ನಾಳೆ ನಗರ ಪಂಚಾಯತ್ ನಲ್ಲಿ ಡಯಾಬಿಟಿಸ್, ರಕ್ತದೊತ್ತಡ, ಬಾಯಿಮತ್ತು ಒಸಡು ರೋಗ ಗಳ ಉಚಿತ ಪರೀಕ್ಷೆ

Advt_Headding_Middle

 

ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪರಿದಂತ ವಿಭಾಗದ ಆಶ್ರಯದಲ್ಲಿ ನಗರಪಂಚಾಯತ್ ಸುಳ್ಯ ಇವರ ಸಹಯೋಗದಲ್ಲಿ ಇಂಡಿಯನ್ ಸೊಸೈಟಿ ಆಫ್ ಪೆರಿಯೋಡಾಂಟಾಲಜಿ ISP ಇವರ ಸಹಭಾಗಿತ್ವದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ನಾಳೆ ನಗರ ಪಂಚಾಯತ್ ನಲ್ಲಿ ಆಯೋಜಿಸಲಾಗಿದೆ.

ಮಧುಮೇಹ (ಡಯಾಬಿಟೀಸ್ ) ರಕ್ತಪರೀಕ್ಷೆ , ರಕ್ತದೊತ್ತಡ ಪರೀಕ್ಷೆ ಮತ್ತು ಬಾಯಿ ಹಾಗೂ ಒಸಡು ರೋಗ ಗಳ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು.
ಸುಳ್ಯ ನಗರ ಪಂಚಾಯತ್ ಸಭಾಭವನದಲ್ಲಿ ನಾಳೆ ದ. 3 ರಂದು ಬೆಳಿಗ್ಗೆ 10.30 ರಿಂದ ತಪಾಸಣೆ ಆರಂಭಿಸಲಿದ್ದು,
ಆಸಕ್ತ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೆ.ವಿ.ಜಿ. ಡೆಂಟಲ್ ಕಾಲೇಜ್ ಪ್ರಾಚಾರ್ಯರಾದ ಡಾ.ಮೋಕ್ಷಾ ನಾಯಕ್ ಮತ್ತು ಪರಿದಂತ ವಿಭಾಗ ಮುಖ್ಯಸ್ಥ ಡಾ.ಎಂ.ಎಂ.ದಯಾಕರ್ ವಿನಂತಿಸಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.