ತಲೆಯೆತ್ತಿ ನಡೆಯುವಂತಹ ಗೆಲುವು ತಂದು ಕೊಡಿ

Advt_Headding_Middle
Advt_Headding_Middle

ಕಾಂಗ್ರೆಸ್ ಕಾರ್ಯಕರ್ತರೊಡನೆ ಮಂಜುನಾಥ ಭಂಡಾರಿ ವಿನಂತಿ


ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ತಲೆಯೆತ್ತಿ ನಡೆಯುವಂತಹ ರೀತಿಯ ಜಯ ತಂದುಕೊಡಬೇಕೆಂದು ಅಭ್ಯರ್ಥಿ ಮಂಜುನಾಥ್ ಭಂಡಾರಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ವಿನಂತಿ ಮಾಡಿಕೊಂಡಿದ್ದಾರೆ.
ಇಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ” ನಾನು ಸ್ಥಳೀಯ ಸಂಸ್ಥೆಗಳ ವಿಚಾರವಾಗಿ ಅಧ್ಯಯನ ನಡೆಸಿ ಪಂಚಾಯತ್ ಗಳನ್ನು ಯಾವ ರೀತಿ ಸಬಲೀಕರಣಗೊಳಿಸಬೇಕೆಂಬ ವರದಿಯನ್ನು ಸರಕಾರಕ್ಕೆ ನೀಡಿದ್ದೆ. ಈ ಹಿಂದೆ ಯು.ಪಿ.ಎ. ಸರಕಾರ ಇರುವಾಗ ಬಂದ ಸಾಮಾನ್ಯ ಸೇವಾ ಕೇಂದ್ರದ ಕಲ್ಪನೆಯು ನನ್ನ ರಾಜೀವ್ ವಿಕಾಸ ಯೋಜನೆಯ ವರದಿಯ ಪರಿಣಾಮವಾಗಿತ್ತು. ಗ್ರಾಮ ಸ್ವರಾಜ್ ವಿಚಾರವಾಗಿ ನಡೆಸಿದ ಅಧ್ಯಯನಕ್ಕಾಗಿ ನನಗೆ ಎಂ.ಫಿಲ್ ಮತ್ತು ಪಿ.ಎಚ್.ಡಿ. ಲಭಿಸಿದೆ” ಎಂದು ಹೇಳಿದ ಮಂಜುನಾಥ ಭಂಡಾರಿಯವರು, ” ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ಕೆಲವು ಮತಗಳು ಕಡಿಮೆ ಇವೆ. ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲ್ಲಬಹುದು. ಆದರೆ ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಗೆದ್ದು ಕಾಂಗ್ರೆಸ್ ಪಕ್ಷವು ತಲೆಯೆತ್ತಿ ನಿಲ್ಲುವಂತೆ ಕಾರ್ಯಕರ್ತರು ಮಾಡಬೇಕು ” ಎಂದು ಅವರು ವಿನಂತಿಸಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ” ಇತರ ಎಲ್ಲ ಅಭ್ಯರ್ಥಿಗಳಿಗಿಂತ ಅತ್ಯುತ್ತಮ ಅಭ್ಯರ್ಥಿ ಕಾಂಗ್ರೆಸ್ ನ ಮಂಜುನಾಥ ಭಂಡಾರಿಯವರು. ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಪಿಎಚ್ ಡಿ ಪಡೆದಿರುವ ಅವರು ಗೆದ್ದರೆ ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸದಿಕ್ಕು ತೋರಿಸಬಲ್ಲರು ” ಎಂದು ಹೇಳಿದರು.


ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ನಿತ್ಯಾನಂದ ಮುಂಡೋಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ನವೀನ್ ಭಂಡಾರಿ, ಧನಂಜಯ ಅಡ್ಪಂಗಾಯ, ಪಿ.ಎಸ್. ಗಂಗಾಧರ್, ಎಂ.ವೆಂಕಪ್ಪಗೌಡ, ನಂದಕುಮಾರ್, ಕೃಷ್ಣಪ್ಪ ಪೆರಿಯಡ್ಕ, ಅಪ್ಪಿ, ಚಂದ್ತಕಲಾ, ಕೃಷ್ಣಪ್ರಸಾದ್ ಆಳ್ವ , ಬೊಂಡಾಲ ಚಿತ್ತರಂಜನ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.