ಜೇಸಿಐ ಬೆಳ್ಳಾರೆ ವತಿಯಿಂದ ರಂಗಪರಿಕರ ತರಬೇತಿ ಮತ್ತು ಬೀದಿನಾಟಕ ಕಾರ್ಯಗಾರ

Advt_Headding_Middle

 

 

ಜೇಸಿಐ ಬೆಳ್ಳಾರೆ ನಿರ್ಮಾಣದ ಜ್ಯೂನಿಯರ್ ಜೇಸಿಯ ಹೆಜ್ಜೆ ಬದಲಾದಾಗ ಕಿರುಚಿತ್ರ ತಂಡಕ್ಕೆ ರಂಗಪರಿಕರ ಮತ್ತು ಬೀದಿ ನಾಟಕ ತರಬೇತಿ ಕಾರ್ಯಗಾರವು ದಿನಾಂಕ ನ. 26 ರಂದು ಉದ್ಘಾಟನೆಗೊಂಡಿತು.
ಒಟ್ಟು ಐದು ದಿನಗಳ ಕಾಲ ನಡೆಯುವ ಈ ತರಬೇತಿಯ ಉದ್ಘಾಟನೆಯನ್ನು ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷರು ಉದ್ಯಮಿಗಳು ಆಗಿರುವ ಮಿಥುನ್ ಶೆಣೈ ತಮಟೆ ಬಾರಿಸುವುದರ ಮೂಲಕ ನೆರವೇರಿಸಿದರು.
ಅವರು ಮಾತಾನಾಡುತ್ತಾ ಹೆಜ್ಜೆ ಬದಲಾದಾಗ ಕಿರುಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು ಜನರಿಗೆ ಕ್ಷಯರೋಗದ ಬಗ್ಗೆ ಸಂಪೂರ್ಣ ಕಾಲಾಜಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಸಾರಿದೆ ಪ್ರತಿಯೊಬ್ಬ ವ್ಯಕ್ತಿಯು ನೋಡಲೇ ಬೇಕಾದ ಕಿರುಚಿತ್ರ ಇದಾಗಿದೆ ಇದರ ಹಿಂದೆ ಮುಂದೆ ದುಡಿದಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಲೇ ಬೇಕು ಜೊತೆಗೆ ಮುಂದೆ ನಡೆಯಲಿರುವ ಬೀದಿ ನಾಟಕ ಕಾರ್ಯಗಾರವು ಯಶಸ್ವಿಯಾಗಿ ಮುನ್ನಡೆದು ಸಮಾಜದ ಬದಲಾವಣೆಗೆ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅಥಿತಿ ರಂಗಕರ್ಮಿ ಕೃಷ್ಣಪ್ಪ ಬಂಬಿಲರವರು ರಂಗತರಬೇತಿಯ ಬಗ್ಗೆ ಮಾಹಿತಿ ನೀಡಿದರು.
ನಿಯೋಜಿತ ಅಧ್ಯಕ್ಷರಾದ ನಿರ್ಮಲ ಜಯರಾಮ್ ಉಮಿಕಳರವರು ರಂಗಕಾರ್ಯಗಾರಕ್ಕೆ ಶುಭ ಹಾರೈಸಿದರು ಜೇಸಿಐ ಬೆಳ್ಳಾರೆ ಇದರ ಅಧ್ಯಕ್ಷರಾದ ಪದ್ಮನಾಭ ಕಲಾಸುಮ ರವರು ಮಾತಾಡಿ ರಂಗ ಕಾರ್ಯಗಾರವು ಕಿರುಚಿತ್ರದ ಸದಸ್ಯರ ಮೂಲಕ ಮತ್ತೆ ಜನರ ಸಾಮಾಜಿಕ ಬದಲಾವಣೆಗೆ ಹೆಜ್ಜೆ ಇಟ್ಟಿದೆ ಎಲ್ಲರ ಹೆಜ್ಜೆಯೂ ಸಾಮಾಜಿಕ ಬದಲಾವಣೆಗೆ ಸಹಕಾರಿಯಾಗಲಿದೆ ಎಂದು ಶುಭಹಾರೈಸಿದರು ಜೇಸಿಯ ನಿಯೋಜಿತ ಕಾರ್ಯದರ್ಶಿಗಳಾದ ಶಿವಕುಮಾರ್ ರೈ ಮಣಿಕಾರ ವೇದಿಕೆಗೆ ಬರಮಾಡಿಕೊಂಡರು, ಜೇಜೆಯ ಸದಸ್ಯರಾದ ಲೀಸಾ ತಾವೂರು ಜೇಸಿವಾಣಿ ಓದಿದರು ಜ್ಯೂನೀಯರ್ ಜೇಸಿಯ ಅಧ್ಯಕ್ಷರಾದ ಚಿರಶ್ರೀ ಹರಿಹರಪಲ್ಲತಡ್ಕ ವಂದಿಸಿದರು ಕಾರ್ಯಕ್ರಮದಲ್ಲಿ ಕಿರುಚಿತ್ರ ನಟನಟಿಯರಾದ ರವಿ ಎಂ ಪೆರ್ಲಂಪಾಡಿ ಸಾಗರ್ ಬೆಳ್ಳಾರೆ, ಮಧುಶ್ರೀ ಐವಾರ್ನಾಡು ,ಚೈತನ್ಯ ಕಾಲೋನಿ ಧನ್ಯಶ್ರೀ ಐವಾರ್ನಾಡು ಜಯಶ್ರೀ ನೆಟ್ಟಾರು ವೀಕ್ಷಾ ನೆಟ್ಟಾರು ಜೀವನ್ ಕೊಳಂಬಳ, ಸರಿತಾ ಕುಂಡಡ್ಕ, ಸಶ್ಮಿತಾ ಸೋಣಂಗೇರಿ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.