ಎನ್ನೆಂಸಿ: ಯುವ ರೆಡ್ ಕ್ರಾಸ್ ಘಟಕದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Advt_Headding_Middle

 

 

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕಕ್ಕೆ 2021- 22 ನೇ ಸಾಲಿನಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ, ಕನ್ನಡ ಉಪನ್ಯಾಸಕರಾದ ಡಾ. ಅನುರಾಧಾ ಕುರುಂಜಿಯವರು ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಪದವಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಶುಭಹಾರೈಸಿದರು. ಕಳೆದ ವರ್ಷದ ಘಟಕ ನಾಯಕರಾದ ಕೃತಿಕಾ ಕೆ ಜೆ, ಗಗನ್, ಹಾಗೂ ನಿರ್ದೇಶಕರಾದ ಅಶ್ವಿತಾ ಬಿ ಸಿ, ಮೌನವಿ, ಅರ್ಪಣಾ, ಮೌನ, ತೃಪ್ತಿ ಹಾಗೂ ಹಿರಿಯ ರೆಡ್ ಕ್ರಾಸ್ ಸದಸ್ಯರು ಉಪಸ್ಥಿತರಿದ್ದರು. ಅಂತಿಮ‌ ಪದವಿ ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳು ವಿವಿಧ ವಿನೋದಾವಳಿಯ ಸ್ಪರ್ಧೆಗಳನ್ನು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ದ್ವಿತೀಯ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು. 2021-22 ನೇ ಸಾಲಿನ ಘಟಕ ನಾಯಕರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.