ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನೂತನ ಲಯನ್ಸ್ ಕ್ಲಬ್ ಉದ್ಘಾಟನೆ

Advt_Headding_Middle
Advt_Headding_Middle

ಲಯನ್ಸ್ ಕ್ಲಬ್ ಗುತ್ತಿಗಾರುನಿಂದ ಪ್ರವರ್ತಿಸಲ್ಪಟ್ಟ ಈ ಸಾಲಿನ ೭ನೇ ನೂತನ ಸಂಸ್ಥೆ, ಲಯನ್ಸ್ ಕ್ಲಬ್ ಕುಕ್ಕೇ ಸುಬ್ರಹ್ಮಣ್ಯ ಇದರ ಉದ್ಘಾಟನಾ ಹಾಗೂ ಪದಗ್ರಹಣ ಕಾರ್ಯಕ್ರಮವು ಕುಕ್ಕೇ ಸುಬ್ರಹ್ಮಣ್ಯದ ಮಹಾಮಾಯಿ ರೆಸಿಡೆನ್ಸಿ ಸಭಾಭವನದಲ್ಲಿ ನ.29 ರಂದು ಜರುಗಿತು.


ಲಯನ್ಸ್ ರಾಜ್ಯಪಾಲರಾದ ವಸಂತಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ಪ್ರಥಮ ಮಹಿಳೆ ಡಾ ದಿವ್ಯ ವಸಂತ್ ರವರಿಂದ ಉದ್ಘಾಟಿಸಲ್ಪಟ್ಟು ನೂತನ ಕ್ಲಬ್ ನ Banner, charter ಬಿಡುಗಡೆ ಹಾಗೂ Pin ವಿತರಣೆ ಮಾಡಿ ರಾಜ್ಯಪಾಲರು ಶುಭಹಾರೈಸಿದರು. ಇವುಗಳನ್ನು ಕೊಡುಗೆಯಾಗಿ ನೀಡಿದ ಜಿಲ್ಲಾ ರಾಜ್ಯಪಾಲರ Programme Coordinater ಭಾರತಿ ಬಿ ಎಂ ರವರು ಈ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡರು.
ನೂತನ ಕ್ಲಬ್‌ನ ಅಧ್ಯಕ್ಷರಾಗಿ ಪ್ರೊ ರಂಗಯ್ಯ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಸತೀಶ್ ಕೂಜುಗೋಡು ಹಾಗೂ ಕೋಶಾಧಿಕಾರಿಯಾಗಿ ರಾಮಚಂದ್ರ ಪಳಂಗಾಯ ರವರು ಪದಗ್ರಹಣಗೊಂಡರು.


ಲಯನ್ಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಜಯರಾಂ ದೇರಪ್ಪಜ್ಜನಮನೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿಯನ್ನು ದ್ವಿತೀಯ ಉಪ ರಾಜ್ಯಪಾಲರಾದ ಡಾ. ಮೆಲ್ವಿನ್ ಡಿಸೋಜಾ ರವರು ಭೋದಿಸಿದರು. ನೂತನ ಪದಾಧಿಕಾರಿಗಳಿಗೆ ಪದಗ್ರಹಣವನ್ನು ಜಿಲ್ಲಾ ರಾಜ್ಯಪಾಲರಾದ ವಸಂತಕುಮಾರ್ ಶೆಟ್ಟಿಯವರು ನೆರವೇರಿಸಿ ಶುಭಹಾರೈಸಿದರು. ರಾಜ್ಯಪಾಲರೊಂದಿಗೆ ನಿಕಟಪೂರ್ವ ರಾಜ್ಯಪಾಲರಾದ ಡಾ, ಗೀತಪ್ರಕಾಶ್ ಹಾಗೂ ಮಾಜಿ ರಾಜ್ಯಪಾಲರಾದ ಎಂ ಬಿ ಸದಾಶಿವ ರವರು ಜೊತೆಯಾಗಿ Gaval ನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭಹಾರೈಸಿದರು.
ಜಿಲ್ಲಾ ಸಂಪುಟ ಕಾರ್ಯದರ್ಶಿ ಶಶಿಧರ್ ಮಾರ್ಲ, Extesion Chairman ನಿತ್ಯಾನಂದ ಮುಂಡೋಡಿ, ಗೈಡಿಂಗ್ ಲಯನ್ ಭರತ್ ಮುಂಡೋಡಿ ಶುಭಾಶಂಸನೆಗೈದು, ಜಿಲ್ಲಾ ಸಂಪುಟ ಖಜಾಂಜಿ ಶ್ರೀನಿವಾಸ್ ಪೂಜಾರಿ, ರಾಜ್ಯಪಾಲರ ಜಿಲ್ಲಾ ಸಂಪುಟದ ಮುಖ್ಯ ಸಂಯೋಜಕ ದಾಮೋದರ್ ಬಿ ಎಂ, ಜಿಲ್ಲಾ ಲಿಯೋ ಅಧ್ಯಕ್ಷ ಕವನ್ ಕುಬೆವೂರ್ Dist GLT Head ಪ್ರೀತಂ ಪೊನ್ನಪ್ಪ ಪ್ರಾಂತೀಯ ಅಧ್ಯಕ್ಷ ಹೇಮನಾಥ್ ಶೆಟ್ಟಿ ಕಾವು, ವಲಯಾಧ್ಯಕ್ಷ ವೆಂಕಪ್ಪ ಕೇನಾಜೆ ಗುತ್ತಿಗಾರು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಕುಶಾಲಪ್ಪ ಟಿ ಖಜಾಂಜಿ ನವೀನ್ ಬಾಳುಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಾಂತ್ಯದ ಇತರೇ ಕ್ಲಬ್ ಗಳ ಅಧ್ಯಕ್ಷರುಗಳು, ಸದಸ್ಯರುಗಳು ಭಾಗವಹಿಸಿದ್ದರು.


ಕ್ಲಬ್ ನ ಸೇವಾ ಕಾರ್ಯಕ್ರಮಗಳ ಮೊದಲ ಹೆಜ್ಜೆಯಾಗಿ ಸುಬ್ರಹ್ಮಣ್ಯದಲ್ಲಿ ಆರಂಭಿಸಲಾಗುತ್ತಿರುವ ನೂತನ ಅಂಬ್ಯುಲೆನ್ಸ್ ಸೇವೆಗೆ ರೂ 150000/- ಗಳ ಕೊಡುಗೆ, ಕ್ಯಾನ್ಸರ್ ಪೀಡಿತ ಬಡ ರೋಗಿಯೊಬ್ಬರಿಗೆ ರೂ 10000/- ಕೊಡುಗೆ ಹಾಗೂ ಖ್ಯಾತ ಪಶುವೈದ್ಯಾಧಿಕಾರಿ ಡಾ ವೆಂಕಟಾಚಲಪತಿ ಯವರಿಗೆ ಸನ್ಮಾನ ನೆರವೇರಿಸಲಾಯಿತು. ನೂತನ ಕ್ಲಬ್ ನ ಆರಂಭಕ್ಕೆ ಕಾರಣಕರ್ತ ಹಾಗೂ ಸಹಕರಿಸಿದ ಪ್ರತಿಯೊಬ್ಬರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮೊದಲಾರ್ಧದ ಅಧ್ಯಕ್ಷತೆ ವಹಿಸಿದ್ದ ಗುತ್ತಿಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಿಜೋ ಜೋಸ್ ಸರ್ವರನ್ನು ಸ್ವಾಗತಿಸಿ, ದ್ವಿತಿಯಾರ್ಧದಲ್ಲಿ ನೂತನ ಕ್ಲಬ್ ನ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್ ರವರು ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿ ಸತೀಶ್ ಕೂಜುಗೋಡು ಧನ್ಯವಾದವಿತ್ತರು. ಸೌಜನ್ಯ ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಸುಳ್ಯ ಲಯನ್ಸ್ ಕ್ಲಬ್ ನ ರೂಪಶ್ರೀ ಜೆ ರೈ ವೀಣಾ ಪ್ರಸಾದ್ ಸಹಕರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಅಭಿವ್ಯಕ್ತಿಗೊಳಿಸಲಾದ ನೃತ್ಯ ಕಾರ್ಯಕ್ರಮಗಳು, ಕೊನೆಯಲ್ಲಿ ಸಂಗೀತ ರಸಮಂಜರಿ ಹಾಗೂ ಎಲ್ಲರ ಧ್ವನಿ ಹಾಗೂ ಚಿತ್ರಪರಿಚಯ ಸಹಿತ ಬಹುತೇಕ ಕಾರ್ಯಕ್ರಮಗಳು LED ಪರದೆಯ ಮೂಲಕ ಹರಿದು ಬಂದದ್ದು ಒಟ್ಟು ಕಾರ್ಯಕ್ರಮದ Highlight ಆಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.