡಾ. ಉಮ್ಮರ್ ಬೀಜದಕಟ್ಟೆ ಹೇಳಿದರು. ಅವರು
ನ. 28 ರಂದು ಹಾಸನದ ಮಾಣಿಕ್ಯ ಪ್ರಕಾಶನ ಮತ್ತು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಹಕಾರದಲ್ಲಿ ನಡೆದ 5ನೇ ರಾಜ್ಯ ‘ಕವಿ – ಕಾವ್ಯ ಸಂಭ್ರಮ – 2021’ರ ಅಧ್ಯಕ್ಷತೆ ವಹಿಸಿ ಮಾತನಾಡಿ,
ಸಾಹಿತಿಗಳು, ಮತ್ತು ಬರಹಗಾರರು ತಮ್ಮ ಬರಹಗಳ ಮೂಲಕ ಈ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಹಿತ್ಯ ಸಂಘಟಕರಾದ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು, ಕವಯತ್ರಿ ತುಮಕೂರಿನ ಹೇಮಾಲತಾ ನರಿಹಳ್ಳಿ ಪ್ರಾರ್ಥಿಸಿದರು. ಅರಸಿಕೆರೆಯ ಶಿಕ್ಷಕಿ ಮುತ್ತು ವಾಣಿ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ವಾಸು ಸಮುದ್ರವಳ್ಳಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.