ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸೈಬರ್ ಕ್ರೈಮ್ ಮಾಹಿತಿ ಕಾರ್ಯಕ್ರಮ

Advt_Headding_Middle

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಆರಕ್ಷಕಠಾಣೆಯ ಸಹಯೋಗದೊಂದಿಗೆ ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ಸಂವಾದ ಕಾರ್ಯಕ್ರಮ ನಡೆಯಿತು. ಬೆಳ್ಳಾರೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮಕ್ಕಳಿಗೆ ಮಾಹಿತಿಯನ್ನು ಸವಿವರವಾಗಿ ನೀಡಿದ್ದಲ್ಲದೆ ಜೀವನ ನಿರ್ವಹಣೆಯ ಕೌಶಲ, ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರೌಢಶಾಲಾ ಹಂತದಲ್ಲೇ ಮಾಡಬೇಕಾದ ಸಿದ್ಧತೆಗಳ ಅಗತ್ಯತೆಯನ್ನು ವಿವರಿಸುತ್ತಾ ಅಂಕಗಳಿಕೆಯೊಂದನ್ನೇ ಪರಮಲಕ್ಷ್ಯವಾಗಿರಿಸದೆ ಶಾಶ್ವತವಾಗಿ ಉಳಿಯಬಲ್ಲ ಜ್ಞಾನಸಂಪಾದನೆಯೇ ಗುರಿಯಾಗಿರಲಿ ಅದಕ್ಕೆ ಮಾರ್ಗದರ್ಶಕರಾಗಿ ಗುರುವೃಂದದವರಿದ್ದಾರೆ ಎಂದರು.
ಠಾಣಾ ಸಿಬ್ಬಂದಿ ಕು.ಪ್ರಿಯದರ್ಶಿನಿಯವರು ಸೈಬರ್ ಕ್ರೈಮ್ ನ ವಿಧಗಳು ಅದರ ಗಂಭೀರತೆ, ವಿದ್ಯಾರ್ಥಿಗಳು ಅಂತರ್ಜಾಲ ಬಳಕೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಜಾಗರೂಕತೆಯನ್ನು ವಿವರಿಸಿದರು. ಫೋಕ್ಸೋ ಕಾಯಿದೆಯ ಪರಿಚಯ ಮತ್ತು ಸುತ್ತುಮುತ್ತಲಿನ ಪರಿಸರದಲ್ಲಿ ಸಂಭವಿಸಬಹುದಾದ ದುರ್ಘಟನೆಗಳಿಂದ ಹೊರತಾಗಿರಬೇಕಾದ ಅನಿವಾರ್ಯತೆಯನ್ನು ತಿಳಿಸಿದರು. ಠಾಣಾ ಸಿಬ್ಬಂದಿಗಳಾದ ಮೋಹನ್ ಮತ್ತು ಪ್ರವೀಣ್ ಸಹಕರಿಸಿದರು. ಸಂವಾದದ ನಡುವೆ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕಬಹುಮಾನವನ್ನು ಠಾಣಾಧಿಕಾರಿಗಳು ವಿತರಿಸಿದರು. ಶಾಲಾಮುಖ್ಯಗುರುಗಳಾದ ಯಶೋಧರ ನಾರಾಲು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್ ಉಳುವಾನ ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಉದಯಕುಮಾರ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.