ಸುಳ್ಯ ಹೆಚ್.ಡಿ.ಎಫ್.ಸಿ. ಬ್ಯಾಂಕ್ ನಲ್ಲಿ ಡಿಪಾಸಿಟ್ ಮೆಷಿನ್ ಶುಭಾರಂಭ

Advt_Headding_Middle

ಸುಳ್ಯ ಮುಖ್ಯ ರಸ್ತೆಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಹೆಚ್. ಡಿ.ಎಫ್.ಸಿ. ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಡಿಪಾಸಿಟ್ ಮೆಷಿನ್ ಇಂದು ಶುಭಾರಂಭಗೊಂಡಿತು.
ಬ್ಯಾಂಕ್‌ ನ ಹಿರಿಯ ಗ್ರಾಹಕರಾದ ಮನೀಷ್ ಬಾಬು ಗೌಡ ರಿಬ್ಬನ್ ಕತ್ತರಿಸಿ ನೂತನ ಮೆಷಿನ್ ನ್ನು ಲೋಕಾರ್ಪಣೆಗೊಳಿಸಿದರು.ಸುದ್ದಿ ಬಿಡುಗಡೆ ವರದಿಗಾರ ರಮೇಶ್‌ ನೀರಬಿದಿರೆ ಅತಿಥಿಯಾಗಿದ್ದರು. ಬ್ಯಾಂಕ್ ನ ಮನೇಜರ್ ವಿಶ್ವನಾಥ ಜೋಯಪ್ಪ ನಿಡ್ಯಮಲೆ ಉಪಸ್ಥಿತರಿದ್ದರು.
ಸುಳ್ಯ ನಗರದಲ್ಲಿ ಡಿಪಾಸಿಟ್ ಮೆಷಿನ್ ಅಳವಡಿಸಿದ ದ್ವಿತೀಯ ಶಾಖೆ ಇದಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ಗಂಟೆ ವರೆಗೆ ಬ್ಯಾಂಕ್ ಶಾಖೆಗೆ ಈ ಮೆಷಿನ್ ಮೂಲಕ ಹಣ ಡಿಪಾಸಿಟ್ ಮಾಡಬಹುದಾಗಿದೆ. ತಮ್ಮ ಎಕೌಂಟ್ ನಂಬರ್ ಹಾಕಿ,ಮೊಬೈಲ್ ನಂಬರ್ ಬಳಸಿ ಕರೆಂಟ್ ಅಕೌಂಟ್ ನಲ್ಲಿ 6 ಲಕ್ಷದವರೆಗೆ,ಉಳಿತಾಯ ಖಾತೆಯಲ್ಲಿ 2 ಲಕ್ಷದ ವರೆಗೆ ಜಮೆ ಮಾಡಬಹುದು ಎಂದು ಮನೇಜರ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.