Breaking News

ಭಾಸ್ಕರ ಕಾರಿಂಜ ಸೇನೆಯಿಂದ ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 

ಡಿ.5 ರಂದು ಹುಟ್ಟೂರಿಗೆ ಆಗಮನ
ಕನಕಮಜಲು ಗ್ರಾಮದ ಭಾಸ್ಕರ ಕಾರಿಂಜರವರು ಅರೆಸೇನಾ ಪಡೆಯ ಸೆಂಟ್ರಲ್ ರಿಸರ್ವ್‌ಡ್ ಪೋಲಿಸ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿ ಡಿ. 1 ರಂದು ನಿವೃತ್ತರಾಗಿದ್ದಾರೆ.
ಇವರು ೨೦೦೦ನೇ ಇಸವಿಯಲ್ಲಿ ಬೆಂಗಳೂರಿನ ಯಲಹಂಕದಲ್ಲಿ ಸೇನೆಗೆ ಸೇರ್ಪಡೆಗೊಂಡು, ನಂತರ ಮಧ್ಯಪ್ರದೇಶದಲ್ಲಿ ಆರ್‌ಟಿಸಿ -೧ ನಲ್ಲಿ ಬೇಸಿಕ್ ಟ್ರೈನಿಂಗ್ ಪಡೆದು, ಜಮ್ಮುಕಾಶ್ಮೀರ, ಅಸ್ಸಾಂ, ನಾಗಾಲ್ಯಾಂಡ್, ಉತ್ತರ ಪ್ರದೇಶ, ಮಣಿಪುರ, ನಕ್ಸಲ್ ಪೀಡಿತ ಪ್ರದೇಶವಾದ ಜಾರ್ಖಾಂಡ್ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದರು. ೨೦೧೭ರಲ್ಲಿ ಮಣಿಪುರದಿಂದ ಹವಾಲ್ದಾರ್ ಆಗಿ ನಕ್ಸಲ್ ಪೀಡಿತ ಪ್ರದೇಶ ಜಾರ್ಖಂಡ್‌ಗೆ ವರ್ಗಾವಣೆಗೊಂಡಿದ್ದರು. ಜಾರ್ಖಂಡಿನಲ್ಲಿ ನಾಲ್ಕೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದಾರೆ.
ಭಾಸ್ಕರ ಕಾರಿಂಜರವರು ಕನಕಮಜಲು ಗ್ರಾಮದ ಬಾಲಕೃಷ್ಣ ಗೌಡ ಕಾರಿಂಜ ಮತ್ತು ಶೇಷಮ್ಮ ದಂಪತಿಗಳ ಪುತ್ರ. ಭಾಸ್ಕರರವರ ಪತ್ನಿ ಆರತಿ ಎಂ. ಮಂಗಳೂರಿನಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಪುತ್ರ ಚಿರಾಗ್ ಅಡ್ಯಾರ್ ಪದವು ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ೧ನೇ ತರಗತಿ ವಿದ್ಯಾರ್ಥಿ. ಪುತ್ರಿ ಮಾನ್ಯ ಆರನೇ ತರಗತಿ ವಿದ್ಯಾರ್ಥಿ. ಪ್ರಸ್ತುತ ಮಂಗಳೂರಿನ ಅಡ್ಯಾರ್ ಪದವುನಲ್ಲಿ ವಾಸ್ತವ್ಯವಿದ್ದಾರೆ.
ಡಿಸೆಂಬರ್ ೫ರಂದು ಹುಟ್ಟೂರು ಕನಕಮಜಲಿಗೆ ಆಗಮನ
ಸೇನೆಯಿಂದ ನಿವೃತ್ತಿಗೊಂಡ ಭಾಸ್ಕರ ಕಾರಿಂಜರವರು ಡಿ. ೫ರಂದು ಹುಟ್ಟೂರು ಕನಕಮಜಲಿಗೆ ಆಗಮಿಸಲಿದ್ದು, ಅಂದು ತನ್ನ ಆದಿ ಮನೆಯಲ್ಲಿ ನಡೆಯುವ ಸತ್ಯನಾರಾಯಣ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.