ಬೊಳುಬೈಲು: ಸ್ನೇಹ ಸ್ತ್ರೀಶಕ್ತಿ ಸಂಘದ ವತಿಯಿಂದ ಮಕ್ಕಳ ದಿನಾಚರಣೆ – ಸನ್ಮಾನ

Advt_Headding_Middle

 

ಜಾಲ್ಸೂರು ಗ್ರಾಮದ ಬೊಳುಬೈಲು ಸ್ನೇಹ ಸ್ತ್ರೀಶಕ್ತಿ ಸಂಘದ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಬೊಳುಬೈಲು ಅಂಗನವಾಡಿ ಕೇಂದ್ರದಲ್ಲಿ ನ.30ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ವೇದಾ ಶೆಟ್ಟಿ ನೆಕ್ರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೊಳುಬೈಲು ನವಚೇತನ ಯುವಕ ಮಂಡಲದ ಅಧ್ಯಕ್ಷ ಸುಧೀರ್ ನೆಕ್ರಾಜೆ, ಶಿಕ್ಷಕಿ ಶ್ರೀಮತಿ ಖದೀಜ ಇಬ್ರಾಹಿಂ ಕುಂಬರ್ಚೋಡು, ಬ್ಲಾಕ್ ಸೊಸೈಟಿ ಸದಸ್ಯೆ ಶ್ರೀಮತಿ ಪ್ರಸನ್ನ ಕುಮಾರಿ ನೆಕ್ರಾಜೆ, ಹಿರಿಯರಾದ ಶ್ರೀಮತಿ ಲಕ್ಷ್ಮಿ, ಮಕ್ಕಳ ಪೋಷಕರಾದ ಶ್ರೀಮತಿ ಸವಿತ ಮದಿಯಲಗನ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಬೇಬಿ ವಿಶ್ವನಾಥ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ ಡ್ರಾಯಿಂಗ್, ಅಭಿನಯ, ಛದ್ಮವೇಷ ಸ್ಪರ್ಧೆಗಳನ್ನು ನಡೆಸಿ, ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನವನ್ನು ಪೋಷಕರಾದ ಶ್ರೀಮತಿ ಸವಿತ ಮದಿಯಲಗನ್ ಅವರು ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯೆ ಶ್ರೀಮತಿ ಸುಮಾ ಸತೀಶ್ ರೈ ದಂಪತಿಗಳ ಪುತ್ರಿ , ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 558 ಅಂಕ ಪಡೆದ ಸಿಂಚನ ರೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ನೇಹ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು, ಮಕ್ಕಳ ಪೋಷಕರು, ಅಂಗನವಾಡಿ ಬಾಲವಿಕಾಸ ಸಮಿತಿಯ ಪದಾಧಿಕಾರಿಗಳು, ಅಂಗನವಾಡಿ ಪುಟಾಣಿಗಳು, ಅಂಗನವಾಡಿ ಸಹಾಯಕಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಶ್ರೀಮತಿ ವೇದಾ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಆಶಾ ಗಣೇಶ್ ರೈ ವಂದಿಸಿದರು. ಶ್ರೀಮತಿ ಪ್ರಸನ್ನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.