ಸುಬ್ರಹ್ಮಣ್ಯ: ಏಳು ಎಟಿಎಂಗಳಿದ್ದರೂ ಸಿಗುತ್ತಿಲ್ಲ ಹಣ

Advt_Headding_Middle
Advt_Headding_Middle

ಬ್ಯಾಂಕ್ ರಜೆ ಇದ್ದರಂತೂ ಹೇಳ ತೀರದು ಭಕ್ತರ ಪಾಡು

ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಯಿತು ಸುಬ್ರಹ್ಮಣ್ಯ ಎಟಿಎಂ ಸ್ಥಿತಿ

ಸುಬ್ರಹ್ಮಣ್ಯದಲ್ಲಿ ವಿವಿಧ ಬ್ಯಾಂಕ್‍ಗಳ ಏಳು ಎ ಟಿ ಎಂ ಗಳಿದ್ದರೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಸ್ಥಳೀಯರು ಹಣ ಸಿಗದೆ ಪರದಾಡುವ ಸ್ಥಿತಿ ಬಂದೊದಗಿದೆ.

ದೇಶದ ಪ್ರಖ್ಯಾತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ಮತ್ತು ನ.28 ರಂದು ಭಾರಿ ಪ್ರಮಾಣದ ಭಕ್ತರು ಆಗಮಿಸಿದ್ದರು. ಆದರೆ ಭಕ್ತರು ಎಲ್ಲಾ ಎಟಿಎಂಗಳಿಗೆ ತೆರಳಿದರೂ ಹಣ ಸಿಗದೆ ಪರದಾಡಿದರು. ಇದು ಇಂದು ನಿನ್ನೆಯ ಪರಿಸ್ಥಿತಿ ಅಲ್ಲ. ಕಳೆದ ಎರಡು ತಿಂಗಳಿನಿಂದ ಇದೇ ಪರಿಸ್ಥಿತಿಯಿದ್ದು ಇದು ಸರಿಯಾಗುವ ಲಕ್ಷಣ ಗೋಚರಿಸಿಲ್ಲ. ಇಲ್ಲಿರುವ ಎರಡ್ಮೂರು ಎಟಿಎಂ ಗಳಲ್ಲಿ ಹಣ ಬಾರದೆ ತಿಂಗಳಾಯ್ತು ಆದರೆ ದುರಸ್ತಿ ಕಂಡಿಲ್ಲ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.